ಚುಂಚನಕಟ್ಟೆಯ ಸುತ್ತ ಸೇಲ್ಪಿಯ ಚಿತ್ತ

ಚುಂಚನಕಟ್ಟೆಯ ಸುತ್ತ ಸೇಲ್ಪಿಯ ಚಿತ್ತ

442
0
SHARE

 

ಚುಂಚನಕಟ್ಟೆಯ ಸುತ್ತ ಸೇಲ್ಪಿಯ ಚಿತ್ತ

ನಾವೇಲ್ಲರೂ ಬಾಲ್ಯದ ಸ್ನೇಹಿತರು, ನಾವು ಒಬ್ಬರನ್ನೊಬ್ಬರು ಭೇಟಿಯಾಗಿ ಏನಿಲ್ಲ ಅಂದರು ಸುಮಾರು 5-6 ವರ್ಷಗಳಾಗಿತ್ತು, ನಮ್ಮದೊಂದು ವಾಟ್ಸ್‍ಅಫ್ ಗ್ರೂಪ್ ಇದೆ. ಈ ಗ್ರೂಪ್ಪಿನಲ್ಲಿ ನಾವೇಲ್ಲರು ಪ್ರತಿ ದಿನ ಚಾಟ್ ಮಾಡುವುದೇ ಕೆಲಸ.
ಒಂದು ದಿನ ನಾನು ಲೋ ಎಲ್ಲರೂ ಬನ್ನಿ ಎಲ್ಲಾದರು ಟ್ರಿಪ್ ಹೋಗೂಣ, ಒಂದು ಕಡೆ ಸೇರೊಣ ಅಂತ ಹೇಳಿದೆ, ಅಗ ಎಲ್ಲಾರು ಇವಾಗ ಹೋಗೊಣ ಅವಾಗ ಹೋಗೂಣ ಅಂತಾನೇ ಹೇಳುತ್ತಿದರು ಬಟ್ ಯಾರು ಸಹ ಎಲ್ಲಿಗೂ ಬರಲಿಲ್ಲ.
ನನ್ನ ಸ್ನೇಹಿತೆಯಾದ ತೇಜಸ್ಪಿನಿಯು ನಾಳೆ ಚುಂಚನಕಟ್ಟೆಗೆ ಹೋಗೊಣ ಅಂತ ಹೇಳಿದಳು, ಚುಂಚನಕಟ್ಟೆ ಎಂದಾಕ್ಷಣ ನಮಗೆ ನೆನಪಿಗೆ ಬರುವುದು, ಸುತ್ತಲೂ ಮೈದುಂಬಿ ಹರಿಯುವ ಕಾವೇರಿ ನದಿ, ಹೆಣ್ಣೆ ನಾಚಿಸುವಂತಹ ವಯ್ಯಾರದ ನಡಿಗೆ, ನಿಂತಲ್ಲೇ ನಿಂತು ನೋಡಲೇ ಬೇಕು ಎನ್ನುವ ಆಕರ್ಷಕ, ಇತಿಹಾಸ ಆಸಕ್ತಿಯುಳ್ಳ ಮಂದಿಗೆ ಕುತೂಹಲದ ಸ್ಥಳ. ಇಷ್ಟೆಲ್ಲ ಗೊತ್ತಿದ್ದ ನಮಗೆ ಎ¯್ಲರೂ ಒಮ್ಮತದಿಂದ ಚುಂಚನಕಟ್ಟೆಗೆ ಹೋಗಲು ನಿರ್ಧರಿಸಿದೆವು.
ಅಂದಹಾಗೆ ಈ ಕುತೂಹಲಕಾರಿ ಸ್ಥಳ ಇರುವುದು ಮೈಸೂರು ಜಿಲ್ಲೆಯ ಭತ್ತದ ಕಣಜ ಎಂದೇ ಪ್ರಸಿದ್ಧವಾಗಿರುವ ಕೆ.ಆರ್.ನಗರದ ಸಮೀಪದಲ್ಲಿ. ದಿನಾಂಕ 26-07-2017 ರಂದು ಕೆ.ಆರ್.ನಗರದಿಂದ 7 ಜನರ ನಮ್ಮ ತಂಡ ಚುಂಚನಕಟ್ಟೆಯ ಕಡೆಗೆ ಪ್ರಯಣ ಬೆಳೆಸಿದವು. ಅದರಲ್ಲು ನಾನು ಮೊದಲೇ ಹೋಗಿ ನನ್ನ ಸ್ನೇಹಿತಾರಿಗಾಗಿ ಕಾಯುತ್ತಿದ್ದೆ, ಇಲ್ಲಿಗೆ ಕೆ.ಆರ್.ನಗರದಿಂದ ಬಸ್ಸಿನಲ್ಲಿ ಗೆಳತಿಯರಾದ ಮಂಜುಳ, ಕಾವ್ಯ ಮತ್ತು ತೇಜಸ್ಪಿನಿಯವರು ಬಂದರು. ನಂತರ ನಾವು 4 ಜನರು ದೇವಾಸ್ಥನದ ಬಳಿ ಹೋಗಿ ಕುಳಿತೆವು, ಅಗ ನಾನು ಬನ್ನಿ ನದಿ ಹತ್ತಿರ ಹೋಗೊಣ ಅಂತ ಹೇಳಿದಾಗ ಗೆಳತಿ ತೇಜು ಬೇಡ ಕಣೋ ಉಳಿದ ಸ್ನೇಹಿತರು ಬರಲಿ ಅಂತ ಹೇಳಿದಳು ಅಗ ನಾನು ಸರಿ ಅಂತ ಹೇಳಿ, ಉಳಿದ ಸ್ನೇಹಿತರಿಗಾಗಿ ದೇವಸ್ಥಾನದ ಬಳಿ ಕಾಯುತ್ತಿದ್ದೇವು.


