ವಯೋವೃದ್ದರ ಮತ್ತು ದಿಕ್ಕಿಲ್ಲದ ನಿರ್ಗತಿಕರ ಆಶ್ರಯ ತಾಣವೊಂದು ತಾಲ್ಲೂಕಿನ ಡೊರ್ನಹಳ್ಳಿಯಲ್ಲಿ ಅಸ್ತಿತ್ವಕ್ಕೆ ಬಂದಿದೆ

  493
  0
  SHARE

  ವಯೋವೃದ್ದರ ಮತ್ತು ದಿಕ್ಕಿಲ್ಲದ ನಿರ್ಗತಿಕರ ಆಶ್ರಯ ತಾಣವೊಂದು ತಾಲ್ಲೂಕಿನ ಡೊರ್ನಹಳ್ಳಿಯಲ್ಲಿ ಅಸ್ತಿತ್ವಕ್ಕೆ ಬಂದಿದೆ

  ಕೆ.ಆರ್.ನಗರ,ಜು.22-

  ವಯೋವೃದ್ದರ ಮತ್ತು ದಿಕ್ಕಿಲ್ಲದ ನಿರ್ಗತಿಕರ ಆಶ್ರಯ ತಾಣವೊಂದು ಯಾವುದೇ ಧರ್ಮ, ಜಾತಿ ಮತ್ತು ರಾಜಕೀಯ ಸೊಂಕಿಲ್ಲದ ವೃದ್ದಾಶ್ರಮ ತಾಲ್ಲೂಕಿನ ಡೊರ್ನಹಳ್ಳಿಯಲ್ಲಿ ಅಸ್ತಿತ್ವಕ್ಕೆ ಬಂದಿದೆ.
  ಮೈಸೂರು ಜಿಲ್ಲೆ ಕೆ.ಆರ್.ನಗರ ತಾಲ್ಲೂಕು ದೊಡ್ಡೆಕೊಪ್ಪಲು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ವಿಶ್ವಪ್ರಸಿದ್ದ ಸಂತ ಅಂತೋಣಿ ಚರ್ಚ್‍ನ ಆಶ್ರಯದಲ್ಲಿ ಡೋರ್ನಹಳ್ಳಿ ಗ್ರಾಮದ ಹೊರವಲಯದ ವಿಶಾಲವಾದ ಸ್ಥಳದಲ್ಲಿ “ಪಲ್ಲೋಟಿ ಶಾಂತಿಧಾಮ” ಹೆಸರಿನಲ್ಲಿ ಸ್ಥಾಪಿತಗೊಂಡ ಈ ವೃದ್ದಾಶ್ರಮ ಮೈಸೂರು ಜಿಲ್ಲೆಯ ಗ್ರಾಮಾಂತರ ಭಾಗದಲ್ಲಿ ಸ್ಥಾಪಿತವಾಗಿರುವ ಏಕೈಕ ವೃದ್ದಾಶ್ರಮ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
  ಚರ್ಚನ ಧರ್ಮಾಧಿಕಾರಿಗಳಾದ ಎ.ವಾಜಪಿಳ್ಳೈರವರು ದಿನಾಂಕ 29-09-2014 ರಲ್ಲಿ ಚಾಲನೆ ನೀಡಿರುವ “ಪಲ್ಲೋಟಿ ಶಾಂತಿಧಾಮ” ವಯೋವೃದ್ದರು ಮತ್ತು ದಿಕ್ಕಿಲ್ಲದ ನಿರ್ಗತಿಕ ಮಹಿಳೆ ಮತ್ತು ಪುರುಷರ ‘ಮನೆ’ ಎಂಬ ಹೆಸರಿನಲ್ಲಿ ಪ್ರಾರಂಭಗೊಂಡಿದ್ದು ಈ ವೃದ್ದಾಶ್ರಮದಲ್ಲಿ ಪುಸ್ತುತ 30 ಮಂದಿ ವಯೊವೃದ್ದ ಮಹಿಳೆ ಮತ್ತು ಪುರುಷರು ಆಶ್ರಯ ಪಡೆದುಕೊಂಡು ತಮ್ಮ ಜೀವನದ ಸಂದ್ಯಾ ಕಾಲದಲ್ಲಿದ್ದಾರೆ.
  ಈ ವೃದ್ದಾಶ್ರಮದಲ್ಲಿ ಆಶ್ರಯ ಪಡೆದವರಿಗೆ ಊಟ, ವಸತಿ, ಉಡುಪುಗಳನ್ನು ಉಚಿತವಾಗಿ ನೀಡಲಾಗುತ್ತಿದೆ, ಜತೆಗೆ ಇವರ ಆರೋಗ್ಯಕ್ಕಾಗಿ ಅವರವರ ರೋಗಗಳಿಗೆ ಅನುಗುಣವಾಗಿ ಔಷಧಿಗಳನ್ನು ಕೂಡ ನೀಡಲಾಗುತ್ತಿದೆ, ವಾರಕ್ಕೊಂದು ಬಾರಿ ವೈದ್ಯರೊಬ್ಬರು ಬೇಟಿ ಕೂಡ ಇಲ್ಲಿ ಎರ್ಪಾಡು ಮಾಡಲಾಗಿದೆ. ಗ್ರಾಮದ ಹೊರವಲಯದ ಎತ್ತರ ಪ್ರದೇಶದಲ್ಲಿ ಈ ವೃದ್ದಾಶ್ರಮ ಸ್ಥಾಪಿತವಾಗಿರುವುದರಿಂದ ಒಳ್ಳೆಯ ಗಾಳಿ, ಬೆಳಕು ಈ ವಯೋವೃದ್ದರಿಗೆ ಸಿಗಲಿದೆ ಜತೆಗೆ ವಾಯುವಿಹಾರಕ್ಕಾಗಿ ಸಾಕಷ್ಟು ಸ್ಥಳಾವಕಾಶ ಕೂಡ ವ್ಯವಸ್ಥೆ ಮಾಡಲಾಗಿದೆ.


