ಸಂವಿಧಾನಕ್ಕೆ ಜಯ, ಕೇಂದ್ರ ಸರ್ಕಾರಕ್ಕೆ ಮುಖ ಭಂಗ

  352
  0
  SHARE

  ಸಂವಿಧಾನಕ್ಕೆ ಜಯ, ಕೇಂದ್ರ ಸರ್ಕಾರಕ್ಕೆ ಮುಖ ಭಂಗ

  ಸಂವಿಧಾನಕ್ಕೆ ಜಯ, ಕೇಂದ್ರ ಸರ್ಕಾರಕ್ಕೆ ಮುಖ ಭಂಗ
  ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಮೇ ೨೬, ೨೦೧೭ ರಂದು ದೇಶಾದ್ಯಂತ ಗೋಹತ್ಯೆಯನ್ನು ನಿಷೇಧಿಸಿತ್ತು ಹಾಗು ಗೋವಿನ ಮೇಲೆ ಕ್ರೌರ್ಯ ನಿಷೇಧ ಕುರಿತಂತೆ ಜಾರಿಗೊಳಿಸಿದ ಮಸೂದೆಯು ದೇಶದ್ಯಾಂತ ಪ್ರಗತಿಪರರು, ಕಾನೂನು ತಜ್ಞರು ಮತ್ತು ವಿರೋಧ ಪಕ್ಷಗಳ ವ್ಯಾಪಕ ವಿರೋಧ ಮತ್ತು ಟೀಕೆಗೆ ಒಳಗಾಗಿತ್ತು. ಈ ಸಂಬಂಧ ವಿವರಣೆ ನೀಡುವಂತೆ ಸುಪ್ರೀಂಕೋರ್ಟ್ ಕೇಂದ್ರ ಸರ್ಕಾರಕ್ಕೆ ಸೂಚಿಸಿತ್ತು. ಈ ಇನ್ನಲೆಯಲ್ಲಿ ಮೈಸೂರು ನಗರ ಚಾರ್ವಾಕ ಸಂಘಟನೆಯ ವತಿಯಿಂದ ೨೬-೦೬-೨೦೧೭ ರಂದು ಮೈಸೂರಿನ ಕಲಾಮಂದಿರದಲ್ಲಿ ಆಹಾರ ಸಂಸ್ಕೃತಿ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ ಕುರಿತ ವಿಚಾರ ಸಂಕಿರಣ ಆಯೋಜಿಸಿತ್ತು.
  ಮುಖ್ಯ ಅಥಿತಿಗಳಾಗಿ ಆಗಮಿಸಿದ್ದ ಪ್ರೊ ಕೆ ಎಸ್ ಭಗವಾನ್, ಪ್ರೊ. ಬಿ ಪಿ ಮಹೇಶ್ ಚಂದ್ರ ಗುರು, ಪ್ರೊ. ಶಭೀರ್ ಮುಸ್ತಾಫಾ, ಮಾಜಿ ಮೇಯರ್ ಪುರಷೋತ್ತಮ್, ಕೆ ಎಸ್ ಶಿವರಾಂ ಹೀಗೆ ಮೊದಲಾದವರು ಕೇಂದ್ರ ಸರ್ಕಾರ ಜಾರಿಮಾಡಿದ್ದ ಸಂವಿಧಾನ ವಿರೋಧಿ ಮಸುಧೆಯನ್ನು ವೇದಿಕೆಯಲ್ಲಿ ಗೋ ಮಾಂಸವನ್ನೇ ಸೇವಿಸುವುದರ ಮೂಲಕ ಸೈದ್ದಂತ್ತಿಕವಾಗಿ, ಸಾಂಸ್ಕೃತಿಕವಾಗಿಯೇ ವಿರೋಧಿಸಿದ್ದರು. ಈ ವಿದ್ಯಮಾನ ಇಡೀ ದೇಶದ ಗಮನ ಸೆಳೆದಿದ್ದು ಎಲ್ಲರಿಗು ತಿಳಿದೇ ಇದೆ. ಕೆಲ ಪತ್ರಿಕೆಗಳು ಹೊರತಾಗಿ, ಎಲ್ಲಾ ಮಾಧ್ಯಮಗಳು ಕೂಡ ಹೆಚ್ಚಿನ ಕಾಳಜಿವಹಿಸಿ ವಿಷಯ ಕುರಿತು ಜನಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಸಕ್ರಿಯವಾಗಿ ವರದಿ ಮಾಡಿದರು.
  ಆದರೆ ಮತ್ತೊಂದೆಡೆ ಭಾರತೀಯ ಸಂವಿಧಾನ ನೀಡಿರುವ ಮೂಲಭೂತ ಹಕ್ಕು ಮತ್ತು ಅದರ ಮೂಲ ಆಶಯಗಳನ್ನು ತಿಳಿಯದ ಬಿ ಜೆ ಪಿ ರಾಜ್ಯಾಧ್ಯಕ್ಷರಾದ ಬಿ ಎಸ್ ಯಡ್ಡಿಯೂರಪ್ಪ, ಸಂಸದರಾದ ಪ್ರತಾಪ್ ಸಿಂಹ, ಸಂಸದೆ ಶೋಭಾ ಕರಂದ್ಲಾಜೆ, ಶಾಸಕರಾದ ಸಿ ಟಿ ರವಿ ಅವರ ಹೇಳಿಕೆಗಳು ಮಾತ್ರ ಸಾಮಾಜದ ಸ್ವಾಸ್ತ್ಯ ಕದಡಿದ್ದಂತೂ ಸುಳ್ಳಲ್ಲ. ಬಿ ಎಸ್ ಯಡ್ಡಿಯೂರಪ್ಪ ಅವರು “ಗೋ ಮಾಂಸ ತಿಂದರೆ, ಅವರ ಮನೆಯಲ್ಲಿ ತಿಂದು ಸಾಯಲಿ”….ಸಂಸದೆ ಶೋಭಾ ಕರಂದ್ಲಾಜೆ ಪ್ರೊ. ಮಹೇಶ್ ಚಂದ್ರ ಗುರು ಅವರನ್ನು ವಜಾಗೊಳಿಸಿ ಎಂದು ಬರೆದ ಪತ್ರ… ಸಂಸದ ಪ್ರತಾಪ್ ಸಿಂಹ “ನಾಯಿ, ನರಿ ತಿನ್ನಲಿ…..” ಎಂದು ಬಾಯಿಗೆ ಬಂದಂತೆ ಮಾತನಾಡಿ ಬಹುಜನ ಆಹಾರ ಸಂಸ್ಕೃತಿಯನ್ನು ಅವಮಾನಿಸಿದ್ದು ಮಾತ್ರ ಮರೆಯುವಂತಿಲ್ಲ.

