ಇಂದಿನ ಪತ್ರಿಕಾ ಗೋಷ್ಠಿಗಳು

ಇಂದಿನ ಪತ್ರಿಕಾ ಗೋಷ್ಠಿಗಳು

331
0
SHARE

೧೬ ರಂದು ಪ್ರತಿಭಾ ಪುರಸ್ಕಾರ

ಮೈಸೂರು ಮ್ಯಾಟರ್ ವಾರ್ತೆ
 

ಜಿಲ್ಲಾ ಗಾಣಿಗರ ಸಂಘ ಹಾಗೂ ಮೈಸೂರು ನಗರ ಸಮಿತಿಯಿಂದ ಜು. ೧೬ ರಂದು ಪುರಭವನದಲ್ಲಿ  ಪ್ರತಿಭಾ ಪುರಸ್ಕಾರ ಮತ್ತು ಜನ ಪ್ರತಿನಿಧಿಗಳಿಗೆ ಅಭಿನಂದನಾ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ ಎಂದು ಅಧ್ಯಕ್ಷ ಎ.ಬಾಲಕೃಷ್ಣ ತಿಳಿಸಿದರು.

 ವರುಣಾ ಕ್ಷೇತ್ರದ ವಸತಿ ಜಾಗೃತಿ ಸಮಿತಿಯ ಅಧ್ಯಕ್ಷ ಡಾ.ಯತೀಂದ್ರ ಸಿದ್ದರಾಮಯ್ಯ ಉದ್ಘಾಟಿಸುವರು . ಉಪಸಭಾಪತಿ ಮರಿತಿಬ್ಬೇಗೌಡ, ಶಾಸಕರಾದ ವಾಸು, ಎಂ.ಕೆ. ಸೋಮಶೇಖರ್, ಜಿ.ಟಿ. ದೇವೇಗೌಡ ಉಪಸ್ಥಿತಿಯಲ್ಲಿ  ಭಾಗವಹಿಸುವರು. 

ಗಾಣಿಗರ ಜನಾಂಗದ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಎಸ್.ಎಸ್.ಎಲ್.ಸಿ ಹಾಗೂ ಪಿಯುಸಿ ಯಲ್ಲಿ ಶೇ.೬೦ಕ್ಕಿಂತ ಹೆಚ್ಚಿನ ಅಂಕ ಗಳಿಸಿರುವ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಹಾಗೂ ಈ ಹಿಂದೆ ಸೇವೆಸಲ್ಲಿಸಿರುವ ಪದಾಧಿಕಾರಿಗಳಿಗೆ  ಸನ್ಮಾನಿಸಲಾಗುವುದು ಎಂದರು.

 ೧೨೦ ವಿದ್ಯಾರ್ಥಿಗಳಿಗೆ ತಲಾ ೧ಸವಿರ ನಗದು ಬಹುಮಾನ ಮತ್ತು ಮೆಮೆಂಟೊ ಹಾಗೂ ಪ್ರಶಸ್ತಿ ಪತ್ರಗಳನ್ನು ನಿಡಿ ಗೌರವಿಸಲಾಗುವುದು ಎಂದು ಮಾಹಿತಿ ನೀಡಿದರು. 

ಸುದ್ದಿಗೋಷ್ಠಿಯಲ್ಲಿ ಮಾಜಿ ಮೇರ್ಯ ಅನಂತು, ಕಾರ್ಯದರ್ಶಿ ಮಹದೇವಶೆಟ್ಟಿ, ಶಿವಣ್ಣ, ಸತೀಶ್ ಇದ್ದರು .


 
 

೨೧ ರಿಂದ ಅಂತರಾಷ್ಟ್ರೀಯ ಸಮಾವೇಶ 

ಮೈಸೂರು ಮ್ಯಾಟರ್ ವಾರ್ತೆ
 

ನೆಲೆ ಹಿನ್ನೆಲೆ ಸಂಸ್ಥೆ  ವತಿಯಿಂದ ಡಾ. ಬಿ. ರ್ಆ. ಅಂಬೇಡ್ಕರ್ ಅವರ ೧೨೬ ನೇ ಜನ್ಮದಿನದ ಅಂಗವಾಗಿ ‘ಸಮಾನತೆ ಅನ್ವೇಷಣೆ’ ಎಂಬ ಘೋಷಣೆಯೊಂದಿಗೆ ಬೆಂಗಳೂರಿನ ಗಾಂಧಿ ಕೃಷಿ ವಿಶ್ವವಿದ್ಯಾನಿಲಯ ಕೇಂದ್ರದಲ್ಲಿ ‘ಡಾ. ಬಿ. ರ್ಆ. ಅಂಬೇರ್ಡ್ಕ ಅಂತರರಾಷ್ಟ್ರೀಯ ಸಮಾವೇಶ’ ವನ್ನು ಹಮ್ಮಿಕೊಳ್ಳಲಾಗಿದೆ ಎಂದು ಅಂಬೇಡ್ಕರ್ ಅಂತರರಾಷ್ಟ್ರೀಯ ಸಾಂಸ್ಕೃತಿಕ ರಜ್ಯ ಸಮಿತಿ ರಜ್ಯಾಧ್ಯಕ್ಷ ಎಚ್. ಜನಾರ್ಧನ್ ತಿಳಿಸಿದರು.