  ವೃದ್ದಾಶ್ರಮದ ಮೆಲುಸ್ತುವಾರಿಯಾಗಿ ಡೇವಿಲ್ ಪ್ರಕಾಶ್ ಡಿಸೋಜ ರವರು ನೇಮಕಗೊಂಡು ಯಾವುದೇ ರೀತಿಯ ಚ್ಯುತಿ ಬಾರದ ರೀತಿಯಲ್ಲಿ ನೊಡಿಕೊಳ್ಳುತ್ತಿರುವುದು ಇವರಿಗೆ ಇಲ್ಲಿನ ಸಿಬ್ಬಂದಿಗಳಾದ ಮೂವರು ಮಂದಿ ಕನ್ಯಶ್ರಿಗಳು ಕೈಜೋಡಿಸಿ ವಯೋವೃದ್ದರ ಸೌಕರ್ಯಗಳನ್ನು ನೊಡಿಕೊಳ್ಳುತ್ತಿದ್ದಾರೆ.
  ಈ ಕಟ್ಟಡದಲ್ಲಿ ವಿಶಾಲವಾದ ಊಟದ ಹಾಲ್, ಪ್ರತ್ಯಕವಾಗಿ ಮಲಗುವ ಮಂಚಗಳು ಮತ್ತು ಹೊದಿಕೆ ವ್ಯವಸ್ಥೆ, ಸ್ನಾನಗೃಹ, ಶೌಚಾಲಯ ಮಹಿಳೆ ಮತ್ತು ಪುರುಷರಿಗಾಗಿ ಪ್ರತ್ಯಕವಾಗಿ ಆಳವಡಿಸಲಾಗಿದೆ. ಇವೆಲ್ಲವನ್ನು ಶುಚಿಯಾಗಿಡಲು ಸಿಬ್ಬಂದಿಗಳನ್ನು ನೇಮಿಸಿದ್ದು ಅತ್ಯಂತ ಅಚ್ಚುಕಟ್ಟಾಗಿ ಈ ವೃದ್ದಾಶ್ರಮವನ್ನು ಆಯೋಜನೆ ಮಾಡುವುದರ ಹಿಂದೆ ಪ್ರಾರಂಭದಿಂದ ಹಿಡಿದು ಈವರೆಗೆ ಎಲ್ಲಾ ಕೆಲಸಗಳಿಗೆ ಬೆನ್ನೆಲುಬಾಗಿ ನಿಂತುವರು ಸಾಮಾಜಿಕ ಸೇವಾ ಕರ್ತ ರವೀಶ್ ಇಂತದೆ ಸೇವೆಯಲ್ಲಿ ಸಮಾಜ ಸೇವಕರಾದ ಎಚ್.ಡಿ.ರಘವೇಂದ್ರ ಮತ್ತು ಅನುಪ್ ಸಾಥ್ ನೀಡುತ್ತಿದಾರೆ.

