ಸಮಸ್ಯೆಗಳ ಸರಮಾಲೆಯಲ್ಲಿ ಹರಂಬಳ್ಳಿ ಕೊಪ್ಪಲು

  338
  0
  SHARE

  ಸಮಸ್ಯೆಗಳ ಸರಮಾಲೆಯಲ್ಲಿ ಹರಂಬಳ್ಳಿ ಕೊಪ್ಪಲು

  ಕೆ.ಆರ್. ನಗರ ತಾಲೂಕಿನ ಅಗ್ರಹಾರ ಗ್ರಾಪಂ ವ್ಯಾಪ್ತಿಗೆ ಒಳಪಡುವ ಈ ಹರಂಬಳ್ಳಿ ಪ್ರಮುಖ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆಯಲ್ಲಿಯೇ ಈ ಗ್ರಾಮವಿದ್ದು ಸಮಸ್ಯೆಗಳ ಸರಮಾಲೆಯೆ ಇಲ್ಲಿದೆ ಕುಡಿಯಲು ನೀರಿಲ್ಲ, ಸ್ವಚ್ಚತೆಯ ಚರಂಡಿ ಇಲ್ಲ ,ಸಂಚರಿಸಲು ಉತ್ತಮವಾದ ರಸ್ತೆ ಮಾರ್ಗವಿಲ್ಲದೆ ಹಲವಾರು ಸಮಸ್ಯೆಗಳಿಂದ ಬೇಸತ್ತ ಜನ ಮುಂದಿನ ದಿನಗಳಲ್ಲಿ ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ.

  ಇಲ್ಲಿನ ಗ್ರಾಪಂ. ಚುನಾಯಿತ ಪ್ರತಿನಿದಿಗಳು ಅಸಡ್ಡೆ ಮತ್ತು ನಿರ್ಲಕ್ಷ್ಯದಿಂದ ಮೂಲಭೂತ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ ಇಲ್ಲಿನ ನಿವಾಸಿಗಳು. ಈ ಗ್ರಾಮದಲ್ಲಿ ಸಮಸ್ಯೆಗಳ ಸರಮಾಲೆಯೆ ಇದೆ ಎಂದರೆ ಆಶ್ಚರ್ಯವಿಲ್ಲ ದುರಸ್ಥಿಗೊಳ್ಳದ ರಸ್ತೆ ಒಂದೆಡೆ ,ಕೊಳಚೆ ತುಂಬಿದ ನೀರು ಇನ್ನೊಂದೆಡೆ , ಕುಡಿಯಲು ನೀರಿಗಾಗಿ ಆಹಾಕಾರ ಪಡುತ್ತಿರುವ ಜನ ಇನ್ನೊಂದೆಡೆ ಇದರಿಂದ ಸಾಂಕ್ರಾಮಿಕ ರೋಗಗಳು ಹರಡಬಹುದು ಎಂದು ತಿಳಿದಿದ್ದರು ಸಹ ಕ್ರಮ ಕೈಗೊಳ್ಳದಿರುವುದು ಆಡಳಿತ ವ್ಯವಸ್ಥೆಯ ನಿರ್ಲಕ್ಷ್ಯತನವನ್ನು ತೋರುತ್ತಿದೆ.


  ಇಲ್ಲಿ ಚರಂಡಿಯದ್ದೆ ಸಮಸ್ಯೆ ಮತ್ತೆ ಕೆಲವೆಡೆ ಚರಂಡಿಯೇ ಇಲ್ಲ ,ಇರುವ ಕೆಲವು ಚರಂಡಿಗಳಿಗೆ ತ್ಯಾಜ್ಯಗಳು ತುಂಬಿಕೊಂಡು ನೀರು ನಿರ್ವಹಣೆಯಾಗದೇ ಒಂದೆಡೆ ನಿಂತು ಕೊಳಚೆ ಯಾಗುತ್ತಿದೆ ಇದರಿಂದ ಸೊಳ್ಳೆಗಳ ಕಾಟ ಹೆಚ್ಚಾಗಿದೆ. ಗ್ರಾಮಸ್ತರು ಡೆಂಗ್ಯೂ ಹರಡಬಹುದು ಎಂದು ಭಯಭೀತಿಗೊಂಡಿದ್ದಾರೆ.

  ಗ್ರಾಮದಲ್ಲಿನ ರಸ್ತೆಯಲ್ಲಿ ಕಲ್ಲುಗಳಳು ಕಿತ್ತುಹೋಗಿವೆ , ಎಳೆ ವಯಸ್ಸಿನ ಮಕ್ಕಳು, ವೃದ್ದಿರು ರಸ್ತೆಯಲ್ಲಿ ಸಂಚರಿಸುವ ಪಾದಾಚಾರಿಗಳಿಗೆ ತೊಂದರೆಯಾಗಿದೆ. ವಾಹನಗಳು ವೇಗವಾಗಿ ಚಲಿಸುವುದರಿಂದ ಚಕ್ರಗಳಿಗೆ ಕಲ್ಲುಸಿಕ್ಕಿ ಯಾರಿಗಾದರೂ ಪೆಟ್ಟಾಗಬಹುದಾದ ಸಂಭವಗಳೂ ಸಹ ಇದೆ.

  ಕೆರೆಕಟ್ಟೆಗಳು ನೀರಿಗೆ ಬದಲಾಗಿ ಹೂಳು ತುಂಬಿಕೊಂಡು , ಸಾರ್ವಜನಿಕರು ಹಾಗೂ ದನಕರು ಪ್ರಾಣಿಗಳಿಗೆ ಕುಡಿಯುವ ನೀರಿಗೂ ಸಹ ಸಮಸ್ಯೆ ಉಂಟಾಗಿದೆ. ದನಕರುಗಳು

  :- ರಾಘವೇಂದ್ರ ಎಂ.ಎಲ್.
        ಕೆ.ಆರ್.ನಗರ
           ವಿದ್ಯಾರ್ಥಿ

  NO COMMENTS

  LEAVE A REPLY