ಸಮಾವೇಶ ೨೧ ರಿಂದ ಮೂರು ದಿನಗಳ ಕಾಲ ನಡೆಯಲಿದ್ದು  ಅದಕ್ಕೆ ಪೂರಕವಾಗಿ ನೆಲೆ ಹಿನ್ನೆಲೆ ಸಂಸ್ಥೆಯ ನೇತೃತ್ವದಲ್ಲಿ ಜು. ೧೫ ರಿಂದ ೨೦ ರ ವರೆಗೆ ಮೈಸೂರು, ಹಾಸನ, ಚಾಮರಾಜನಗರ ಜಿಲ್ಲೆಗಳಲ್ಲಿ  ೫೦ ಜನ ಕಲಾವಿದರಿಂದ ಅಂಬೇಡ್ಕರ್ ಅವರು ನಡೆದು ಬಂದ ಹಾದಿ ಹಾಗೂ ಅಶಯ ಕುರಿತಂತೆ ಮೂರು ಬೀದಿ ನಾಟಕದ ತರಬೇತಿ ಮತ್ತು ಪ್ರದರ್ಶನ ನಡೆಯಲಿದೆ ಎಂದು ಅವರು ಶುಕ್ರವಾರ ನಡೆರದ ಸುದ್ದಿಗೋಷ್ಠಿಯಲ್ಲಿ ತಿಳಿಸದರು. 

ರಾಷ್ಟ್ರಮಟ್ಟದ ರಂಗ ನಿದೇರ್ಶಕ ನಾಟಕ ಪ್ರದರ್ಶನಕ್ಕೆ ತರಬೇತಿ ನಿಡಲಿದ್ದು  ಜು. ೧೭ ರಿಂದ ಮೈಸೂರು, ಹಾಸನ, ಚಾಮರಾಜನಗರ ಜಿಲ್ಲೆಯ ಪ್ರತಿನಿಧಿಗಳು ತಾಲೂಕು, ಹೋಬಳಿ, ಮತ್ತು ಹಳ್ಳಿಗಳಲ್ಲಿ ನಾಟಕ ಮತ್ತು ಹೋರಾಟ ಗೀತೆಗಳನ್ನು ಪ್ರಸ್ತುತಪಡಿಸಲಿದ್ದಾರೆ. ಹಾಗೂ ೨೧ ರಂದು ನಡೆಯುವ ಸಮ್ಮೇಳನದಲ್ಲಿ ೩೦೦ ಜನ ಕಲಾ ವಿದ್ವಾಂಸರು, ಹಾಗೂ ೮೦ ಜನ ವಿದೇಶಿ ಕಲಾರಸಿಕರು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸರು. 

ಸುದ್ಧಿಗೋಷ್ಠಿಯಲ್ಲಿ ನೆಲೆ ಹಿನ್ನೆಲೆ ಸಂಘಟಕ ಕೆ. ಆರ್.ಗೋಪಾಲಕೃಷ್ಣ, ಗಾಯಕ ದೇವಾನಂದ ವರಪ್ರಸಾದ್ ಸೇರಿದಂತೆ ಇದ್ದರು.


 

ಆಗಸ್ಟ್‌ನಲ್ಲಿ ಜಾತಿ ತಾರತಮ್ಯ ವಿರೋಧಿಸಿ ಸಮಾವೇಶ 

ಮೈಸೂರು ಮ್ಯಾಟರ್ ವಾರ್ತೆ
 

ನಂಜನಗೂಡಿನ ನವಿಲೂರು ತಾಲೂಕಿನಲ್ಲಿ ದಲಿತರ ಮೇಲಿನ ಅಸೃಶ್ಯತೆ ಹಾಗೂ ಜಾತಿ ತಾರತಮ್ಯ ವಿರೋಧಿಸಿ ಆಗಸ್ಟ್ ನಲ್ಲಿ ಸಮಾವೇಶ ನಡೆಸುವುದಾಗಿ ದಲಿತ ಹಕ್ಕುಗಳ ಸಮಿತಿ ಸಂಚಾಲಕ ಗೋಪಾಲಕೃಷ್ಣ ಹರಳಹಳ್ಳಿ ತಿಳಿಸಿದರು.

