ಕತ್ತಲಿಂದ ಬೆಳಕಿನೆಡೆಗೆ

ಕತ್ತಲಿಂದ ಬೆಳಕಿನೆಡೆಗೆ

272
0
SHARE

ಕತ್ತಲಿಂದ ಬೆಳಕಿನೆಡೆಗೆ 

ಮೈಸೂರು ಮ್ಯಾಟರ್ ವಾರ್ತೆ 

ಅಂಬೇಡ್ಕರ್ ಅವರ ಚಿಂತನೆಯನ್ನು ಕತ್ತಲಿನಲ್ಲಿ ಇಟ್ಟಿದ್ದ ಭಾರತ ಇಂದು ಬೆಳೆಕಿನೆಡೆಗೆ ತರುವ ಕೆಲಸವನ್ನು ಮಾಡಿದೆ ಎಂದು ಮಾಜಿ ಮೇಯರ್ ಪುರುಷೋತ್ತಮ್ ಅಭಿಪ್ರಾಯ ಪಟ್ಟರು.

ಮಾನಸ ಗಂಗೋತ್ರಿ ರೌಂಡ್ ಕ್ಯಾಂಟೀನ್ ಮುಂಭಾಗ ನೆಲೆ ಹಿನ್ನೆಲೆ ‌ ವತಿಯಿಂದ “ಸಮಾನತೆಯ ಅನ್ವೇಷಣೆ”  ವಿಷಯ ಆಧಾರಿತ ಅಂತಾರಾಷ್ಟ್ರೀಯ ಸಮ್ಮೇಳನದ ಪೂರ್ವಭಾವಿಯಾಗಿ ಬೀದಿ ನಾಟಕ ಪ್ರದರ್ಶನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.  

ರಂಗಕರ್ಮಿ ಎಚ್. ಜನಾರ್ಧನ್ ಮಾತನಾಡಿ 

ಅಂಬೇಡ್ಕರ್ ಅವರ ೧೨೬ ನೇ ವರ್ಷಾಚರಣೆಯ ಅಂಗವಾಗಿ ಬೆಂಗಳೂರಿನ ಗಾಂಧಿ ಕೃಷಿ ವಿಶ್ವವಿದ್ಯಾಲಯ ಕೇಂದ್ರದಲ್ಲಿ  ಬೃಹತ್ ಸಮಾವೇಶ ಆಯೋಜಿಸಲಾಗಿದೆ. ಈ ಸಮಾವೇಶದಲ್ಲಿ ಅಂಬೇಡ್ಕರ್ ಅವರ ತತ್ವ, ಸಿದ್ದಾಂತ, ಅವರ ಸಾಧನೆ, ಹೋರಾಟದ ಹಾದಿ ಕುರಿತಂತೆ ಮೈಸೂರಿನ ನೆಲೆಹಿನ್ನೆಲೆ,  ಚಾಮರಾಜನಗರದ ಸಂಕಲ್ಪ, ಹಾಸನ  ಜಿಲ್ಲೆಯ ಪ್ರಗತಿ ತಂಡದಿಂದ ನಾಟಕ ಪ್ರದರ್ಶಿಸಲಾಗುತ್ತದೆ.

ಮೂರು ತಂಡಗಳು ಆಯಾ ಜಿಲ್ಲೆಯಿಂದ ಹೊರಟು ಬೆಂಗಳೂರು ಸೇರಲಿದೆ. ಬೆಂಗಳೂರಿನಲ್ಲಿ ಜು.20ರವರೆಗೆ ಹಲವೆಡೆ ನಾಟಕಗಳನ್ನು ಪ್ರಸ್ತುತಪಡಿಸಲಿದ್ದು, ಅಂತಾರಾಷ್ಟ್ರೀಯ ಸಮ್ಮೇಳನದ ಮಹತ್ವವನ್ನು ಸಾರಲಿದೆ. ಈಗಾಗಲೇ 2000 ಮಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಇದೊಂದು ಚಳುವಳಿಯ ರೂಪದಲ್ಲಿ ನಡೆಯುತ್ತಿರುವ ಕಾರ್ಯಕ್ರಮ ಎಂದು ತಿಳಿಸಿದರು. 

ಈ ಸಂದರ್ಭ ಅಂಬೇಡ್ಕರ್ ಅಧ್ಯಯನ ಸಂಸ್ಥೆಯ ಡಾ.ನರೇಂದ್ರಕುಮಾರ್, ಕನ್ನ ಡ ಮತ್ತು ಸಂಸ್ಕೃತಿ ಇಲಾಖೆಯ ಉಪನಿರ್ದೇಶಕ ಚೆನ್ನಪ್ಪ, ಪುರುಷೋತ್ತಮ ಮತ್ತಿತರರು ಉಪಸ್ಥಿತರಿದ್ದರು.

:- ಮೋಹನ ಬಿ‌.ಎಂ ಮೈಸೂರು

NO COMMENTS

LEAVE A REPLY