ವಿಶ್ವದಲ್ಲಿ ಮೊದಲಿಗೆ GST ತಂತ್ರಾಂಶ ಬಿಡುಗಡೆ

  285
  0
  SHARE

  ವಿಶ್ವದಲ್ಲಿ ಮೊದಲಿಗೆ GST ತಂತ್ರಾಂಶ ಬಿಡುಗಡೆ

  ಮೈಸೂರು ಮ್ಯಾಟರ್ ವಾರ್ತೆ:

  ಜಿಎಸ್‌ಟಿ ಮತ್ತು ಅಕೌಂಟಿಂಗ್ ಅರಿವಿಲ್ಲದೇ ಶ್ರೀಸಾಮಾನ್ಯರೂ ಕೂಡಾ ಬಳಕೆ ಮಾಡಬಹುದಾದಂತ ಮತ್ತು ಅಗ್ಗದ ದರದಲ್ಲಿ ತೆರಿಗೆ ಪಾವತಿ ಮಾಡಬಹುದಾದಂತಹ ವಿಶ್ವದ ಮೊದಲಿಗೆ ಜಿಎಸ್‌ಟಿ ತಂತ್ರಾಂಶ ಬಿಡುಗಡೆ ಮಾಡಲಾಯಿತು.
  ಮೈಸೂರಿನ ಪತ್ರಕರ್ತರ ಭವನದಲ್ಲಿ ಗುರುವಾರು ಮಂಡ್ಯ ಪಿಇಎಸ್ ತಾಂತ್ರಿಕ ಕಾಲೇಜಿನ ಸಹಯೋಗದೊಂದಿಗೆ ನಡೆದ ಪತ್ರಿಕಾಗೋಷ್ಠಿಯಲ್ಲಿ ಜಿಎಸ್‌ಟಿ ತಂತ್ರಾಂಶವನ್ನು ಬಿಡುಗಡೆ ಮಾಡುವುದರ ಮೂಲಕ ಮಾತನಾಡಿದ ಅವರು
  ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಇನ್ನೇನು ಕೆಲವೇ ದಿನಗಳಲ್ಲಿ ಜಾರಿಯಾಗಲಿದೆ. ಇಂತಹ ಸಂದರ್ಭದಲ್ಲಿ ಸಣ್ಣ ಹಾಗೂ ಮಧ್ಯಮ ಕೈಗಾರಿಕೆ, ವರ್ತಕರಿಗೆ ಹೊಸ ತೆರಿಗೆ ಪದ್ದತಿಗೆ ಹೊಂದಿಕೊಳ್ಳುವ ಸವಾಲು ಎದುರಾಗಿದೆ. ಹೊಸ ತೆರಿಗೆಯ ನೀತಿ ನಿಯಮಗಳನ್ನು ಅಳವಡಿಸಿಕೊಂಡು, ಅಗ್ಗದ ಅಕೌಂಟಿಂಗ್ ಸಾಫ್ಟ್‌ವೇರ್ ಮೂಲಕ ತೆರಿಗೆ ಪಾವತಿ ನಿಜಕ್ಕೂ ಸವಾಲಿನ ಸಂಗತಿ. ಈ ನ್ನಲೆಯಲ್ಲಿ ಮಂಡ್ಯದ ಪಿಇಎಸ್ ಇಂಜಿನಿಯರಿಂಗ್ ಕಾಲೇಜಿನ ಅಂತಿಮ ಸೆಮಿಸ್ಟರ್‌ನ ಜಿ.ಸಿ. ಶೈಲಜಾ ಮತ್ತು ಜಿ.ರಾಕೇಶ್ ಎಂಬ ಇಬ್ಬರು ದ್ಯಾರ್ಥಿಗಳು ಕಾಲೇಜಿನ ಕಂಪ್ಯೂಟರ್ ಸೈನ್ಸ್ ಭಾಗದ ಪ್ರೊಫೆಸರ್ ಡಾ॥ ಆರ್ ಗಿರೀಶ್ ಅವರ ಮಾರ್ಗದರ್ಶನದಲ್ಲಿ ಕುಬೇರ ಆಪ್ ಅಭಿವೃದ್ಧಿಪಡಿಸಿದ್ದಾರೆ ಇದು ಎಲ್ಲಾ ಅಕೌಂಟಿಂಗ್ ಕೇತ್ರದ ಎಲ್ಲಾ ಸವಾಲುಗಳಿಗೆ ಉತ್ತರ ನೀಡುತ್ತದೆ. ಈಗಾಗಲೆ ಈ ಆಪ್‌ಗೆ ೬ ಜಾಗತಿಕ ಪೇಟೆಂಟ್‌ಗಾಗಿ ಅರ್ಜಿ ಸಲ್ಲಿಸಲಾಗಿದೆ.
