ವೇಳಾಪಟ್ಟಿ ಬದಲಾವಣೆಗೆ ವಿದ್ಯಾರ್ಥಿಗಳಿಂದ ನೀರಸ ಪ್ರತಿಕ್ರಿಯೆ

ವೇಳಾಪಟ್ಟಿ ಬದಲಾವಣೆಗೆ ವಿದ್ಯಾರ್ಥಿಗಳಿಂದ ನೀರಸ ಪ್ರತಿಕ್ರಿಯೆ

362
0
SHARE

ವೇಳಾಪಟ್ಟಿ ಬದಲಾವಣೆಗೆ ವಿದ್ಯಾರ್ಥಿಗಳಿಂದ ನೀರಸ ಪ್ರತಿಕ್ರಿಯೆ

ಮೈಸೂರು ಮ್ಯಾಟರ್ ವಾರ್ತೆ

ಕಾಲೇಜು ಶಿಕ್ಷಣ ಇಲಾಖೆಯು ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಿಗೆ ಹೊಸ ವೇಳಾಪಟ್ಟಿಯನ್ನು ಜಾರಿಗೆ ತರಲಾಗಿದ್ದು ಇದರಿಂದ ಬಹುತೇಕ ದ್ಯಾರ್ಥಿಗಳು ನೀರಸ ಪ್ರತಿಕ್ರಿಯೆ ತೋರಿದ್ದಾರೆ.
ಆಡಳಿತಾತ್ಮ ಮತ್ತು ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಕಾಲೇಜು ಶಿಕ್ಷಣ ಆಯುಕ್ತ ಎಂ.ಎಸ್. ಅಜಯ್ ನಾಗಬೂಷಣ್ ಅವರು
ಬೆಳಿಗ್ಗೆ 8 ಗಂಟೆಗೆ ತರಗತಿ ಆರಂಭಿಸುವಂತೆ ಆದೇಶ ಹೊರಡಿಸಿದ್ದಾರೆ. ವಿದ್ಯಾರ್ಥಿಗಳಿಗಾಗಿಯೇ ಇಂದು ಉಚಿತ ಸ್ಪೋಕನ್ ಇಂಗ್ಲೀಷ್, ಕಂಪ್ಯೂಟರ್ ತರಬೇತಿ ತರಗತಿಗಳು ನಡೆಯುತ್ತಲಿವೆ. ಬೆಳಿಗ್ಗೆ ವೇಳೆ ಅವರು ಬೇಗನೇ ಬರುವುದರಿಂದ ಮುಂಜಾನೆಯ ವಾತಾವರಣದಲ್ಲಿ ಮೆದುಳು ಚುರುಕಾಗಿರುತ್ತದೆ ಉಪನ್ಯಾಸಕರು ಮಾಡುವ ಅಧ್ಯಾಯಗಳು ಹೆಚ್ಚಾಗಿ ಲಭ್ಯವಾಗುತ್ತದೆ ಎನ್ನುವ ಉದ್ದೇಶದಿಂದ ವೇಳಾಪಟ್ಟಿ ಬದಲಾವಣೆಗೆ ಆದೇಶ ನೀಡಲಾಗಿದೆ ಎನ್ನುತ್ತಾರೆ. ಆದರೆ ಪದವಿ ತರಗತಿಗಳ ವೇಳಾಪಟ್ಟಿ ಬದಲಾವಣೆ ಮಾಡಿರುವುದು ಉತ್ತಮ ಉದ್ದೇಶದಿಂದಲೆ ಆದರೂ ಗ್ರಾಮೀಣ ವಿದ್ಯಾರ್ಥಿಗಳಿಗೆ ಇದು ಸಮಸ್ಯೆ ಉಂಟಾಗುತ್ತದೆ. ಏಕೆಂದರೆ ಬೆಳೆಗ್ಗೆ ಅವರ ವಯಕ್ತಿಕ ಕೆಲಸಗಳನ್ನು ಮುಗಿಸಿ ಬೇಗನೆ ಬರಲು ಸಾಧ್ಯವಾಗುವುದಿಲ್ಲ . ಜತೆಗೆ ಮಧ್ಯಾಹ್ನದ ವೇಳೆ ಅವರಿಗೆ ಬೇಕಾದ ಉಪಹಾರವನ್ನು ಸಂಗ್ರಸಿಕೊಂಡು ಬರುವುದು ಹಾಗೂ ಸಮಯಕ್ಕೆ ಸರಿಯಾದ ಬಸ್ ವ್ಯವಸ್ಥೆ ಸಿಗುವುದಿಲ್ಲ ಎಂಬ ಕಾರಣಕ್ಕೆ ಗ್ರಾಮೀಣ ವಿದ್ಯಾರ್ಥಿಗಳಿಗೆ ನೀರಸ ಪ್ರತಿಕ್ರಿಯೇ ತೋರಿದ್ದಾರೆ. ಹಾಗಿದ್ದರೆ ಈ ಪದ ಶಿಕ್ಷಣದ ವೇಳಾಪಟ್ಟಿ ವರವೊ ಶಾಪವೋ ಎಂಬುದು ದ್ಯಾರ್ಥಿಗಳಿಂದಲೇ ತಿಳಿಯುವುದು ಉತ್ತಮ.

9 ಗಂಟೆ ತರಗತಿ ನಡೆಯುವಾಗಲೇ ನಾವೂ 7 ಗಂಟೆಗೆ ಮನೆಯಿಂದ ಹೊರಡುತ್ತಿದ್ದೆವು 8 ಗಂಟೆಗೆ ತರಗತಿ ನಡೆಸಿದರೆ 6 ಗಂಟೆಗೆ ಮನೆ ಬಿಡಬೇಕಾಗುತ್ತದೆ. 6 ಗಂಟೆಗೆ ಮನೆ ಬಿಡಬೇಕಾದರೆ ನಾವೂ 5 ಗಂಟೆಗೆ ಎದ್ದು ತಯಾರಾಗಬೇಕಾಗುತ್ತದೆ ಇದರಿಂದ ಬೇಕಾದ ಉಪಹಾರಕ್ಕೆ ತೊಂದರೆಯಾಗುತ್ತದೆ.
ಆರ್. ಮಧು ಮಹಾರಾಜ ಕಾಲೇಜು.

ಸಮರ್ಪಕವಾದ ಬಸ್ ವ್ಯವಸ್ಥೆ ಇಲ್ಲದಿರುವಾಗ 8 ಗಂಟೆಗೆ ಬರವುದು ಎಂದರೆ ಸಮಸ್ಯೆ ಜತೆಗೆ ಹಾಸ್ಯವೂ ಎನ್ನಿಸುತ್ತದೆ. 8 ಗಂಟೆಗೆ ಸಮಯ ನಿಗಧಿ ಮಾಡುವು ಬದಲಾಗಿ 9.30 ಕ್ಕೆ ವೇಳಾಪಟ್ಟಿ ಬದಲಾಯಿಸಿದರೆ ತುಂಬಾ ಅನುಕೂಲವಾಗುತ್ತದೆ.
ಸಿ. ಯಶವಂತ್ ವಿದ್ಯಾವರ್ಧಕ ಪ್ರಥಮ ದರ್ಜೆ ಕಾಲೆಜು.

:- ಮೋಹನ ಬಿ.ಎಂ. ಮೈಸೂರು

NO COMMENTS

LEAVE A REPLY