ನಾನು ನನ್ನ ಎಲೆಕ್ಟ್ರಿಕ್ ಗಾಡಿ

ನಾನು ನನ್ನ ಎಲೆಕ್ಟ್ರಿಕ್ ಗಾಡಿ

335
0
SHARE

ನಾನು ನನ್ನ ಎಲೆಕ್ಟ್ರಿಕ್ ಗಾಡಿ

ಇದೊಂದು ಪರಿಸರ ಸ್ನೇಹಿ ಬೈಕ್, ಪೆಟ್ರೋಲ್‍ಗಾಗಿ ಬಂಕ್‍ಗಳತ್ತ ತಿರುಗಿಯೂ ನೋಡಲ್ಲ, ಡಿಎಲ್ ಇದಕ್ಕೆ ಬೇಕಿಲ್ಲ, ಹೆಲ್ಮಟ್ ಹಾಕುವ ಅವಶ್ಯಕತೆ ನನ್ನ ಗಾಡಿಗಿಲ.್ಲ ಭಾರಿ ಸದ್ದು ಮಾಡುವ ವಾಹನಗಳ ಮಧ್ಯೆ ಶಬ್ಧಮಾಲಿನ್ಯವಿಲ್ಲದೆ ಜೂಯ್ó ಎಂದು ಸಾಗುತೆ.್ತ ಪರಿಸರ ಕಾಳಜಿಯುಳ್ಳ ಗಾಡಿಯೇ ನನ್ನ ಎಲೆಕ್ಟ್ರಿಕ್ ಗಾಡಿ.
ಅದೇಗೋ ಡಿಗ್ರಿಯ ವರೆಗೆ ಬಸ್ಸಿನಲ್ಲೆ ಕಾಲೇಜಿಗೆ ಹೋಗಿದ್ದೆ. ಇದೀಗ ಎಂ.ಎ ಪದವಿಗಾಗಿ ಮಾನಸ ಗಂಗೋತ್ರಿ ಕಾಲೇಜಿಗೆ ಸೇರಿದಾಗ ನನಗೆ ಗಾಡಿ ಕಲಿಯುವುದು ಅನಿವಾರ್ಯವಾಗಿತ್ತು. ಮನೆಯಲ್ಲೊಂದು ಹೆಚ್ಚು ಉಪಯೋಗಿಸದ ಅಧಿಕ ವಿಶ್ರಾಂತಿ ಪಡೆಯುತ್ತಿದ್ದ ಹೊಸ ಎಲೆಕ್ಟ್ರಿಕ್ ಸ್ಕೂಟರ್ ಓಡಿಸಲು ಕಲಿತುಕೊಂಡೆ. ಕಾಲೇಜಿಗೆ ಈ ಗಾಡಿಯಲ್ಲಿ ಬರುವಾಗ ಏನಿಲ್ಲ ಅಂದ್ರು ದಿನಕ್ಕೆ 3 ಜನ ಅಪರಿಚಿತರು ಪರಿಚಯ ಆಗ್ತಾ ಇದ್ದಾರೆ. ಯಾಕೆ ಅಂತ ಆಶ್ಚರ್ಯ ಆಗ್ತಾ ಇದ್ಯಾ? ಸಿಗ್ನಲ್‍ನಲ್ಲಿ ನಿಂತಾಗ ಅಕ್ಕ ಪಕ್ಕದ ಸವಾರರು ‘ಏನಮ್ಮ ಇದಕ್ಕೆ ಪೆಟ್ರೋಲ್ ಹಾಕಂಗಿಲ್ವ?, ಎಷ್ಟೋತ್ತು ಚಾರ್ಚ್‍ಗೆ ಹಾಕಬೇಕು?, ಎಷ್ಟು ಕಿ.ಮೀ ಬರುತ್ತೆ? ಗಾಡಿಗೆ ಎಷ್ಟು ಕೊಟ್ರಿ? ಎಂದು ಸಿಂಗ್ನಲ್‍ನಲ್ಲೇ ನನ್ನ ಗಾಡಿ ಬಗ್ಗೆ ಇಂಟರ್‍ವ್ಯೂ ಆಗುತ್ತೆ. ಕಮ್ಮಿ ಅಂದ್ರು ಜಯನಗರದಿಂದ ಗಂಗೋತ್ರಿ ಕಾಲೇಜಿನ ವರೆಗೆ 2 ಬಾರಿಯಾದರು ಈ ಗಾಡಿ ಇಂಟರ್‍ವ್ಯೂಗೆ ಒಳಗಾಗುತ್ತೆ. ಪಕ್ಕದ ಸವಾರರು ಸ್ಕೂಟರ್ ಬಗ್ಗೆ ವಿಚಾರಿಸುವಾಗ, ಹಿಂದೆ-ಮುಂದೆ, ಅಕ್ಕ-ಪಕ್ಕದ ಸವಾರರು ಇತ್ತ ಕಿವಿಗೊಟ್ಟು, ಒಮ್ಮೆ ತಮ್ಮ ಕಣ್ಣಲ್ಲೆ ಗಾಡಿನ ಒಂದು ಸುತ್ತು ಸ್ಕ್ಯಾನ್ ಮಾಡುತ್ತಾರೆ. ಸಿಗ್ನಲ್‍ನ ಸುಮಾರು 30 ಸೆಕೆಂಡ್‍ಗಳ ಕಾಲ ಅದೇನೋ ಸೆಲೆಬ್ರಿಟಿ ಫೀಲ್‍ಕೊಡುತ್ತೆ ಕಣ್ರೀ.
ಇನ್ನು ಮಾನಸ ಗಂಗೋತ್ರಿಯ ಕುವೆಂಪು ಸ್ಟ್ಯಾಚು ಮೇನ್ ಗೇಟಿನಿಂದ ಕಾಲೇಜಿನ ಒಳಗೆ ಪ್ರವೇಶಿಸುವಾಗ ‘ಇದೆನ್ಲಾ ಮಗಾ ಸೌಂಡೇ ಇಲ್ಲ.. ಎಂದು ಗಾಡಿಯನ್ನೆ ದಿಟ್ಟಿಸಿದಾಗ ಅದೇನೋ ಹೇಳಿಕೊಳ್ಳದ ಖುಷಿ. ನಮ್ಮ ಕ್ಲಾಸಿನ ಹುಡುಗರಂತೂ ಒಂದು ರೌಂಡು ಪ್ಲೀಸ್ ಎಂದು ಓಡಿಸಿ ನನ್ನ ಗಾಡಿ ಚಾರ್ಚ್‍ನೆಲ್ಲಾ ಕಾಲಿ ಮಾಡ್ತಾರೆ. ಮೊದ ಮೊದಲು ನಮ್ಮ ಸಹಪಾಠಿಗಳು ನನ್ನ ಗಾಡಿ ಕೀ ನೋಡಿ, ನಾನು ಕಾರಲ್ಲಿ ಬರ್ತಿನಿ ಅನ್ಕೊಂಡಿದ್ರು ಯಾಕಂದ್ರೆ ನನ್ನ ಗಾಡಿಗೆ ಕಾರಿನ ತರಹದ ರಿಮೋಟ್ ಲಾಕರ್ ಕೀ ಇದೆ. ರಿಮೋಟ್‍ನಿಂದ ಲಾಕ್ ಬಟನ್ ಒತ್ತಿದರೆ ನನ್ನ ಗಾಡಿನ ಯಾರೇ ಮುಟ್ಟಿದರು ಸೈರನ್ ತರ ಕೂಗಿಕೊಳ್ಳುತ್ತೆ. ಕೆಲವು ಹುಡುಗರು ತಮ್ಮ ಕೆದರಿದ ಕೂದಲನ್ನು ಸರಿಪಡಿಸಿಕೊಳ್ಳಲು ಗಾಡಿಯ ಕನ್ನಡಿಯನ್ನು ತಮ್ಮ ಮುಖಕ್ಕೆ ತಿರುಗಿಸಿಕೊಂಡಾಗ ತಕ್ಷಣ ಜೋರಾದ ಸೌಂಡ್ ಹೊಡೆದುಕೊಂಡು ಗಾಬರಿ ಬೀಳಿಸಿದೆ ಈ ಗಾಡಿ.