  ಕೈಗಾರಿಕೆ, ಉದ್ದಿಮೆ ಹಾಗೂ ಇತರ ವಹಿವಾಟುಗಳ ಅಭಿವೃದ್ಧಿಗೆ ಈ ಆಪ್ ಪೂರಕವಾಗಿರುವುದಿಂದ, ಈ ಆಪ್‌ಗೆ ಕುಬೇರ ಎಂದು ಹೆಸರಿಡಲಾಗಿದೆ.ಕುಬೇರ ಆಪ್‌ಗೆ ಸಿಎ ಪಂಪಣ್ಣ ಅವರು ಸಲಹೆಗಾರರಾಗಿದ್ದಾರೆ. ಅವರು ಕೇಂದ್ರ ಸರಕಾರದ ಮಹತ್ವಾಕಾಂಕ್ಷೆಯ ಜಿಎಸ್‌ಟಿ, ಲೆಕ್ಕಪರಿಶೋಧನೆ, ಲೆಕ್ಕಪತ್ರಗಳ ನಿರ್ವಹಣೆ ಮತ್ತಿತರ ಕಾನೂನು, ನೀತಿ ನಿರೂಪಣೆಗೆ ಸಂಬಂಧಿಸಿದಂತೆ ಮಾತಿ ಹಂಚಿಕೊಂಡಿದ್ದಾರೆ ಎಂದು ತಿಳಿಸಿದರು.
  ಇದಕ್ಕೆ ಇಂಟರ್‌ನೆಟ್ ಸಂಪರ್ಕ ಇಲ್ಲದಿದ್ದರೂ ಇದು ಕಾರ್ಯನಿರ್ವಸುತ್ತದೆ. ಈ ಆಪ್‌ನಿಂದ ಖರೀದಿ, ಮಾರಾಟ ವಸ್ತುಗಳ ನಿರ್ವಹಣೆ, ಉತ್ಪಾದನೆಯ ಮೇಲ್ವಿಚಾರಣೆ, ಕ್ಲೌಡ್ ಬೇಸ್ಡ್ ದತ್ತಾಂಶ ನಿರ್ವಹಣೆ, ಯಾವುದೇ ಸಮಯದಲ್ಲಿ, ಯಾವುದೇ ಸ್ಥಳದಿಂದ ದತ್ತಾಂಶಗಳ ಲಭ್ಯತೆ, ಸರ್ವರ್ ಖರೀದಿ ಅಗತ್ಯಲ್ಲದಿರುಕೆ, ಜಿಎಸ್‌ಟಿಗೆ ಪೂರಕ ದತ್ತಾಂಶ ನಿರ್ವಹಣೆ ಹಾಗೂ ಶ್ಲೇಷಣೆಗಳು ಈ ಆಪ್‌ನ ಮುಖ್ಯ ಲಕ್ಷಣಗಳು ಹಾಗೂ ಉಪಯೋಗಗಳು. ಜಿಎಸ್‌ಟಿಗೆ ಸಂಬಂಧಿಸಿದಂತೆ ಸರ್ಕಾರ ರೂಪಿಸುವ ಎಲ್ಲಾ ಕಾನೂನು, ನೀತಿಗಳನ್ನು ಅಗ್ಗಾಗ್ಗೆ ಈ ಆಪ್‌ನಲ್ಲಿ ಅಳವಡಿಸಲಾಗುತ್ತದೆ’.