ಕೊನೆಗೂ ಲೇಟಾಗಿ ಬಂದ ಮನು ಮತ್ತು ಕಿರಣ್ ಕುಮಾರ್ ಇಬ್ಬರು ನಮ್ಮನು ಕರೆಯದೆ ನದಿಯ ಬಳಿ ಹೋಗಿದ್ದರು, ಅಗ ನಾನು ಲೋ ಮಗಾ ಮೇಲೆ ಬನ್ನಿ ಚುರುಮುರಿ ತಿನ್ನೋಣ ಅಂತ ಕರೆದೆ. ನಂತರ ಹೀಗೆ ನಾವೇಲ್ಲರು ಚುರುಮುರಿ ಅಂಗಡಿಯ ಬಳಿ ಹೋದೆವು, ಇದೇ ಸಮಯಕ್ಕೆ ನನ್ನ ಮೊತ್ತೊಬ್ಬ ಸ್ನೇಹಿತನಾದ ಕಿರಣ್‍ರಾಜ್ ತನ್ನ ಬಳಿ ಇದ್ದ ಟ್ಟ್ರಾಕ್ಟರ್ ಅಲ್ಲಿ ಬಂದನು ಆಗ ನಾನು ಲೋ ಮಗಾ 1 ರೌಂಡ್ ನಿನ್ನ ಟ್ಟ್ರಾಕ್ಟರ್ ಕೊಡೋ ಅಂತ ಕೇಳಿ 1 ರೌಂಡ್ ಟ್ಟ್ರಾಕ್ಟರ್ ಓಡಿಸಿದೆ.


