ಮಾಜಿ ಸಿಎಂ ಧರಂ ಸಿಂಗ್ ಇನ್ನಿಲ್ಲ

ಮಾಜಿ ಸಿಎಂ ಧರಂ ಸಿಂಗ್ ಇನ್ನಿಲ್ಲ

352
0
SHARE

ಬೆಂಗಳೂರು(ಜು.27):

ಕಾಂಗ್ರೆಸ್ ನಾಯಕ, ಮಾಜಿ ಸಿಎಂ ಧರ್ಮಸಿಂಗ್(80) ವಿಧಿವಶರಾಗಿದ್ದಾರೆ.

ಕೆಲ ದಿನಗಳಿಂದ ಅನಾರೋಗ್ಯಕ್ಕೆ ತುತ್ತಾಗಿದ್ದ ಅವರನ್ನು ಬೆಂಗಳೂರಿನ ಎಂ. ಎಸ್ ರಾಮಯ್ಯ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಸಾವನ್ನಪ್ಪಿದ್ದಾರೆ.

ಜೇವರ್ಗಿ ತಾಲೂಕಿನ ನೇಲೋಗಿ ತಾಲೂಕಿನಲ್ಲಿ ಜನಿಸಿದ್ದ ದರಂ ಸಿಂಗ್ 1936ರ ಡಿಸೆಂಬರ್ 25 ರಂದು ಜನಿಸಿದ್ದ ಮಾಜಿ ಸಿಎಂ ಧರಂ ಸಿಂಗ್ 80ನೇ ವಯಸ್ಸಿನಲ್ಲಿ ಕೊನೆಯುಸಿರೆಳೆದಿದ್ದಾರೆ.

2004 ರಿಂದ 2006ರವರೆಗೆ ಕರ್ನಾಟಕದ ಸಿಎಂ ಆಗಿದ್ದ ಧರಂ ಸಿಂಗ್ ಕರ್ನಾಟಕದ 17ನೇ ಮುಖ್ಯಮಂತ್ರಿಯಾಗಿದ್ದರು. ಅಲ್ಲದೇ 1972ರಲ್ಲಿ ಮೊದಲ ಬಾರಿ ಶಾಸಕರಾಗಿ ಆಯ್ಕೆಯಾಗಿದ್ದ ಅವರು, ಜೇವರ್ಗಿಯಿಂದ ಒಟ್ಟು 9 ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು. ಅವರು ಕೆಪಿಸಿಸಿ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು.

NO COMMENTS

LEAVE A REPLY