ಜಿಎಸ್‍ಟಿ ನೂತನ ಯೋಜನೆಗೆ ಸ್ವಾಗತಾರ್ಹ

  354
  0
  SHARE

  ಜಿಎಸ್‍ಟಿ ನೂತನ ಯೋಜನೆಗೆ ಸ್ವಾಗತಾರ್ಹ

  ಮೈಸೂರು ಮ್ಯಾಟರ್ :
  ಭಾರತ ಸರ್ಕಾರವೂ ಜಾರಿಗೊಳಿಸಿರುವ ಸರಕು ಮತ್ತು ಸೇವಾ ತೆರಿಗೆ-2017 ಸ್ವಾಗತಾರ್ಹವಾಗಿದೆ.
  ಸರಕು ಮತ್ತು ಸೇವಾ ತೆರಿಗೆ” ಯು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜಾರಿಗೊಳಿಸಿದ ಸಮಗ್ರ ಪರೋಕ್ಷ ತೆರಿಗೆಗಳು. ಇದು ಉತ್ಪಾದನೆ, ಮಾರಾಟ ಮತ್ತು ಬಳಕೆ, ಸರಕು ಮತ್ತು ಸೇವೆಗಳ ಬಗ್ಗೆ ಭಾರತದಾದ್ಯಂತ ವಿಧಿಸುವ ಸಮಗ್ರ ಪರೋಕ್ಷ ತೆರಿಗೆಯಾಗಿದೆ
  ಸ್ವತಂತ್ರ ಭಾರತದ ತೆರಿಗೆ ವ್ಯವಸ್ಥೆಯಲ್ಲಿ ಅತ್ಯಂತ ಕ್ರಾಂತಿಕಾರಕ ತೆರಿಗೆ ಸುಧಾರಣಾ ಕ್ರಮವಾಗಿದೆ . ಈ ಹಿಂದೆ ಜಿಎಸ್‍ಟಿ ಜಾರಿಯಾಗಿದ್ದನ್ನು ನೀವು ತಿಳಿಯುವುದಾದರೆ ,ಮಾರಾಟ ತೆರಿಗೆ -1957, ಸೇವಾ ತೆರಿಗೆ-1994, ಕೇಂದ್ರೀಯ ವ್ಯಾಟ್-2000, ಅಬಕಾರಿ ಸುಂಕ-1985, ಪ್ರವೇಶ ತೆರಿಗೆ 2000, ಮೌಲ್ಯವರ್ಧಿತ ತೆರಿಗೆ-2005 ಎಂಬ ತೆರಿಗೆಗಳನ್ನು ವಿಧಿಸಕಲಾಗಿತ್ತು.
  ಈ ವಿಷಯವಾಗಿ ಅರುಣ್ ಜೆಟ್ಲಿ ಅವರು ಮುಂಚಿತವಾಗಿಯೆ ಮಸೂದೆ ಮಂಡಿಸಿದ್ದರು. ಆ.8 ರ 2016 ರಂದು ರಾತ್ರಿ 9ರ ತನಕ ಈ ತೆರಿಗೆ ಬಗ್ಗೆ ಸುಧೀರ್ಘ ಚರ್ಚೆ ನಡೆಸಿದ್ದಾದರೂ
  ಆರಂಭದಿಂದಲೇ ಜಿಎಸ್‍ಟಿಯನ್ನು ವಿರೋಧಿಸುತ್ತಿರುವ ಎಐಎಡಿಎಂಕೆ ಸಭಾತ್ಯಾಗ ನಡೆಸುವ ಮೂಲಕ ಮತದಾನದಿಂದ ದೂರ ಉಳಿಯಿತು. ಇತರ ಎಲ್ಲ ಪಕ್ಷಗಳು ಮಸೂದೆಯನ್ನು ಬೆಂಬಲಿಸಿದವು. ಹಾಗಾಗಿ ಸಂವಿಧಾನ ತಿದ್ದುಪಡಿ ಮಸೂದೆಗೆ ರಾಜ್ಯಸಭೆ ಅವಿರೋಧ ಅಂಗೀಕಾರ ನೀಡಿತು. ಸದನದಲ್ಲಿ ಹಾಜರಿದ್ದ ಎಲ್ಲ 203 ಸದಸ್ಯರು ಮಸೂದೆಯ ಪರ ಮತ ಹಾಕಿದರು. ಇದೇ ಕಾರಣಕ್ಕಾಗಿ ಜು.1 ರ ಮಧ್ಯರಾತ್ರಿಯಲ್ಲಿ ಸಂಸತ್ತಿನ ಸೆಂಟ್ರಲ್ ಹಾಲ್‍ನಲ್ಲಿ ಮಧ್ಯರಾತ್ರಿ 12 ಗಂಟೆಗೆ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರು ಈ ಹೊಸ ತೆರಿಗೆ ವ್ಯವಸ್ಥೆಗೆ ಚಾಲನೆ ನೀಡಿದರು.
  ಜಿಎಸ್‍ಟಿ ಜಾರಿಗೆ ತರುವುದಕ್ಕೂ ಮುನ್ನ 29 ರಾಜ್ಯಗಳ ಪೈಕಿ ಕನಿಷ್ಠ 15 ರಾಜ್ಯಗಳು (ಶೇ 50ರಷ್ಟು) ಮಸೂದೆಗೆ ಅನುಮೋದನೆ ನೀಡಬೇಕಿದೆ. ಜೊತೆಗೆ ಹೊಸ ವ್ಯವಸ್ಥೆಯನ್ನು ಜಾರಿಗೆ ತರಲು ರಾಜ್ಯಗಳು ಸಜ್ಜಾಗಬೇಕಿವೆ. ವರಮಾನ ಹಂಚಿಕೆ ಮುಂತಾದ ವಿಚಾರಗಳ ಪೂರಕ ಮಸೂದೆಗಳು ಸಂಸತ್ತಿನ ಅಂಗೀಕಾರ ಪಡೆಯಬೇಕಿವೆ. ಹಾಗಾಗಿ ಏಪ್ರಿಲ್ ಒಂದರಿಂದಲೇಜಾರಿಗೆ ತರುವುದು ಕಷ್ಟ ಎಂಬ ವಾದ ಪ್ರತಿವಾದಗಳು ಕೇಳಿಬರುತ್ತಿದ್ದವು ಆದರೆ ಇದು ಏಕಾ-ಏಕೆ ಜಾರಿಗೆ ತಂದಿದ್ದೆ ಆದರೂ ಸಹ ಸಾಮಾನ್ಯರಿಗೂ ಸಹ ಸಹಕಾರಿಯಾಗಿದೆ ಸ್ವಲ್ಪ ಬೇಸರವೂ ತಂದಿದೆ.
  ಪ್ರತಿಯೊಂದು ವಸ್ತುಗಳ ಮೇಲೆ ಸರ್ಕಾರ ಜಿಎಸ್‍ಟಿ ತೆರಿಗೆಯನ್ನು ಜಾರಿ ಮಾಡಿದೆ ಆದರೆ ರೀಯಲ್ ಎಸ್ಟೇಟ್ ಒಂದನ್ನು ಹೊರತುಪಡಿಸಿ . ಆದರೆ ರೀಯಲ್ ಎಸ್ಟೇಟ್‍ನಲ್ಲಿ ಜಿಎಸ್‍ಟಿ ಬದಲಾಗಿ ವ್ಯಾಟ್ ಇದೆ. ಮುಂದಿನ ದಿನಗಳಲ್ಲಿ ರೀಯಲ್ ಎಸ್ಟೇಟ್‍ನಲ್ಲಿಯೂ ಸಹ 20% ಜಿಎಸ್‍ಟಿ ಜಾರಿಯಾಗುವ ಸಾಧ್ಯತೆ ಇದೆ ಎಂದು ಹಿಂದಿನ ದಿನಗಳಲ್ಲಿ ವಕೀಲರಾದ ಧೀರೇಂದ್ರ ಮೆಹ್ತಾ ತಿಳಿಸಿದ್ದಾರೆ.