ನಂತರ ನಾವು 7 ಜನರು ಚುರುಮುರಿಯನ್ನು ತಿನ್ನುತ್ತ ಕಾವೇರಿ ನದಿಯ ಬಳಿಗೆ ಹೋಗುವಾಗ ಕೋತಿಗಳು ನಮ್ಮ ಹಿಂದೆಯೇ ಬರುತ್ತಿದ್ದವು ಇದನ್ನು ನೋಡಿ ಭಯಪಟ್ಟ ಹುಡುಗಿಯರು ತಮ್ಮ ಕೈಯಲ್ಲಿದ್ದ ಚುರುಮುರಿಯನ್ನು ಕೆಳಗೆ ಎಸೆದು ಬಿಟ್ಟರು, ಇದೇ ರೀತಿ ಮನು ಮತ್ತು ಕಿರಣ್ ಕುಮಾರ್ ಕೂಡ ಕೆಳಗೆ ಚುರುಮುರಿಯನ್ನು ಎಸೆದರು, ಅದರೆ ನಾನು ಮತ್ತು ನಮ್ಮ ಸ್ನೇಹಿತ ಕಿರಣ್ ರಾಜ್ ಇಬ್ಬರು ಕೋತಿಗಳಿಗೆ ಹೆದರದೆ ಚುರುಮುರಿಯನ್ನು ತಿಂದೇವು.
ನದಿಯ ಬಳಿ ಹೋದ ನಾವುಗಳು ಕಾವೇರಿಯು ಮೈತುಂಬಿ ಹರಿಯುತ್ತ ದೊಡ್ಡ-ದೊಡ್ಡ ಕಲ್ಲಿನ ಬಂಡೆಗಳ ಮೇಲಿಂದ ಕೆಳಗೆ ದುಮುಕ್ಕಿ ಹರಿಯುತ್ತಿರುವ ದೃಶ್ಯವು ನಮಗೆ ಮಿನಿ ಜೋಗ್‍ಫಾಲ್ಸ್ ರೀತಿಯ ಅನುಭವ ನೀಡುತ್ತಿತ್ತು, ಹಾಗೂ ನಾವುಗಳು ಬಂಡೆಯ ಮೇಲೆ ನಿಂತುನೋಡಿದರೆ ಕೆಳಗಡೆ ಹರಿಯುವ ನೀರು, ಸುತ್ತಲು ಹಚ್ಚಹಸಿರಿನಿಂದ ಕೂಡಿದ ಈ ಪ್ರಕೃತಿ ಸೌಂದರ್ಯಕ್ಕೆ ನಾವೇಲ್ಲರು ಮನಸೋತೆವು.
ನಾವುಗಳು ಬಂಡೆ ಕಲ್ಲಿನ ಮೇಲೆ ಹಾಗೂ ನೀರಿನ ಪಕ್ಕದಲ್ಲಿ ಎ¯್ಲರೂ ತಮ್ಮ-ತಮ್ಮ ಪೋನ್‍ನಲ್ಲಿ ಪೋಟೋ ತೇಗೆದುಕೊಳುತ್ತಿದ್ದೆವು. ಅದರಲ್ಲೂ ಸೇಲ್ಫಿಗಳ ಸುರಿಮಳೆಯೇ ಹೆಚ್ಚಾಗಿತ್ತು. ಒಟ್ಟಾರೆಯಾಗಿ ಹೇಳುವುದಾದರೆ ನಾವು ಈ ಪ್ರಕೃತಿಯ ಸೌಂದರ್ಯವನ್ನು ಸವಿಯುವುದಕ್ಕಿಂತ ಹೆಚ್ಚಾಗಿ ಸೇಲ್ಫಿ ತೇಗೆಯುವುದರಲ್ಲಿಯೇ ಹೆಚ್ಚು ಸವiಯ ಕಳೆದವು, ಹಾಗೂ ಹಾಸ್ಯದ ಮತನಾಡುತ್ತ ಸವiಯ ಕಳೆದವು, ಅದರಲ್ಲೂ ಕಾವ್ಯ ಪುಲ್ ಸೈಲೆಂಟ್, ಮಂಜುಳ ಮಾತ್ರ ಪುಲ್ ವೈಲೆಂಟ್.
ಹೀಗೆ ಸವiಯ ಕಳೆದು ಸಂಜೆಯಾಗುತ್ತಿದ್ದರಿಂದ ನಾವೇಲ್ಲರು ಕೆ.ಆರ್.ನಗರಕ್ಕೆ ಹೊರಡಲು ಸಿದ್ದರಾದೆವು, ನಂತರ ಹುಡುಗಿಯರು ಟ್ಟ್ರಾಕ್ಟರ್ ಮೇಲೆ ಕುಳಿತರು ನಂತರ ನಾನು ಮಗಾ ನಿನ್ನ ಟ್ಟ್ರಾಕ್ಟರ್ ಓಡಿಸುವುದಾಗಿ ಹೇಳಿ ಚುಂಚನಕಟ್ಟೆಯ ಪೇಟ್ರೋಲ್ ಬಂಕ್‍ವರೆಗೆ ನಾನು ಡ್ರೈವ್ ಮಾಡಿದೆ. ನಂತರ ಅಲ್ಲಿಂದ ಕಿರಣ್ ರಾಜ್ ಟ್ಟ್ರಾಕ್ಟರ್ ಓಡಿಸಿದನು.


