ಇಂದಿನ ಪತ್ರಿಕಾ ಗೋಷ್ಠಿಗಳು
‘ವೈಷ್ಣವಿ’ ಚಲನಚಿತ್ರ ಲೋಕಾರ್ಪಣೆ
ಮೈಸೂರು ಮ್ಯಾಟರ್ ವಾರ್ತೆ
ನಗರದ ಕ್ಯಾನ್ವಾಸ್ ಫಿಲಂಸ್ ಸಂಸ್ಥೆ ವತಿಯಿಂದ ಜು. ೧೪ ರ ಸಂಜೆ ೪.೪೦ಕ್ಕೆ ಜಯಲಕ್ಷ್ಮಿಪುರಂ ನ ಹಾಬಿಟೆಟ್ ಮಾಲ್ನಲ್ಲಿ ‘ವೈಷ್ಣವಿ’ ಕನ್ನಡ ಚಲನಚಿತ್ರ ಲೋಕಾರ್ಪಣೆಗೊಳಿಸುವರು ಎಂದು ಚಿತ್ರ ನಿರ್ಮಾಪಕ ಎಸ್. ನಾಗರಾಜು ತಿಳಿಸಿದರು.
ಪ್ರಪಂಚದ ಬಹಳಷ್ಟು ಆಚಾರ, ವಿಚಾರ, ಜಾತಿ-ಭೇದಗಳ ಬಗ್ಗೆ, ಗಂಡು ಹೆಣ್ಣಿನ ಸಮಾನತೆ, ತಾಂತ್ರಿಕ ಕ್ಷೇತ್ರದ ಸಂದೇಶವನ್ನು ಒಳಗೊಂಡಿರುವ ಈ ಚಿತ್ರ ನಾಯಕಿ ಪ್ರಧಾನ ಸಿನಿಮಾ ಆಗಿದೆ . ಚಿತ್ರಮಂತ್ರಿಗಳು ಸಿಗದ ಕಾರಣ ಡಿಆರ್ಸಿ ನಲ್ಲಿ ದಿನಕ್ಕೆ ೧ ಶೋ. ಮಾತ್ರ ನಡೆಲಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಸಹ ನಿರ್ಮಾಪಕ ಶಶಿಧರ್ ಸಂಗಾಪುರ, ಸಾಹಿತಿ ಎಸ್.ಕೃಷ್ಣೇಗೌಡ, ನಟಿ ಯಮುನಾ ನಾಗರಾಜ್ ಇದ್ದರು.
ಷಷ್ಟಿಪೂರ್ತಿ ಶಾಂತಿ ಮತ್ತು ಗುರುವಂದನಾ ಮಹೋತ್ಸವ
ಮೈಸೂರು ಮ್ಯಾಟರ್ ವಾರ್ತೆ
ಮಹದೇಶ್ವರ ಬೆಟ್ಟದಲ್ಲಿರುವ ಸಾಲೂರು ಬೃಹನ್ಮಠದ ವತಿಯಿಂದ ಪಟ್ಟದ ಗುರುಸ್ವಾಮಿ ಅವರಿಗೆ ಜು. ೧೫ ರ ಬೆಳಿಗ್ಗೆ ೧೦ ಗಂಟೆಗೆ ಷಷ್ಟಿಪೂರ್ತಿ ಶಾಂತಿ ಮತ್ತು ಗುರುವಂದನಾ ಮಹೋತ್ಸವವನ್ನು ಹಮ್ಮಿಕೊಳ್ಳಲಾಗಿದೆ ಎಂದು ಬಸವ ಬಳಗ ಒಕ್ಕೂಟದ ಮಾಜಿ ಅಧ್ಯಕ್ಷ ಎಂ.ಎಸ್. ಮಹದೇವಸ್ವಾಮಿ ತಿಳಿಸಿದರು.
