ಬಾರಿ ಮಳೆಯಿಂದಾಗಿ ವರುಣ ಕೆರೆ ಏರಿಯ ರಸ್ತೆ ಬಿರುಕು.

ಬಾರಿ ಮಳೆಯಿಂದಾಗಿ ವರುಣ ಕೆರೆ ಏರಿಯ ರಸ್ತೆ ಬಿರುಕು.

260
0
SHARE

ಬಾರಿ ಮಳೆಯಿಂದಾಗಿ ವರುಣ ಕೆರೆ ಏರಿಯ ರಸ್ತೆ ಬಿರುಕು.

ಮೈಸೂರು, ಅ.12, 2017 : ಮಂಗಳವಾರ ರಾತ್ರಿಯಿಡೀ ಮೈಸೂರು ಜಿಲ್ಲೆಯಾದ್ಯಂತ ಭಾರೀ ಮಳೆ ಸುರಿದಿರುವದರಿಂದ ನಗರದ ಹೊರವಲಯದಲ್ಲಿರುವ ವರುಣ ಕೆರೆ ಏರಿಯ ಮೇಲ್ಭಾಗದ ರಸ್ತೆಯಲ್ಲಿ ಬಿರುಕು ಕಾಣಿಸಿಕೊಂಡಿದೆ.

ಮೈಸೂರು ಟಿ. ನರಸೀಪುರ ಮುಖ್ಯ ರಸ್ತೆಯಲ್ಲಿರುವ ವರುಣ ಕೆರೆ ಏರಿಯ ಮೇಲ್ಭಾಗದ ರಸ್ತೆಯಲ್ಲಿ ಉದ್ದನೆಯ ಬಿರುಕು ನಿರ್ಮಾಣವಾಗಿದ್ದು. ಸ್ಥಳಕ್ಕೆ ಸಂಬಂಧಪಟ್ಟ ಇಲಾಖೆಯ ಹಿರಿಯ ಅಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲನೆ ಮಾಡಿದರು. ರಸ್ತೆ ಕುಸಿಯುವ ಆತಂಕದಿಂದ ವರುಣ ಗ್ರಾಮ ಸೇರಿದಂತೆ ವರುಣ ಕೆರೆಯ ತಗ್ಗು ಪ್ರದೇಶಗಳಲ್ಲಿರುವ ಗ್ರಾಮಗಳ ಜನರಲ್ಲೂ ಭಯದ ವಾತಾವರಣ ಮೂಡಿದೆ.

ವರುಣ ಕೆರೆಯು ಸನ್ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿನಿಧಿಸುತ್ತಿರುವ ವರುಣ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿದೆ.

NO COMMENTS

LEAVE A REPLY