27 ರಂದು ರಾಜ್ಯಾದ್ಯಂತ ಬಸವ ಪಂಚಮಿ ಆಚರಣೆ

27 ರಂದು ರಾಜ್ಯಾದ್ಯಂತ ಬಸವ ಪಂಚಮಿ ಆಚರಣೆ

284
0
SHARE

27 ರಂದು ರಾಜ್ಯಾದ್ಯಂತ ಬಸವ ಪಂಚಮಿ ಆಚರಣೆ

ಮೈಸೂರು ಮ್ಯಾಟರ್‍ವಾರ್ತೆ..
ಮಾನವ ಬಂಧುತ್ವ ವೇದಿಕೆವತಿಯಿಂದ ಜು. 27 ರಂದು ರಾಜ್ಯಾದ್ಯಂತ ನಾಗರ ಪಂಚಮಿಯನ್ನು ಬಸವ ಪಂಚಮಿಯಾಗಿ ಆಚರಿಸಲಾಗುತ್ತಿದೆ ಎಂದು ಮಾಜಿ ಮೇಯರ್ ಪುರುಷೋತ್ತಮ್ ತಿಳಿಸಿದರು.

“ಹುತ್ತಕ್ಕೆ ಹಾಲೆರೆಯುವ ಬದಲು ಅಪೌಷ್ಠಿಕತೆಯಿಂದ ಬಳಲುತ್ತಿರುವ ಮಕ್ಕಳಿಗೆ ಹಾಲನ್ನು ನೀಡಿ” ಎಂಬ ಜಾಗೃತಿ ಸಂದೇಶದೊಂದಿಗೆ ಮೈಸೂರು ತಾಲೂಕಿನ ಆಶಾದಾಯಕ ಸಂಸ್ಥೆ, ನಂಜನಗೂಡು ತಾಲೂಕಿನ ಕರುಣಾಲಯ , ಕೆ.ಆರ್.ನಗರ ತಾಲೂಕಿನ ತಿಪ್ಪೂರು ಗ್ರಾಮದ ವಿವಿಧ ಶಾಲೆಗಳು ,ಪಿರಿಯಾಪಟ್ಟಣ ತಾಲೂಕಿನ ಮುತ್ತೂರು ಹಾಡಿ, ಟಿ.ನರಸಿಪುರ ತಾಲೂಕಿನ ವೃದ್ಧಾಶ್ರಮ, ಹೆಚ್.ಡಿ.ಕೋಟೆ ತಾಲೂಕಿನ ಸವ್ವೆಗ್ರಾಮದ ಅಂಗನವಾಡಿ ಹಾಗೂ ಹುಣಸೂರು ತಾಲ್ಲೂಕುಗಳ ವಿವಿಧ ಅಂಗನವಾಡಿ ಕೇಂದ್ರಗಳಲ್ಲಿ ಸುಮಾರು 2000 ಕ್ಕೂ ಅಧಿಕ ಜನರಿಗೆ ಹಾಲು, ಬಾಳೆ ಹಣ್ಣು ಹಂಚುವ ಮೂಲಕ ಬಸವ ಪಂಚಮಿಯನ್ನು ವಿನೂತನವಾಗಿ ಆಚರಿಸಲಾಗುವದು ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದರು.

ಹಾವು ಮಾಂಸಹಾರಿಯಾಗಿದ್ದು ಹಾಲನ್ನು ಕುಡಿಯುವುದಿಲ್ಲ . ಹಾಗಾಗಿ ಜನರನ್ನು ಮೌಢ್ಯದಿಂದ ಹೊರತರಲು ಮತ್ತು ಜಾಗೃತಿಯನ್ನು ಮೂಡಿಸುವ ಸಲುವಾಗಿ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಹಾಲನ್ನು ಹಾವಿಗೆ ನೀಡಿ ವ್ಯರ್ಥಮಾಡುವುದಕ್ಕಿಂತ ಅದನ್ನು ಮಕ್ಕಳಿಗೆ ಮತ್ತು ವೃದ್ದಾಶ್ರಮಕ್ಕೆ ನೀಡಿ ಆರೋಗ್ಯ ಕಾಳಜಿಯನ್ನು ಕಾಪಾಪಡುವುದು ನಮ್ಮ ಮುಖ್ಯ ಉದ್ದೇಶವಾಗಿದೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ವೇದಿಕೆ ಜಿಲ್ಲಾ ಸಂಚಾಲಕ ಎಂ.ಲೋಕೇಶ್, ಜಿಲ್ಲಾಧ್ಯಕ್ಷ ಎಸ್.ಆರ್.ರವಿಕುಮಾರ, ಸಂಚಾಲಕ ಮುರಡಗಳ್ಳಿ ಮಹದೇವ್ ಮಹಿಳಾ ವಿಭಾಗದ ಶಾರದ ಇದ್ದರು.

NO COMMENTS

LEAVE A REPLY