  ಇದಲ್ಲದೆ ಈ ವಯೋವೃದ್ದರಿಗೆ ಇಲ್ಲಿನ ಸಮಾಜ ಮುಖಿ ಸೇವಾ ಮನೋಭಾವವುಳ್ಳವರು ಅಗಿಂದ್ದಾಗೆ ವಿಶೇಷ ಬೋಜನ ಸೇರಿದಂತೆ ಅನೇಕ ಪರಿಕರಗಳನ್ನು ಕೂಡ ತಮ್ಮ ಸೇವೆ ಎಂದು ಭಾವಿಸಿ ನೀಡುತ್ತಿರುವುದು ಕೂಡ ಕಂಡು ಬಂದಿದೆ ಇದರ ಸೇವೆ ಸಮಾಜದಲ್ಲಿ ವಂಚಿತವಾದವರಿಗೆ ನಿರ್ಗತಿಕ ವಯೋವೃದ್ದರಿಗೆ ಸಿಗಬೇಕೆಂದು ಇವರ ಆಶಯವಾಗಿದೆ.
  ಏನೆ ಮಾಡಿದರು ಅದರಲ್ಲಿ ಜಾತಿ, ರಾಜಕೀಯ ಹಸ್ತಕ್ಷೇಪ ಇರುವಂತ ಇಂದಿನ ಸಮಾಜದ ವ್ಯವಸ್ಥೆಯೊಳಗೆ ಇಂತಹದೊಂದು ಸೇವಾ ಕಾರ್ಯಕ್ಕೆ ಕೈಹಾಕಿ ಮೂರು ವರ್ಷ ತುಂಬಿಸಿರುವ ಧರ್ಮಾಧಿಕಾರಿಗಳ ಚಿಂತನೆ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ. ಈ ವೃದ್ದಾಶ್ರಮ ಆಶ್ರಯ ತಾಣವಾಗಿ ಮತ್ತಷ್ಟು ಅಭಿವೃದ್ದಿಯಾಗಲಿ ಎಂಬುದು ಬಹಳಷ್ಟು ಸಮಾಜ ಮುಖಿ ಸೇವಾ ಕಾರ್ಯಕರ್ತರ ಆಶಯ ಕೂಡ ಹೌದು.
  “ಪಲ್ಲೋಟಿ ಶಾಂತಿಧಾಮ”ಕ್ಕೆ ಮಕ್ಕಳಿಂದ ವಂಚಿತರಾದ ತಾಯಿ-ತಂದೆ, ನಿರ್ಗತಿಕ ವಯೋವೃದ್ದರು ಇದ್ದಲ್ಲಿ ಅವರನ್ನು ಕರೆತಂದು ಈ ವೃದ್ದಾಶ್ರಮಕ್ಕೆ ಸೇರಿಸಲು ಅವಕಾಶವಿದೆ ಇಲ್ಲಿ ಜಾತಿ, ಧರ್ಮ ಸೊಂಕಿಲ್ಲಾ ಹಾಗಾಗಿ ಯಾರು ಬಂದು ಸೇರಲು ಅವಕಾಶವಿದೆ ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ 9902658272.

  ಸಂತ ಅಂತೋಣಿ ಆಶ್ರಯದ ಪ್ರಾರಂಬಿಸಿರುವ ನಮ್ಮ ವೃದ್ದಾಶ್ಮಕ್ಕೆ ಯಾವುದೇ ಧರ್ಮ, ಜಾತಿ, ಸೊಂಕಿಲ್ಲಾ, ಜಾತ್ಯತಿತವಾಗಿ ಯಾರು ಬಂದರು ಅವಕಾಶವಿದೆ ಈ ಸೇವೆಯನ್ನು ಜಿಲ್ಲೆಯ ಜನರು ಸದ್ಬಳಕೆ ಮಾಡಿಕೊಳ್ಳಬೇಕೆಂಬುದು ನಮ್ಮ ಉದ್ದೇಶ.

  :- ಜೀವನ್ ಎಸ್
  ಪತ್ರಿಕೋದ್ಯಮ ವಿದ್ಯಾರ್ಥಿ
  ಮಾನಸ ಗಂಗೋತ್ರಿ ಮೈಸೂರು

  NO COMMENTS

  LEAVE A REPLY