ತಾಲ್ಲೂಕಿನ ಬ್ಯಾಡರಹಳ್ಳಿ ಗ್ರಾಮದ ಕೆರೆಯು ಬತ್ತಿಹೋಗಿದ್ದು ದನ-ಕರುಗಳಿಗೆ ಕುಡಿಯಲು ನೀರಿಲ್ಲದೆ ಸಾರ್ವಜನಿಕರು ಕುಡಿಯುವ ನೀರಿಗಾಗಿ ಹಾಹಕಾಂರ...

ತಾಲ್ಲೂಕಿನ ಬ್ಯಾಡರಹಳ್ಳಿ ಗ್ರಾಮದ ಕೆರೆಯು ಬತ್ತಿಹೋಗಿದ್ದು ದನ-ಕರುಗಳಿಗೆ ಕುಡಿಯಲು ನೀರಿಲ್ಲದೆ ಸಾರ್ವಜನಿಕರು ಕುಡಿಯುವ ನೀರಿಗಾಗಿ ಹಾಹಕಾಂರ ಉಂಟಾಗಿದೆ

350
0
SHARE

ಕೆ.ಆರ್.ನಗರ.ಜು-27
ತಾಲ್ಲೂಕಿನ ಬ್ಯಾಡರಹಳ್ಳಿ ಗ್ರಾಮದ ಕೆರೆಯು ಬತ್ತಿಹೋಗಿದ್ದು ದನ-ಕರುಗಳಿಗೆ ಕುಡಿಯಲು ನೀರಿಲ್ಲದೆ ಸಾರ್ವಜನಿಕರು ಕುಡಿಯುವ ನೀರಿಗಾಗಿ ಹಾಹಕಾಂರ ಉಂಟಾಗಿದೆ. ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಕೆರೆಗಳ ಪುನರ್ಜಿವನಗೊಳಿಸಲು ಆನೇಕ ಯೋಜನೆಗಳನ್ನು ರೂಪಿಸಿ ಬಜೆಟ್‍ನಲ್ಲಿ ಪ್ರತ್ಯೇಕವಾಗಿ ಹಣವನ್ನು ಮಿಸಲಿಡುತ್ತ ಬಂದಿದೆ.


ಆದರೆಕೆರೆಗಳ ಉಳೆತ್ತಿ ಅಭಿವೃದ್ದಿ ಪಡಿಸುವ ಕಾರ್ಯ ಮಾತ್ರ ಸಾಕಾರವಾಗಿಲ್ಲ, ಈ ವಿಚಾರದಲ್ಲಿ ನೀರಾವರಿ ಇಲಾಖೆಯ ಅಧಿಕಾರಿಗಳು ಇಚ್ಚಾಶಕ್ತಿ ತೋರಿಸದೆ ಇರುವುದು ಇಂತಹ ಅವ್ಯವಸ್ಥೆಗೆ ಕಾರಣವಾಗಿದೆ. ಅಧಿಕಾರಿಗಳ ನಿರ್ಲಕ್ಷಕ್ಕೆ ಒಳಗಾಗಿರುವ ಬ್ಯಾಡರಹಳ್ಳಿ ಕೆರೆಯು ಸಂಪೂರ್ಣವಾಗಿ ಬತ್ತಿ ಹೋಗಿರುದರಿಂದ ದನ-ಕರುಗಳಿಗೆ ಕುಡಿಯಲು ನೀರಿಲ್ಲದೆ ಪರಿತಪ್ಪಿಸುವಣತಾಗಿದೆ, ಹಾಗೂ ಕೆರೆಗಳಲ್ಲಿ ಗಿಡ-ಗಂಟ್ಟಿಗಳು ಬೆಳೆದು ನಿಂತಿರುವುದು ಅಧಿಕಾರಿಗಳ ನಿರ್ಲಕ್ಷಕ್ಕೆ ಒಂದು ಉದಾಹರಣೆಯಾಗಿದೆ.


ಈ ಕೆರೆಯ ಪಕ್ಕದಲ್ಲಿ ಚಾಮರಾಜ ಬಲದಂಡೆ ನಾಲೆಯು ಹರಿಯುತ್ತಿದ್ದು, ಈ ನಾಲೆಯಿಂದ ಕೆರೆಗೆ ನೀರನ್ನು ತುಂಬಿಸುವ ಎಲ್ಲಾ ಸಧ್ಯತೆಗಳು ಇದ್ದರು ಕೂಡ ಅಧಿಕಾರಿಗಳು ಮಾತ್ರ ಈ ಕೆರೆಗೆ ನೀರನ್ನು ತುಂಬಿಸದೆ ಇರುವುದು ಅಧಿಕಾರಿಗಳ ನಿರ್ಲಕ್ಷತನವನ್ನು ಎತ್ತಿ ತೋರುತ್ತದೆ
ಕೆರೆಹಳಿಗೆ ನೀರನ್ನು ತುಂಬಿಸುವುದರಿಂದ ಜನ-ಜನುವಾರಿಗೆ ಮತ್ತು ಪ್ರಾಣಿ ಸಂಕುಲಕ್ಕೆ ಕುಡಿಯಲು ನೀರು ಹಾಗೂ ಸಾರ್ವಜನಿಕರಿಗೆ ಉಪಯೋಗವಾಗುತ್ತದೆ. ಕೆರೆಗಳಿಗೆ ಪುನರ್ಜಿವನ ನೀಡುವುದರಿಂದ ಅಂತರ್ಜಲವು ಸಹ ಹೆಚ್ಚಾಗುತ್ತದೆ, ಹಾಗೂ ಕೊಳವೆಬಾವಿಯಲ್ಲಿ ನೀರು ಅಧುಕವಾಗಿ ಸಿಗುತ್ತದೆ, ಇದರಿಂದಾಗಿ ನೀರಿನ ಹಾಹಕಾಂರವನ್ನು ತಪ್ಪಿಸಬಹುದಾಗಿದೆ.

ಆದರಿಂದ ಅಧಿಕಾರಿಗಳು ಇನ್ನಾದರುಹೆಚ್ಚೆತ್ತುಕೊಂಡು ಈ ಕೆರೆಯಲ್ಲಿ ಬೆಳೆದಿರುವ ಗಿಡ-ಗಂಟಿ ಮತ್ತು ಚೋಂಡಗಳನ್ನು ತೇರವುಗಳಿಸಿ ಶೀಘ್ರವಾಗಿ ನೀರನ್ನು ನಾಲೆಯಿಂದ ತುಂಬಿಸಿ ಸಾರ್ವಜನಿಕರ ಉಪಯೋಗಕ್ಕೆ ಅನುವುಮಾಡಿಕೊಳ್ಳಬೇಕ್ಕಾಗಿ ಗ್ರಾಮಸ್ಥರು ಅಗ್ರಹಿಸಿದಾರೆ.

ಜೀವನ್ ಎಸ್
ಪತ್ರಿಕೋದ್ಯಮ ವಿದ್ಯಾರ್ಥಿ
ಮಾನಸ ಗಂಗೋತ್ರಿ ಮೈಸೂರು

NO COMMENTS

LEAVE A REPLY