  ಜಿಎಸ್‍ಟಿ ಜಾರಿಗೆ ಕಾರಣ
  ಜಿಎಸ್‍ಟಿ ತೆರಿಗೆ ಏಕಾ-ಏಕಿ ಜಾರಿಗೆ ತರುವಲ್ಲಿಗೆ ಕೆಲವು ತುರ್ತು ಕಾರಣಗಳಿವೆ. ಪ್ರಸ್ತುತ ಸೇವಾ ತೆರಿಗೆ ದರ ಶೇ 14.5 ರಷ್ಟಿದೆ. ಜಿಎಸ್‍ಟಿ ದರ ಶೇ 18 ರಷ್ಟು ನಿಗದಿಪಡಿಸಿದರೆ ಸೇವಾ ವಲಯಕ್ಕೆ ಹೊರೆ ಬೀಳಲಿದೆ. ಪ್ರವಾಸ, ವಿಮಾನ ಪ್ರಯಾಣ, ಆಂಬುಲೆನ್ಸ್ ಸೇವೆ, ಸಾಂಸ್ಕತಿಕ ಚಟುವಟಿಕೆ, ಕೆಲವೊಂದು ತೀರ್ಥಯಾತ್ರೆಗಳು, ಕ್ರೀಡಾ ಸ್ಪರ್ಧೆಗಳು ದುಬಾರಿಯಾಗಲಿವೆ. ಭಾರತದ ಆರ್ಥಿಕತೆಯಲ್ಲಿ ಸೇವಾ ವಲಯದ ಪಾಲು ಶೇ 57 ರಷ್ಟಿದೆ. ಆದ್ದರಿಂದ ತೆರಿಗೆ ದರ ಹೆಚ್ಚಿದರೆ ಆರ್ಥಿಕತೆಯ ಮೇಲೆ ಪರಿಣಾಮ ಬೀರಲಿದೆ. ಹೀಗೆ ಸ್ಥಳೀಯಾಡಳಿತ ಸಂಸ್ಥೆಗಳು ವಿಧಿಸುವ ತೆರಿಗೆಗಳು ಜೆಎಸ್‍ಟಿಯಲ್ಲಿ ಅಂತರ್ಗತವಾಗುವುದಿಲ್ಲ. ಈ ತೆರಿಗೆಗಳು ಪ್ರತ್ಯೇಕವಾಗಿಯೇ ಉಳಿಯಲಿವೆ ಎಂಬ ಕಾರಣದಿಂದಾಗಿ ಜಿಎಎಸ್‍ಟಿ ಜಾರಿಗೆ ತರಲು ಸರ್ಕಾರ ನಿರ್ಧರಿಸಿದೆ.