ನಾನು ಮನು,ಕೀರಣ್ ಕುಮಾರ್ 3 ಜನರು 3 ಬೈಕಿನಲ್ಲಿ ಟ್ಟ್ರಾಕ್ಟರ್‍ನ್ನು ಹಿಂಬಾಲಿಸಿತ್ತ ಬರುತ್ತಿದ್ದೆವು ಹೀಗೆ ಬರುವಾಗ ತೇಜಸ್ಪಿನಿಯು ನಾವು ಬರುತ್ತಿರುವುದನ್ನು ತನ್ನ ಪೋನ್ ಅಲ್ಲಿ ಪೋಟೋಸ್ ತೆಗೆಯುತ್ತಿದ್ದಳು. ನಂತರ ನಾವು ಹಳೆ ಎಡತೋರೆಗೆ ಬಂದೆವು, ಅಲ್ಲಿ ನನ್ನ ಸ್ನೇಹಿತ ಮನು ನಮಗೆ ಕಬ್ಬಿನ ಜ್ಯೂಸ್ ಕೊಡಸಿದನು, ಅಲ್ಲಿಂದ ಹುಡುಗಿಯರು ಆಟೋ ಹತ್ತಿ ಅವರ ಮನೆಗೆ ಹೋದರು, ನಾವುಗಳು ಸಹ ನಮ್ಮ-ನಮ್ಮ ಮನೆಗೆ ಹಿಂತಿರುಗಿದೇವು.
ಸ್ಥಳದ ಇತಿಹಾಸ


ತ್ರೇತ್ರಾಯುಗದಲ್ಲಿ ಶ್ರೀರಾಮಚಂದ್ರನ್ನು ಸೀತಾ, ಲಕ್ಷ್ಮಣ, ಹನುಮಂತನೊಂದಿಗೆ ವನವಾಸ ಕಾಲದಲ್ಲಿ ಕೆಲ ದಿನಗಳ ಕಾಲ ನೆಲೆಸಿದ್ದರು ಎಂಬ ಪ್ರತೀತಿ ಇದೆ.
ಇದೇ ಸವiಯದಲ್ಲಿ ಒಮ್ಮೆ ಸೀತೆಯೂ ಸ್ನಾನ ಮಾಡುವಾಗ ಆಕಸ್ಮಿಕವಾಗಿ ಲಕ್ಷ್ಮಣನೂ ಅಲ್ಲಿಗೆ ಬರುತ್ತಾನೆ, ಇದನ್ನು ಗಮನಿಸಿದ ಸೀತೆ ಮರೆಯಾಗಲು ಅಲ್ಲಿದ್ದ ಬಂಡೆಯೊಂದನ್ನು ಹೊಡೆದು ಅದರ ಮದ್ಯೆ ಹೋಗಿ ಅಡಗಿಕೊಳ್ಳುತ್ತಾಳೆ, ಇದೇ ಮುಂದೆ ಸೀತಾ ಮಡು ಎಂದು ಖ್ಯಾತಿ ಹೊಂದಿದ್ದು, ಅವಳು ಸ್ನಾನ ಮಾಡಿದ್ದ ಸ್ಥಳವನ್ನು ಸೀತಾ ಬಚ್ಚಲು ಎಂದು ಕರೆಯಲಾಗುತ್ತದೆ. ಅಲ್ಲದೆ ಅವಳು ಅಡಗಿಕೊಂಡಿದ್ದ ಸ್ಥಳದಿಂದ ಸೀತಾ ಬಚ್ಚಲು ಮೂಲಕ ಹರಿಯುವ ನೀರು ಸೀಗೆಪುಡಿ ಮತ್ತು ಅರಿಶಿಣ ಮಿಶ್ರಿತವಾಗಿ ಇಂದಿಗೂ ಹರಿಯುತ್ತಿರುವುದನ್ನು ನೋಡಬಹುದಾಗಿದೆ.
ಮತ್ತೊಂದು ಇತಿಹಾಸದ ಪ್ರಕಾರ ದೇವಸ್ಥಾನದ ಜಾತ್ರೆಯಲ್ಲಿ ಬಳಸಲಾಗುತ್ತಿದ್ದ ಕಂಚಿನ ತೇರು ಅಲ್ಲಿ ಹರಿಯುವ ಕಾವೇರಿ ನದಿಯಲ್ಲಿ ಮುಳಗಿ ಹೋಗಿದ್ದು, ಇಂದಿಗೂ ಜಾತ್ರೆಯ ತೆಪ್ಪೋತ್ಸವ ಸಮಯದಲ್ಲಿ ಕಂಚಿನ ತೇರಿನ ಶಬ್ದ ಕೇಳುತ್ತದೆ ಎಂದು ಕೆಲವರು ಹೇಳುತ್ತಾರೆ.
ಅಲ್ಲದೇ ಬೋರ್ಗರೆದು ಹರಿಯುವ ಕಾವೇರಿ ನೀರಿನ ಶಬ್ಧ ದೇವಾಲಯದ ಗರ್ಭಗುಡಿಯ ಒಳಗೆ ಕೇಳುವುದಿಲ್ಲ.
ಜಾತ್ರಾ ಕಾರ್ಯಕ್ರಾಮ
ಸಂಕ್ರಾತಿ ಹಬ್ಬದ ಸಮಯದಲ್ಲಿ ನಡೆಯುವ ಜಾತ್ರಾ ಮಹೋತ್ಸವವು 1 ತಿಂಗಳ ಕಾಲ ಜರಗುತ್ತದೆ. ಬೃಹತ್ ದನಗಳ ಜಾತ್ರೆ ನಡೆಯುವುದು ವಿಶೇಷ.
ಹೋಗುವ ಮಾರ್ಗ
ಮೈಸೂರು ಜಿಲ್ಲೆಯ ಕೆ.ಆರ್.ನಗರದಿಂದ 12 ಕಿ.ಮೀ ದೂರವಿದ್ದು ಪ್ರತಿ 5 ನಿಮಿಷಕ್ಕೂ ಸರ್ಕಾರಿ ಬಸ್‍ಗಳ ಅನುಕೂಲವಿದೆ.

ಜೀವನ್ ಎಸ್
ಪತ್ರಿಕೋದ್ಯಮ ವಿದ್ಯಾರ್ಥಿ
ಮಾನಸ ಗಂಗೋತ್ರಿ ಮೈಸೂರು

NO COMMENTS

LEAVE A REPLY