ಸುಪಾರಿ ಕಿಲ್ಲರ್ಸ್’ಗಳಿಂದಲೇ ಗೌರಿಲಂಕೇಶ್ ಹತ್ಯೆ; ಮೀರಾ ಸೆಕ್ಸೆನಾ ಹೇಳಿಕೆ.

ಸುಪಾರಿ ಕಿಲ್ಲರ್ಸ್’ಗಳಿಂದಲೇ ಗೌರಿಲಂಕೇಶ್ ಹತ್ಯೆ; ಮೀರಾ ಸೆಕ್ಸೆನಾ ಹೇಳಿಕೆ.

226
0
SHARE

ಸುಪಾರಿ ಕಿಲ್ಲರ್ಸ್’ಗಳಿಂದಲಲೇ ಗೌರಿಲಂಕೇಶ್ ಹತ್ಯೆ; ಮೀರಾ ಸೆಕ್ಸೆನಾ ಹೇಳಿಕೆ.

ಬೆಂಗಳೂರು (ಅ.11.2017): ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯನ್ನು ಸುಪಾರಿ ಕಿಲ್ಲರ್ಸ್’ಗಳೇ ಮಾಡಿದ್ದಾರೆ ಎಂದು ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷೆ ಮೀರಾ ಸೆಕ್ಸೆನಾ ಹೇಳಿಕೆ ನೀಡಿದ್ದಾರೆ.

ಈ ಕುರಿತು ವಿಜಯಪುರದಲ್ಲಿ ಮಾತನಾಡಿದ ಅವರು ಸುಪಾರಿ ಕಿಲ್ಲರ್ ಗಳು ಸುಳಿವು ಬಿಟ್ಟು ಕೊಡುವುದಿಲ್ಲ. ಅಲ್ಲದೇ ಹಣವೇ ಸುಪಾರಿ ಹಂತಕರ ಮುಖ್ಯ ಉದ್ದೇಶ ಆಗಿದೆ. ಹಾಗಾಗಿ ಗೌರಿ ಹತ್ಯೆ ಹಣಕ್ಕಾಗಿಯೇ ನಡೆದಿದೆ ಎಂದು ಪರೋಕ್ಷವಾಗಿ ಸಮರ್ಥಿಸಿಕೊಂಡರು. ಇನ್ನು ಸುಪಾರಿ ಹಂತಕರೇ ಗೌರಿ ಹತ್ಯೆ ಮಾಡಿದ್ದರೇ ಸಿಗೋದು ಕಷ್ಟ. ಆದರೂ ಪೊಲೀಸರು ಬೇಗನೇ ಹಂತಕರನ್ನ ಪತ್ತೆ ಮಾಡುತ್ತಾರೆ ಅನ್ನೊ ನಂಬಿಕೆ ಇದೆ ಎಂದರು. ಹಾಗೆಯೇ ಗೌರಿ ಹತ್ಯೆಗೆ ಕಂಟ್ರಿ ಪಿಸ್ತೂಲು ಬಳಕೆಯಾದ ಬಗ್ಗೆ ಮಾಹಿತಿ ಸಿಕ್ಕಿದೆ. ಗೌರಿ ಹತ್ಯೆಗೂ ವಿಜಯಪುರಕ್ಕೂ ಸಂಬಂಧವಿದೆ ಎಂದು ತಿಳಿಸಿದರು.

NO COMMENTS

LEAVE A REPLY