  ಅಕೌಂಟಿಂಗ್ ಹೊರತುಪಡಿಸಿ, ಈ ಆಪ್ ವ್ಯಾಪಾರಿಗಳಿಗೆ ಹಾಗೂ ಉದ್ಯಮಿಗಳಿಗೆ ಇನ್ನೂ ಹಲವು ರೀತಿಯಲ್ಲಿ ಉಪಯೋಗವಾಗಲಿದೆ. ೭೯ ಕ್ಕೂ ಅಧಿಕ ಬಗೆಯ ಉದ್ಯಮಗಳಿಗೆ ಎಲ್ಲಾ ಮಾತಿಗಳನ್ನು ಈ ಆಪ್ ಒದಗಿಸಬಲ್ಲದು. ವ್ಯಾಪಾರ, ವವಾಟು, ಉದ್ದಿಮೆಯಲ್ಲಿ ನಷ್ಟವಾಗುತ್ತಿದ್ದಂತೆ, ಈ ಆಪ್ ಎಚ್ಚರದ ಸಂದೇಶ ಕಳುಸುತ್ತದೆ. ಜತೆಗೆ ಲಾಭದತ್ತ ಉದ್ಯಮವನ್ನು ಕೊಂಡೊಯ್ಯಲು ಅಗತ್ಯವಾದ ಸ್ಟ್ರಾಟಜಿಯನ್ನು ಕೂಡಾ ಒದಗಿಸುತ್ತದೆ.
  ಸದ್ಯಕ್ಕೆ ಮಾರುಟ್ಟೆಯಲ್ಲಿ ಲಭ್ಯರುವ ಆಪ್‌ಗಳ ಪೈಕಿ ಕುಬೇರ ಅತ್ಯಂತ ಅಗ್ಗ ಹಾಗೂ ಆಧುನಿಕವಾದದು. ಇದರ ಬೆಲೆ ವರ್ಷಕ್ಕೆ ಕೇವಲ ರೂ ೯೯೯ ುಂದ ೪೯೯೯ ಅಥವ ತಿಂಗಳಿಗೆ ಕೇವಲ ರೂ ೯೯ ುಂದರೂ ೪೯೯. ಕುಬೇರ ಆಪ್ ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಈಗ ಲಭ್ಯವಿದ್ದು , ಐಓಎಸ್ ಮತ್ತು ವಿಂಡೋಸ್‌ಗೆ ಸದ್ಯದಲ್ಲೆ ಬರಲಿದೆ. ಡಿಡಿಡಿ.ಝ್ಠಚಿಛ್ಟಿಟ್ಛಠಿಠಿಛ್ಚಿ.್ಚಟಞ. ವೆಬ್‌ಸೈಟ್‌ನಲ್ಲಿ ಹೆಚ್ಚಿನ ಮಾಹಿತಿಯನ್ನು ಪಡೆಯಬಹುದಾಗಿದೆ.
  ಕುಬೇರ ಆಪ್‌ನ ಉಪಯೋಗ :
  ಜಿಎಸ್‌ಟಿ ಮತ್ತು ಅಕೌಂಟಿಂಗ್ ಅರಿಲ್ಲದ ಶ್ರೀ ಸಾಮಾನ್ಯರು ಬಳಕೆ ಮಾಡಬಹುದು, ಕೃತಕ ಬುದ್ದಿವಂತಿಕೆ, ಫಜಿ, ಮೆನ್ ಲರ್ನಿಂಗ್ ಸಹಾಯದಿಂದ ಬಿಲ್ ತಯಾರಿ, ಇನ್ವೆಂಟರಿ, ಜಿಎಸ್‌ಟಿ, ಅಕೌಂಟಿಂಗ್ ೀಗೆ ಎಲ್ಲವೂ ಒಂದೇ ಸಾಪ್ಟ್‌ವೇರ್ ಮೂಲಕ, ಕೃತಕ ಬುದ್ದಿವಂತಿಕೆ ಮೂಲಕ ಜಿಎಸ್‌ಟಿ ನಿಯಮಗಳ ಅಳವಡಿಕೆಗೆ ಸಹಾಯ, ೭೯ ಕ್ಕೂ ಅಧಿಕ ಉದ್ದಿಮೆ-ವ್ಯವಹಾರಗಳಿಗೆ ಪೂರಕ / ಉದ್ಯಮ ಮಾರ್ಗದರ್ಶಿ,ಸ್ವತಂತ್ರವಾಗಿ ಈ-ಉದ್ಯಮ್ ವೆಬ್ ಪೋರ್ಟಲ್ ಹೊಂದಲು ಸಹಾಯ, ಪ್ರಾದೇಶಿಕ ಭಾಷೆಗಳ ಮೂಲಕ ವ್ಯವಹಾರಕ್ಕೆ ಸಹಾಯಕವಾಗುವಂತಹ ಪಯೋಗವನ್ನು ಪಡೆಯ ಬಹುದಾಗಿದೆ.