  ಜಿ.ಎಸ್‌ಟಿ ಅಗತ್ಯ
  ಪ್ರಸ್ತುತ ನಮ್ಮ ದೇಶದಲ್ಲಿ ವಿವಿಧ ರೀತಿಯ ತೆರಿಗೆ ವಿಧಾನಗಳಿವೆ. ಕೇಂದ್ರ ಮತ್ತು ಅಬಕಾರಿ ಸುಂಕ , ಸೇವಾ ತೆರಿಗೆ ಮತ್ತು ಕಸ್ಟಮ್ಸï ತೆರಿಗೆಗಳನ್ನು ಕೇಂದ್ರ ಸರ್ಕಾರ ಹಾಕುವುದಿದ್ದರೆ, ಮೌಲ್ಯವರ್ಧಿತ ತೆರಿಗೆವ್ಯಾಟï , ಮನರಂಜನಾ ತೆರಿಗೆ, ತೆರಿಗೆ ಅಥವಾ ಲಾಟರಿ ತೆರಿಗೆಗಳನ್ನು ಆಯಾ ರಾಜ್ಯ ಸರಕಾರಗಳು ವಿಭಿನ್ನವಾಗಿ ನಿಭಾಯಿಸುತ್ತವೆ. ಈ ಎಲ್ಲಾ ತೆರಿಗೆಗಳನ್ನು ಒಂದೇ ತೆರಿಗೆ ವಿಧಾನದಡಿ ತರಲು ಜಿಎಸ್‍ಟಿಯನ್ನು ಜಾರಿಗೆ ತರಲಾಗುತ್ತದೆ.
  ಇದರಿಂದ ದೇಶಾದ್ಯಂತ ಯಾವುದೇ ಅಡೆತಡೆಯಿಲ್ಲದೆ ವಹಿವಾಟು ನಡೆಸಬಹುದು. ವಹಿವಾಟು ವೆಚ್ಚ ಕೂಡ ಕಡಿಮೆಯಾಗುತ್ತದೆ. ಭಾರತದ ಆರ್ಥಿಕ ಮಟ್ಟ ಸುಧಾರಣೆಯಾಗುತ್ತಿರುವ ಇಂದಿನ ದಿನಗಳಲ್ಲಿ ಈ ತೆರಿಗೆ ಪದ್ದತಿ ಪ್ರಸ್ತುತವಾಗಿದೆ.ಇದು ಭ್ರಷ್ಟತೆಯನ್ನು ಕಡಿಮೆ ಮಾಡಿ ಹೆಚ್ಚು ಪಾರದರ್ಶಕವಾಗಿ ಆಡಳಿತ ನಡೆಸಲು ಅನುಕೂಲವಾಗುವ ಉದ್ದೇಶಕ್ಕೆ ಜಿಎಸ್‍ಟಿ ಅಗತ್ಯವಾಗಿದೆ.

  ಮೋಹನ ಬಿ.ಎಂ. ಮೈಸೂರು

  NO COMMENTS

  LEAVE A REPLY