ನಗರದ ಆಲನ ಹಳ್ಳಿಯಲ್ಲಿರುವ ಶಾಖಾಮಠದಲ್ಲಿ ಸುತ್ತೂರು ಕ್ಷೇತ್ರದ ಶಿವರಾತ್ರಿ ದೇಶಿಕೇಂದ್ರ ಸ್ವಾಮಿ ,ಸಿದ್ದಗಂಗಾ ಮಠದ ಸಿದ್ದಲಿಂಗ ಸ್ವಾಮಿ, ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮಿ ಸಾನಿಧ್ಯದಲ್ಲಿ ಪೌರಾಡಳಿತ ಸಚಿವ ಈಶ್ವರ ಖಂಡ್ರೆ ಕಾರ್ಯಕ್ರಮ ಉದ್ಘಾಟಿಸುವರು. ಶಾಸಕರದ ವಾಸು, ಎಂ.ಕೆ. ಸೋಮಶೇಖರ್, ಆರ್. ನರೇಂದ್ರ, ಗೀತಾ ಮಹದೇವಪ್ರಸಾದ್ ಮಾಜಿ ಶಾಸಕ ಪರಿಮಳ ನಾಗಪ್ಪ, ಮೈಸೂರು ಜಿ.ಪಂ. ಉಪಾಧ್ಯಕ್ಷ ಜಿ. ನಟರಾಜು, ಚಾಮರಾಜನಗರ ಜಿ.ಪಂ. ಉಪಾಧ್ಯಕ್ಷ ಎಸ್ ಬಸವರಾಜು ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದು ಶಾಸಕ ಜಿ.ಟಿ. ದೇವೇಗೌಡ ಅಧ್ಯಕ್ಷತೆ ವಹಿಸುವರು ಎಂದು ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಶನಿವಾರ ೧೦.೩೦ಕ್ಕೆ ತಾಂತ್ರಿಕ ಉಪನ್ಯಾಸ ಕಾರ್ಯಕ್ರಮವನ್ನುಆಯೋಜಿಸಿದ್ದು ಇದೇ ವೇಳೆ ವಿವಿಧ ಕ್ಷೇತ್ರದಲ್ಲಿನ ಸಾಧಕರನ್ನು ಸನ್ಮಾನಿಸಲಾಗುವುದು. ಜು. ೧೪ ರ ಸಂಜೆ ೬. ೩೦ ರಂದು ಮಹದೇಶ್ವರ ಪುತ್ಥಳಿಯನ್ನು ಮೆರವಣಿಗೆ ಮಾಡಲಾಗುವುದು ಎಂದು ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಸಾಲೂರು ಬ್ರಹ್ಮನ ಮಠದ ಅಧ್ಯಕ್ಷ ನಾಗೇಂದ್ರ, ಮೈಸೂರು ಘಟಕ ಅಧ್ಯಕ್ಷ ಎಂ.ಎನ್ ನಂಜುಂಡಸ್ವಾಮಿ , ಮಾಜಿ ಅಧ್ಯಕ್ಷ ಎಂ. ಬಸವರಾಜು ಇದ್ದರು.
ರಾಜಕೀಯ ಮೀಸಲಾತಿಗಾಗಿ ಒತ್ತಾಯ
ಮೈಸೂರು ಮ್ಯಾಟರ್ ವಾರ್ತೆ
ಅಖಿಲ ಭಾರತೀಯ ಭಾವಸಾರ ಕ್ಷತ್ರಿಯ ಮಹಾಸಭಾ ಸಂಘವು ರಾಜಕೀಯ ಕ್ಷೇತ್ರದಲ್ಲಿ ಮೀಸಲಾತಿಯನ್ನು ನೀಡುವಂತೆ ಸಂಘದ ರಾಜ್ಯಾಧ್ಯಾಕ್ಷ ಸುಧೀರ ನವಲೆ ಒತ್ತಾಯಿಸಿದರು.