ಶಾಂತಿ ಸಭೆ ಹೆಸರಿನಲ್ಲಿ ಸಂಸದ ಆರ್.ಧ್ರುವನಾರಾಯಣ, ಕೇಶವಮೂರ್ತಿ ಮುಚ್ಚಳಿಕೆ ಬರೆಸಿಕೊಂಡು ದಲಿತರನ್ನು ಒಗ್ಗೂಡಿಸುವ ನೆಪದಲ್ಲಿ ಓಟಿನ ರಾಜಕೀಯ ಮಾಡುತ್ತಿದ್ದಾರೆ, ಇದು ಅಪರಾಧಿಗಳನ್ನು ಶಿಕ್ಷೆ ಮಾಡುವ ಬದಲು ಜಾತಿ ತಾರತಮ್ಯ ಹೆಚ್ಚಾಗಲು ಪ್ರಚೋದನೆ ನೀಡಿದಂತಾಗಿದೆ. ಇಷ್ಟಾದರೂ ರಾಜ್ಯಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ ಂದು ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಸರ್ಕಾರದ ನಡತೆಯನ್ನು ಖಂಡಿಸಿದರು.

ಈ ಹಿಂದೆ ಸಂತೇಮಾರನಹಳ್ಳಿ ಜಾತ್ರೆಯಲ್ಲಿ ಸಾಮಾಜಿಕ ಬಹಿಷ್ಕಾರ,ಚಾಮರಾಜ ನಗರದಲ್ಲಿ ದಲಿತ ಕೂಲಿ ಕಾರ್ಮಿಕರ ಜೋಡಿ ಕೊಲೆ ಸೇರಿದಂತೆ ಹಲವು ಪ್ರಕರಣಗಳು ದಾಖಲಾಗಿದ್ದರೂ ಸಹ ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಯಾವುದೇ ಕ್ರಮ ಕೈಗೊಂಡಿಲ್ಲ . ಹಾಗಾಗಿ ಈ ಪ್ರಕರಣಗಳ ಬಗ್ಗೆ  ನ್ಯಾಯಾಂಗ ತನಿಖೆ ನಡೆಸಿ ಅಪರಾಧಿಗಳನ್ನು ಪತ್ತೆ ಹಚ್ಚಬೇಕು.  ಇಂದು  ದಲಿತರ ಮೇಲೆ ಗ್ರಾಮಾಂತರ ಪ್ರದೇಶದಲ್ಲಿ ದೇವಸ್ಥಾನ ಪ್ರವೇಶ ನಿಷೇಧ, ಬಿಸಿಯೂಟ ತಯಾರಿಕೆಯಲ್ಲಿ ಜಾತಿ ತಾರತಮ್ಯ ನಡೆಯುತ್ತಿರುವುದರಿಂದ ಅವುಗಳ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ  ಸರ್ಕಾರದ ಗಮನ ಸೆಳೆಯಲು ಸಮಾವೇಶ ನಡೆಸಲಾಗುತ್ತಿದೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ರಾಜ್ಯ ಸಮಿತಿ ಸದಸ್ಯ ಶಕುಂತಲಾ, ಸಿಐಟಿಯು ಮುಖಂಡ ಹೆಚ್.ಎಸ್.ಜಗದೀಶ್, ಸತ್ಯರಾಜ್, ರ್ಆ.ಕೃಷ್ಣ ಇದ್ದರು.


 
 
 

