ಯಾರಿಗೆ ಹೇಳಬಹುದು ಭಾರತ ಬಿಟ್ಟು ತೊಲಗಿ ? ವೆಬ್‌ಸೈಟ್‌ ಉತ್ತರಿಸುವ ಕಾಲವಿದು : ಲಕ್ಷ್ಮೀ...

ಯಾರಿಗೆ ಹೇಳಬಹುದು ಭಾರತ ಬಿಟ್ಟು ತೊಲಗಿ ? ವೆಬ್‌ಸೈಟ್‌ ಉತ್ತರಿಸುವ ಕಾಲವಿದು : ಲಕ್ಷ್ಮೀ ನಾರಾಯಣ

307
0
SHARE

ಯಾರಿಗೆ ಹೇಳಬಹುದು ಭಾರತ ಬಿಟ್ಟು ತೊಲಗಿ ?
ವೆಬ್‌ಸೈಟ್‌ ಉತ್ತರಿಸುವ ಕಾಲವಿದು : ಲಕ್ಷ್ಮೀ ನಾರಾಯಣ

ಮೈಸೂರು ಮ್ಯಾಟರ್ ವಾರ್ತೆ
ಅಂದು ಬ್ರಿಟಿಷರಿಗೆ ಭಾರತ ಬಿಟ್ಟು ತೊಲಗಿ ಎಂದು ಹೇಳುತ್ತಿದ್ದೆವು. ಆದರೆ ಬಂಡವಾಳಶಾಹಿಗಳು ಹಾಗೂ ಶೋಷಣೆ ಮಾಡುವವರು ನಮ್ಮಲಿಯೇ ಇರುವಾಗ ಭಾರತ ಬಿಟ್ಟು ತೊಲಗಿ ಎಂದು ಯಾರಿಗೆ ಹೇಳಬೇಕು ಎಂದು CPI(M) ಪಕ್ಷದ ರಾಜ್ಯ ಕಾರ್ಯದರ್ಶಿ ಮಂಡಳಿಯ ಸದಸ್ಯ ಪ್ರೊ.ವಿ.ಎನ್.ಲಕ್ಷ್ಮೀನಾರಾಯಣ ಪ್ರಶ್ನಿಸಿದರು.

ಭಾರತ ಕಮ್ಯೂನಿಸ್ಟ್‌ ಪಕ್ಷ (ಮಾರ್ಕ್ಸ್ ವಾದಿ) ಮೈಸೂರು ಜಿಲ್ಲಾ ಸಮಿತಿ ವತಿಯಿಂದ ಬುಧವಾರ ನಗರದ ಹೋಟೆಲ್ ಗೋವರ್ಧನ ಸಭಾಂಗಣದಲ್ಲಿ ಕ್ವಿಟ್ ಇಂಡಿಯಾ ಚಳುವಳಿಯ 75ನೇ ವರ್ಷಾಚರಣೆಯ ಅಂಗವಾಗಿ ಆಯೋಜಿಸಿದ್ದ ವಿಚಾರ ಮಂಥನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಇಂದು ಯವುದೇ ಕ್ಷೇತ್ರದ ಮಾಹಿತಿಯನ್ನು ಪಡೆಯಬೇಕಾದರು ವೆಬ್‌ಸೈಟ್ ಮೂಲಕ ತಿಳಿಯಬೇಕಾಗಿದೆ. ಇದರಲ್ಲಿ ಸಾರ್ವಜನಿಕರ ಅಥವಾ ಅಧಿಕಾರಿಗಳ ತಪ್ಪಿಲ್ಲ. ಏಕೆಂದರೆ ಭಾಷೆ ಸಂಸ್ಕೃತಿ ಯಾವ ವಾತಾವರಣ ಹೊಂದಿರುತ್ತದೋ ಅದಕ್ಕೆ ಜನ ಹೊಂದಿಕೊಳ್ಳುತ್ತಾರೆ ಎಂದರು.

ಭಾರತಕ್ಕೆ ಸ್ವಾತಂತ್ರ್ಯ ಬಂದಿದೆ ಎಂದು ಎಲ್ಲರು ತಿಳಿದುಕೊಂಡಿದ್ದಾರೆ. ಆದರೆ ಅದು ಬಂಡವಾಳಶಾಹಿಗಳ ಸ್ವಾತಂತ್ರ್ಯ ಆಗಿದೆ. ಇಂದು ಗಾಂಧಿಯ ಬಗ್ಗೆಯೂ ಕೂಡ ಮೂಲತಃ ಅಭಿಪ್ರಾಯ ಇದೆ. ಆದರೆ ನಮ್ಮ ರಾಜಕೀಯ ಪಕ್ಷದ ಒಳಜಗಳದಿಂದಾಗಿ ಅವರ ಸಿದ್ಧಾಂತಗಳನ್ನು ಕೆಳಸ್ತರಕ್ಕೆ ಇಳಿಸಿದ್ದಾರೆ ಎಂದು ವಿಷಾದಿಸಿದರು.

ಭಾರತ ದೇಶದ ಬಹುದೊಡ್ಡ ವಿಷಾದದ ಸಂಗತಿ ಎಂದರೆ ದೀನದಲಿತರು, ಮಲಹೊರುವ ಪೌರ ಕಾರ್ಮಿಕರು , ಕೂಲಿಕಾರರು ಇವರ ಅಭಿವೃದ್ಧಿ ಆಗದೆ ಬಂಡವಾಳ ಶಾಹಿಗಳ ವಿಕಾಸ ವಾಗುತ್ತಿರುವುದು ದುರಂತ. ಸ್ವಚ್ಚ ಭಾರತ್ ಮಾಡುವ ಜತೆಗೆ ಪ್ರಧಾನಿ ನರೇಂದ್ರ ಮೋದಿ ಅವರೂ ಸಹ ಪೌರ ಕಾರ್ಮಿಕರ ಕೈಯಲ್ಲಿರುವ ಪೊರಕೆಯಾಗಿದ್ದಾರೆ ಎಂದು ಟೀಕಿಸಿದರು.

ಹಿಂದಿನ ಸಮಾಜದಲ್ಲಿದ್ದ ಪದ್ದತಿಯಂತೆ ಯಾವುದೇ ಕ್ರಾಂತಿ, ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವವರು ಸಾಮಾನ್ಯರಾದರೆ ಫಲ ಅನುಭವಿಸುವವರು ಬಂಡವಾಳಶಾಹಿಗಳು ಎಂದು ದೂರಿದರು.
ಜಿ.ಎನ್.ನಾಗರಾಜು ಬರೆದಿರುವ *ತೊಲಗು ತೊಲಗಾಚೆ ವಿದೇಶಿ ಸುಲಿಗೆಕಾರ ಪುಸ್ತಕವನ್ನು CPI(M)ನ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯರಾದ ವಿ.ಜೆ.ಕೆ.ನಾಯರ್ ಬಿಡುಗಡೆ ಮಾಡಿದರು.

ಜಿಲ್ಲಾ ಕಾರ್ಯದರ್ಶಿ ಕೆ.ಬಸವರಾಜು ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಸಮಿತಿ ಸದಸ್ಯ ಎನ್.ವಿಜಯಕುಮಾರ್ ಇದ್ದರು.

 

ಮೋಹನ ಬಿ.ಎಂ. ಬನ್ನಿಕುಪ್ಪೆ

NO COMMENTS

LEAVE A REPLY