  ಅದೇನೇ ಇರಲಿ, ದಿನಾಂಕ ೧೧-೦೭-೨೦೧೭ ರಂದು ಭಾರತ ಸರ್ವೋಚ್ಚ ನ್ಯಾಯಾಲಯವು ಗೋ ಮಾರಾಟ, ನಿಷೇಧ ಕಾಯ್ದೆಗೆ ನೀಡಿರುವ ತಡೆಯಾಜ್ಞೆ ಸಂವಿಧಾನದ ಗೌರವ ಮತ್ತು ಮೂಲನಿವಾಸಿಗಳ ಆಹಾರ ಸ್ವಾತಂತ್ರ್ಯವನ್ನು ರಕ್ಷಿಶಿ, ಸರ್ಕಾರಕ್ಕೆ ಮುಖ ಭಂಗ ಮಾಡಿರುವುದು ಸಂತಸದ ವಿಚಾರವಾಗಿದೆ.
  ಭಾರತದ ಪ್ರಜೆಗಳ ಜೀವನೋಪಾಯ ಮಾರ್ಗಗಳು ಮತ್ತು ಆಹಾರ ಭದ್ರತೆಯ ವಿಚಾರದಲ್ಲಿ ಕೇಂದ್ರ ಸರ್ಕಾರ ಅನವಶ್ಯಕವಾಗಿ ತಲೆ ಹಾಕಬಾರದೆಂಬ ಸರ್ವೋಚ್ಚ ನ್ಯಾಯಾಲಯ ಎಚ್ಚರಿಕೆ ನೀಡಿರುವುದು ಪ್ರಗತಿಪರರು ಮತ್ತು ವಿರೋಧ ಪಕ್ಷಗಳು ನೆಡೆಸಿದ ಹೋರಾಟವನ್ನು ಪುರಸ್ಕರಿಸಿದ್ದಂತಾಗಿದೆ. Universal Declaration of Human Rights 1948,, ಅನುಚ್ಚೇದ 25(1) ರಲ್ಲಿ ಆಹಾರ ಪ್ರತಿಯೊಬ್ಬ ಮನುಷ್ಯನ ಹಕ್ಕು ಎಂದು ಹೇಳಿರುವಾಗ ಎಲ್ಲರಿಗೂ ಸಸ್ಯಹಾರವಾಗಲಿ ಅಥವಾ ಮಾಂಸಹಾರವಾಗಲಿ ಅವರವರ ಆಹಾರ ಪದ್ದತಿ ಬಿಟ್ಟದ್ದು ಎಂಬುದನ್ನು ಗೋಹತ್ಯೆ ನಿಷೇಧ ಮಾಡಬೇಕು ಎನ್ನುವವರು ಅರಿಯಬೇಕು. “The Preamble to the Constitution of the Food and Agricultural Organisation 1965” ಪ್ರಕಾರ ಮನುಷ್ಯ ತನ್ನ ಹಸಿವನ್ನು ನೀಗಿಸಿಕೊಳ್ಳಲು ತನಗೆ ಇಷ್ಟವಾದ ಆಹಾರವನ್ನು ಆಯ್ಕೆ ಮಾಡುವ ಮೂಲಭೂತ ಹಕ್ಕನ್ನು ಹೊಂದಿರುತ್ತಾನೆ. ಸರ್ಕಾರ ಆಹಾರದ ಹಕ್ಕನ್ನು ಕಿತ್ತುಕೊಳ್ಳುತ್ತಿರುವುದು ಫ್ಯಾಸಿಸ್ಟ್ ಧೋರಣೆಯಲ್ಲವೇ? ಇನ್ನು ಮುಂದಾದರು, ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಮಾನವ ಸಂಪನ್ಮೂಲ ಅಭಿವೃದ್ಧಿ, ಮಾನವ ಹಕ್ಕುಗಳ ರಕ್ಷಣೆ, ಸಾಮಾಜಿಕ ನ್ಯಾಯ ಮತ್ತು ಸಮ-ಸಮಾಜ ನಿರ್ಮಾಣದತ್ತ ಗಮನಅರಿಸಲ್ಲೆಂದು ಆಶಿಸುತ್ತೇನೆ.

   

   :-ದಿಲೀಪ್ ನರಸಯ್ಯ ಎಂ 

         ಮಾಧ್ಯಮ ಸಂಶೋಧಕರು 

  9036799587

  NO COMMENTS

  LEAVE A REPLY