ಶಾಲೆ ಮುಖ್ಯೋಪಾಧ್ಯರ ವಿರುದ್ದ ಆರೋಪ

ಮೈಸೂರು ಮ್ಯಾಟರ್ ವಾರ್ತೆ
 

ವಾಣಿವಿಲಾಸ ಅರಸು ಬಾಲಿಕಾ ಪ್ರೌಢಶಾಲೆಯ ಸಹ ಶಿಕ್ಷಕಿ ಬಿ.ಮಂಜುಳಾ ಶಾಲೆಯ ಮುಖ್ಯ ಶಿಕ್ಷಕಿ ಎಸ್. ರಾಜಮ್ಮ  ಅವಾಚ್ಯ ಶಬ್ದಗಳಿಂದ ನಿಂಧಿಸಿ ಮಾನಸಿಕ ಹಿಂಸೆ ನೀಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಅಲ್ಲದೆ ಮುಖ್ಯ ಶಿಕ್ಷಕಿ ಅವರ ಸಾತ್‌ನಿಂದ ಸಹ ಶಿಕ್ಷಕರಾದ ಟಿ.ಭಾರತಿ, ಎಸ್.ರಾಮಕೃಷ್ಣ ಇತರರು ಮಕ್ಕಳ ಎದುರೆ ಏಕ ವಚನದಲ್ಲಿ ನಿಂಧಿಸಿದ್ದಾರೆ. ಜು.೧೦ರಂದು ಶಾಲೆಯಲ್ಲಿಯೇ  ಶಿಕ್ಷಕ ಸುಬ್ರಹ್ಮಣ್ಯ ನಿಂಧಿಸಿದ್ದಲ್ಲದೆ ಹಲ್ಲೆ ನಡೆಸಿದ್ದಾರೆ. ಈ ಬಗ್ಗೆ ನಜರ್ ಬಾದ್ ಪೊಲೀಸ್ ಠಾಣೆಯು  ಶಾಲೆಯ ಆಡಳಿತ ಮಂಡಳಿಗೆ ದೂರು ನೀಡಿದ್ದರೂ ಸಹ ಯಾವುದೇ ಕ್ರಮ ಕೈಗೊಂಡಿಲ್ಲ . ಹಾಗಾಗು ಕೂಡಲೇ ಆಡಳಿತ ಮಂಡಳಿ ಕ್ರಮ ಕೈಗೊಳ್ಳುವಂತೆ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದ್ದಾರೆ. 


 
 
 

ಸತ್ಯಶೋಧನ ಸಮಿತಿ ರಚಿಸಲು ಆಗ್ರಹ

ಮೈಸೂರು ಮ್ಯಾಟರ್ ವಾರ್ತೆ
 

ಸಿಎಫ್ ಟಿ ರ್ಅ ಐ ನಿರ್ದೇಶಕ ಪ್ರೊ.ರಾಮರಾಜಶೇಖರನ್ ಅವಧಿಯಲ್ಲಿ ನಡೆದಿರುವ ಸಮಗ್ರ ಚಟುವಟಿಕೆಗಳ ಬಗ್ಗೆ ತನಿಖೆ ನಡೆಸಲು ‘ಸತ್ಯ ಸಂಶೋಧನ ಸಮಿತಿ’ಯನ್ನು ರಚಿಸಬೇಕೆಂದು ದಲಿತ ಹಿಂದುಳಿದ ಮತ್ತು ಅಲ್ಪಸಂಖ್ಯಾತರ ಸಮನ್ವಯ ವೇದಿಕೆ ಗೌರವಾಧ್ಯಕ್ಷ ಹರಿಹರ ಅನಂತಸ್ವಾಮಿ ಆಗ್ರಹಿಸಿದರು.

ಪ್ರೊ.ರಾಮರಾಜಶೇಖರನ್ ನಿಷ್ಠೆ ದಿಟ್ಟತನದಿಂದ ಕರ್ತವ್ಯ ನಿರ್ವಹಿಸುತ್ತಿದ್ದು  ಇದನ್ನು ಸಹಿಸದ ಕೆಲವು ಪ್ರಗತಿಪರ ಸಂಘಟನೆಗಳು ಅವರ ವಿರುದ್ಧ ಸುಳ್ಳು ಆರೋಪ ನಡೆಸಿ ತೇಜೋವಧೆ ನಡೆಸುತ್ತಿದ್ದಾರೆ.ಹಾಗೂ ಅವರು ಕನ್ನಡ ಭಾಷಾ ವಿರೋಧಿ ಎಂದು ಅಪಪ್ರಚಾರ ನಡೆಸುತ್ತಿದ್ದಾರೆ. ಹಾಗಾಗಿ ನ್ಯಾಯಾಂಗ ತಜ್ಞರ ಮುಂದಾಳತ್ವದಲ್ಲಿ ಸಮಿತಿ ರಚಿಸಿ ಸತ್ಯದ  ತಿಳಿಸಬೇಕು ಎಂದು ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ವರು ತಿಳಿಸಿದರು. 

ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಸಂಚಾಲಕರಾದ ಚುಂಚನಹಳ್ಳಿ ಮಲ್ಲೇಶ್, ದೇವಗಳ್ಳಿ ಸೋಮಶೇಖರ, ಆಲಗೂಡು ಶಿವಕುಮಾರ, ನಿಂಗರಾಜ ಮಲ್ಲಾಡಿ ಇದ್ದರು. 

:- ಮೋಹನ ಬಿ.ಎಂ. ಮೈಸೂರು

 

NO COMMENTS

LEAVE A REPLY