ರಸ್ತೆಯಲ್ಲಿ ಡಿಎಲ್, ಹೆಲ್ಮೆಟ್ ಪರಿಶೀಲಿಸು ವೈಟ್ ಅಂಡ್ ಖಾಕಿ ಬಟ್ಟೆಯ ಪೊಲೀಸರಿಗೆ ನಾನು ನನ್ನ ಗಾಡಿ ಹೆದರೊಲ್ಲ. ಹೆಲ್ಮೆಟ್ ಹಾಕದೆ ಬರುತ್ತಿದ್ದ ನನ್ನನ್ನು ದೂರದಿಂದಲೇ ಅದೆಷ್ಟೋ ಮಂದಿ “ಮೇಡಂ ಹೆಲ್ಮೆಟ್ ಹಾಕಿ, ಮುಂದೆ ಪೊಲೀಸರಿದ್ದಾರೆ’ ಎಂದು ಹೇಳಿದಾಗ ಹೆಲ್ಮಟ್ ಹಾಕದಿದ್ರು, ಡಿಎಲ್ ಇಟ್ಟುಕೊಳ್ಳದಿದ್ರು ನಿರಾಳವಾಗಿ ಹೋಗುವುದನ್ನು ಬೇರೆ ಸವಾರರು ನೋಡಿದಾಗ ಆಶ್ಚರ್ಯವೋ ಆಶ್ಚರ್ಯ, ಹೆಲ್ಮಟ್ ಇಲ್ಲದಿದ್ರು ಯಾಕೆ ಅವರನ್ನು ಪೊಲೀಸರು ಹಿಡಿಯಲಿಲ್ಲ ಅಂಥ. ಒಮ್ಮೆಮ್ಮೆ ಸಂಚಾರಿ ಪೊಲೀಸರು ಗಾಡಿ ಪರಿಶೀಲಿಸುತ್ತಿರುವುದು ಕಂಡಾಗ ಬೇಕಂತಲೆ ಗಾಡಿ ಸ್ಲೋ ಮಾಡಿಕೊಂಡು ‘ನೀವು ನನ್ನ ಹಿಡಿಯೋಕೆ ಆಗಲ್ಲ’ ಎಂಬಂತೆ ಅಣಕಿಸುವಂತೆ ಅವರನ್ನೆ ನೋಡಿಕೊಂಡು ಗತ್ತಿನಿಂದ ಬರುವುದು ಎಂದರೆ ಎಲ್ಲಿಲ್ಲದ ಖುಷಿ.
ಒಮ್ಮೆ ಕುವೆಂಪುನಗರದಲ್ಲಿ ಪೊಲೀಸರೊಬ್ಬರು ಅಡ್ಡಗಟ್ಟಿ ನಿಲ್ಲಿಸಿದ್ರು, ‘ಸಾರ್ ಬ್ಯಾಟರಿ ಗಾಡಿ’ ಎಂದೆ ಅದಕ್ಕೆ ಅವರು ಓ ಹೌದಾ,,, ಎಂದು ರಾಗಎಳೆದು ಮತ್ತದೇ ಗಾಡಿ ಇಂಟರ್‍ವ್ಯೂ ಮಾಡುತ್ತಾ ಮಾತಿಗಿಳಿದಿದ್ದರು. ದೂರದಿಂದಲೇ ಈ ದೃಶ್ಯ ನೋಡಿದ್ದ ಪರಿಚಿತರೊಬ್ಬರು ನಮ್ಮ ಮನೆಗೆ ಹೋಗಿ ‘ನಿಮ್ಮ ಮಗಳ ಗಾಡಿಯನ್ನು ಹಿಡಿದಿದ್ದಾರೆ, ಪೊಲೀಸರು ಸುಮಾರು ಹೊತ್ತಿನಿಂದ ನಿಲ್ಲಿಸಿಕೊಂಡಿದ್ದಾರೆ’ ಎಂದು ಪುಂಗಿ ಊದಿದ್ದರು. ಅಂದು ಮನೆಯಿಂದ ನನಗೆ ಐದಾರು ಫೋನ್ ಬಂದಿತ್ತು. ಒಟ್ಟಿನಲ್ಲಿ ಗಾಡಿಯೊಟ್ಟಿಗಿನ ಈ ಫಜೀತಿಗಳಲ್ಲೂ ಒಂಥರಾ ಖುಷಿ ಇದೆ. ನನ್ನ ಗಾಡಿ ಏರಿ ರಸ್ತೆಗಿಳಿದ್ರೆ ಹಲವು ಪ್ರಸಂಗಗಳು ನನ್ನನ್ನು ಆವರಿಸಿ ಪುಳುಕಿತಗೊಳಿಸುತ್ತಿದೆ.

:- ಕವ್ಯಾ ನಾಯಕ್

NO COMMENTS

LEAVE A REPLY