  ಆಪ್ ಇನ್ಸ್ಟಾಲ್ ಮಾಡುವ ವಿಧಾನ:-

  ಸ್ಮಾರ್ಟ್ ಫೋನ್‌ನಲ್ಲಿ ಆಪ್ ಡೌನ್‌ಲೋಡ್ ಮಾಡಿಕೊಂಡು ಮ ಕ್ಯಾಮರಾ ಮೂಲಕ ಬಾರ್‌ಕೋಡ್ ಸ್ಕ್ಯಾನ್ ಮಾಡಿಕೊಳ್ಳಬೇಕು, ನಂತರ ಪಾಸ್‌ವರ್ಡ್ ಬೆರಳಚ್ಚುಮ ಅಥವಾ ಪಿನ್ ಮೂಲಕ ಧೃಡೀಕರಿಸಬೇಕು, ಸ್ಮಾರ್ಟ್ ಫೋನ್ ಮೂಲಕ ಪ್ರಿಂಟ್‌ಔಟ್ ಮೂಲ ದಾಖಲೆಗಳ ಸೃಢೀಕರಿಸಿ ಅವುಗಳನ್ನು ಪ್ರಿಂಟ್‌ಔಟ್ ,ತೆಗೆಯುವ ಮತ್ತು ಪಿಡಿಎಫ್ ಗೆ ಬದಲಾಯಿಸುವ ಸಾಧ್ಯತೆ ಇರುತ್ತದೆ. ಉತ್ತಮ ದತ್ತಾಂಶವನ್ನು ಎನ್‌ಸ್ಕಿಪ್ಟ್- ಡಿಸ್ಕಿಪ್ಟ್ ಮಾಡಲಾಗುತ್ತದೆ. ಕ್ಲೌಡ್ ಮೂಲಕ ದತ್ತಾಂಸವನ್ನು ಸೇಖರಣೆ ಮಾಡಿ ಮಾಹಿತಿಯನ್ನು ವಿಶ್ಲೇಷಣೆ ನೀಡುತ್ತದೆ. ಮವಸ್ತುಗಲನ್ನು ಕೊಳ್ಳಬೇಕಾದಲ್ಲಿ ಅವುಗಳನ್ನು ಚಿತ್ರರೂಪದಲ್ಲಿ
  ತೋರಿಸುತ್ತದೆ, ಕನ್ನಡ ಮತ್ತು ಭಷೆಯನ್ನು ನವೀಕರಿಸಿ ವರದಿ ಸಲ್ಲಿಕೆಯಗುವಾಗ ಅದಿ ಇಂಗ್ಲೀಷ್‌ನಲ್ಲಿಯೇ ಕಳುಹಿಸುತ್ತದೆ.

  ಮೋಹನ ಬಿ‌.ಎಂ ಮೈಸೂರು

  ವರದಿ- ಮೋಹನ ಬಿ‌.ಎಂ ಮೈಸೂರು

  NO COMMENTS

  LEAVE A REPLY