ತಾಲ್ಲೂಕಿನ ಹೆಬ್ಬಾಳ್ನ ಕೊಪ್ಪಲು ಗ್ರಾಮದಿಂದ ಬೀರನಹಳ್ಳಿ ಮುಖಂತಾರ ಕೆ.ಆರ್.ನಗರಕ್ಕೆ ಸಂಪರ್ಕಸಂಚಾರ ಅಸ್ತವ್ಯಸ್ಥವಾಗಿದೆ.

ತಾಲ್ಲೂಕಿನ ಹೆಬ್ಬಾಳ್ನ ಕೊಪ್ಪಲು ಗ್ರಾಮದಿಂದ ಬೀರನಹಳ್ಳಿ ಮುಖಂತಾರ ಕೆ.ಆರ್.ನಗರಕ್ಕೆ ಸಂಪರ್ಕಸಂಚಾರ ಅಸ್ತವ್ಯಸ್ಥವಾಗಿದೆ.

431
0
SHARE

ತಾಲ್ಲೂಕಿನ ಹೆಬ್ಬಾಳ್ನ ಕೊಪ್ಪಲು ಗ್ರಾಮದಿಂದ ಬೀರನಹಳ್ಳಿ ಮುಖಂತಾರ ಕೆ.ಆರ್.ನಗರಕ್ಕೆ ಸಂಪರ್ಕಸಂಚಾರ ಅಸ್ತವ್ಯಸ್ಥವಾಗಿದೆ.

ಕೆ.ಆರ್.ನಗರ.ಜು.20-

ತಾಲ್ಲೂಕಿನ ಹೆಬ್ಬಾಳ್ನ ಕೊಪ್ಪಲು ಗ್ರಾಮದಿಂದ ಬೀರನಹಳ್ಳಿ ಮುಖಂತಾರ ಕೆ.ಆರ್.ನಗರಕ್ಕೆ ಸಂಪರ್ಕ ತಲುಪುವ ರಸ್ತೆಯು ಹೆಬ್ಬಾಳು ಚಿಕ್ಕೆರೆ ಬಳಿ ರಸ್ತೆಯಲ್ಲಿ ಎರಡು ದಿನಗಳ ಸತತ ಮಳೆಯಿಂದಾಗಿ ಸಾರ್ವಜನಿಕರ ಸಂಚಾರ ಅಸ್ತವ್ಯಸ್ಥವಾಗಿದೆ.

ಹೆಬ್ಬಾಳ್ನ ಚಿಕ್ಕೆರೆಯಲ್ಲಿ ಹುಳ್ಳು ತುಂಬಿರುವುದರಿಂದ ಜಿಲ್ಲಾಡಳಿತ ಗುತ್ತಿಗೆದಾರರಿಗೆ ನೀಡಿತ್ತು. ಗುತ್ತಿಗೆದಾರರು ಕೆರೆಯಲ್ಲಿ ತಿಂಬಿದ ಹುಳ್ಳನ್ನು ಟ್ರ್ಯಾಕ್ಟರ್ ಮೂಲಕ ಬೇರೆಯ ಕಡೆಗೆ ಸಾಗಿಸುವಾಗ ಹುಳ್ಳು ರಸ್ತೆಯಲ್ಲಿ ಬಿದ್ದಿದ್ದು, ಕಳೆದ ಎರಡು ದಿನಗಳಿಂದ ಸುರಿದ ಜಿನಗು ಮಳೆಗೆ ರಸ್ತೆಯಲ್ಲಿ ಬಿದ್ದಿದ ಹುಳ್ಳು ತುಂಬಾ ರಾಡಿಯಾಗಿದ್ದು, ಇದರಿಂದ ಸಂಚಾರಕ್ಕೆ ಅಡ್ಡಚರಣೆಯಾಗಿದೆ.

ಗುತ್ತಿಗೆದಾರರು ಕೆರೆ ಹುಳ್ಳೆತ್ತುವ ಕೆಲಸವನ್ನು ಯಾವಗಳು ಬೆಸಿಗೆಯಲ್ಲಿ ಮಾಡಬೇಕು. ಆದರೆ ಗುತ್ತಿಗೆದಾರರು ಕಾಲುವೆಗೆ ನೀರು ಬರುವ ಸಮಯದಲ್ಲಿ ಆತುರದಲ್ಲಿ ಹುಳ್ಳೆತ್ತಿರುವ ಕೆಲಸವನ್ನು ಆರಂಭಿಸಿರುವುದರಿಂದ ಈ ಅವ್ಯವಸ್ಥೆಗೆ ಅಧಿಕಾರಿಗಳೆ ನೇರ ಹೊಣೆಯಾಗುತ್ತಾರೆ.
ಈ ರಸ್ತೆಯ ಪಕ್ಕದಲ್ಲಿ ಕೆರೆಯು ರಸ್ತೆಯ ಮಟ್ಟಕ್ಕೆ ಇರುವುದರಿಂದ ವಾಹನಗಳು ಸಂಚರಿಸುವಾಗ ಆಯಾತಪ್ಪಿದರೆ ನೇರವಾಗಿ ಕೆರೆಗೆ ಬೀಳುವ ಸಂಭವವಿದ್ದು, ಆದ್ದರಿಂದ ಜಿಲ್ಲಾಡಳಿತ ಎಚ್ಚೆತ್ತುಕೊಂಡು ಶೀಘ್ರವಾಗಿ ಈ ಕೆರೆಗೆ ತಡೆಗೋಡೆಯನ್ನು ನಿರ್ಮಿಸಿ ಮುಂದಾಗುವ ಅನಾವುತಗಳನ್ನು ತಪ್ಪಿಸಬೇಕೆಂದು ಸಾರ್ವಜನಿಕರು ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದಾರೆ.

:- ಜೀವನ್

NO COMMENTS

LEAVE A REPLY