ಭಾವಸಾರ ಕ್ಷತ್ರಿಯ ಸಮುದಾಯದಲ್ಲಿ ಪ್ರತಿಭಾವಂತರಿದ್ದಾರೆ ಆದರೆ ಸರ್ಕಾರ ಪ್ರಜಾ ಪ್ರತಿನಿಧಿಯಾಗಲು ಅರ್ಹವಿಲ್ಲ ಎಂದು ರಾಜಕೀಯ ಪ್ರಾತಿನಿಧ್ಯವನ್ನು ನಿರಾಕರಿಸಿದೆ. ಇದರಿಂದಾಗಿ ಸಮುದಾಯ ಬಹುತೇಕ ಸೌಲಭ್ಯಗಳಿಂತ ವಂಚಿತವಾಗಿದೆ. ಮುಂದಿನ ದಿನಗಳಲ್ಲಿ ಮೀಸಲಾತಿ ನೀಡದಿದ್ದಲ್ಲಿ ರಾಜ್ಯಾದ್ಯಂತ ಶಾಂತಿಯುತ ಪ್ರತಿಭಟನೆ ನಡೆಸುವುದಾಗಿ ತಿಳಿಸಿದರು.
ನಮ್ಮ ಸಮುದಾಯವು ರಾಜ್ಯ ಮಟ್ಟದ ಮಹಿಳಾ ಅಧಿವೇಶನ ನಡೆಸಿ ‘ಮಹಿಳಾ ಜಾಗೃತಿ ಸಂಚಲನ ಹಾಗೂ ಶೈಕ್ಷಣಿಕ ಅಭಿವೃದ್ದಿ ’, ಕೆಎಎಸ್, ಐಎಎಸ್ ಸ್ಪರ್ಧಾತ್ಮಕ ತರಭೇತಿ ಕೇಂದ್ರಗಳನ್ನು ಆರಂಭಿಸುವಂತಹ ಅನೇಕ ಅಭಿವೃದ್ದಿ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಲು ಸಜ್ಜಾಗಿದೆ.
ಆದರೆ ಸರ್ಕಾರ ಮೊದಲಿನಿಂದಲೂ ಆಶ್ವಾಸನೆಯನ್ನು ನೀಡುತ್ತಾ ಸೌಲಭ್ಯದಿಂದ ವಂಚಿತಗೊಳಿಸಿದೆ ಹಾಗಾಗಿ ಈ ಬಾರಿ ರಾಜ್ಯ ೨೨೪ ಎಂ.ಎಲ್.ಎ., ಎಂ.ಎಲ್.ಸಿ. , ೨೮ ಎಂ.ಪಿ. ಅವರಿಗೆ ಒಮ್ಮೆಲೆ ಮನವಿ ನೀಡಲು ನಿರ್ಧರಿಸಿದೆ. ಈ ಹೆನ್ನೆಲೆ ಡಿ. ೨೩, ೩೪ ರಂದು ಬೆಂಗಳೂರಿನಲ್ಲಿ ರಾಜ್ಯಮಟ್ಟದ ಬೃಹತ್ ಅಧಿವೇಷನ ಆಯೋಜಿಸಿದ್ದು ಪ್ರಮುಖ ಪಕ್ಷದ ನಾಯಕರೊಂದಿಗೆ ಮುಖ್ಯಮಂತ್ರಿ ಅವರಿಗೆ ಮನವಿ ಸಲ್ಲಿಸಲಿದ್ದೇವೆ ಎಂದು ಆಗ್ರಹಸಿದರು.
ಸುದ್ದಿಗೋಷ್ಠಿಯಲ್ಲಿ ಜಯರಾಮ್ ರಾವ್ ಲಾಳಗಿ, ಶಿವಾಜಿರಾವ್, ಸಂತೋಷ ಪತಂಗಿ ಇದರು
ಭಾರತಿಮೂರ್ತಿ ನಿವೃತ್ತಿಗೊಳಿಸಲು ಒತ್ತಾಯ
ಮೈಸೂರು ಮ್ಯಾಟರ್ ವಾರ್ತೆ