ಮೈಸೂರು ವಿವಿಯಲ್ಲಿ ಬೋದನಾ ಗುಣಮಟ್ಟ ಇಳಿಮುಖ: ಮಾನೆ ವಿಷಾದ

ಮೈಸೂರು ವಿವಿಯಲ್ಲಿ ಬೋದನಾ ಗುಣಮಟ್ಟ ಇಳಿಮುಖ: ಮಾನೆ ವಿಷಾದ

345
0
SHARE

ಮೈಸೂರು ವಿವಿಯಲ್ಲಿ ಬೋದನಾ ಗುಣಮಟ್ಟ ಇಳಿಮುಖ: ಮಾನೆ ವಿಷಾದ

ಮೈಸೂರು ಮ್ಯಾಟರ್ ವಾರ್ತೆ
ಇಂದು ಮೈಸೂರು ವಿವಿಯಲ್ಲಿ ಬೋದನಾ ಗುಣಮಟ್ಟ ಇಳಿಮುಖವಾಗಿದೆ ಎಂದು ಮೈಸುರು ವಿವಿ ಅಂಗಾಮಿ ಕುಲಪತಿ ಪ್ರೊ.ದಯಾನಂದ ಮಾನೆ ವಿಷಾದಿಸಿದರು.

ಮೈಸೂರು ವಿವಿಯ ಪ್ರಾಚ್ಯ ವಿದ್ಯಾ ಸಂಶೋಧನಾಲಯದಲ್ಲಿ ಬುಧವಾರ ‘ಶ್ರೀನಿವಾಸಚಾರ್ಯರ ಪ್ರೌಢಾಭಿರಾಮಮ್, ಲಕ್ಷ್ಮಣ ಸೂರಿಯ ಶಾಹಭೂಪಾಲಂಕಾರ, ಗಂಗಾಧರ ಕವಿಯ ಲೀಲಾವತಿ ಸಂದೇಶ, ಆತ್ರೇಯ ಮಹರ್ಷಿಯ ತೈಲಪ್ರಕರಣಮ್, ಕೃತಿಯನ್ನು ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.
ಶೇ.೪೦ ರಷ್ಟು ಇದೆ , ಆದರೆ ಯುಜಿಸಿ ನಿಯಮದ ಪ್ರಕಾರ ಯಾವುದೇ ವಿವಿಯಲ್ಲಿ ಶೇ.೪೦ ಕ್ಕಿಂತ ಬೋಧನಾ ಪ್ರಮಾಣ ಇಳಿಮುಖವಾದರೆ ಅಂತಹ ವಿವಿಯನ್ನು ನಿಶೇಧಗೊಳಿಸಲಾಗುವುದು ಎನ್ನಲಾಗಿದೆ. ಉಪನ್ಯಾಸಕರಲ್ಲಿ ಸರಿಯಾಗಿ ಬೋಧನೆ ಮಾಡಲು ಸಾಧ್ಯವಾಗುತ್ತಿಲ್ಲ, ಸಂಶೋಧನಾ ವಿದ್ಯಾರ್ಥಿಗಳು ಸಂಶೋಧನೆಯ ಬಗ್ಗೆ ಹಿತಾಸಕ್ತಿ ಕಳೆದುಕೊಳ್ಳುತ್ತಿದ್ದಾರೆ ಎಂದರು.
ಕೇವಲ ಮೈಸೂರು ವಿವಿ ಮಾತ್ರವಲ್ಲದೇ ರಾಜ್ಯದಲ್ಲಿ ಹಾಗೂ ದೇಶದಲ್ಲಿ ಅನೇಕ ವಿವಿಗಳು ತನ್ನ ಪ್ರಾಮುಖ್ಯತೆಯನ್ನು ಕಳೆದುಕೊಳ್ಳುತ್ತಿದೆ ಹಾಗೂ ಸಂಶೋಧನೆ ಮಾಡುವವರಲ್ಲಿ ಆಸಕ್ತಿ ಕಡಿಮೆಯಾಗಿದೆ. ನಾಲ್ಕುಪುಸ್ತಕಗಳನ್ನು ಸಂಗ್ರಹಿಸಿ ತಮ್ಮ ಸಂಶೋಧನೆಯನ್ನು ಸಿದ್ಧಪಡಿಸುತ್ತಿದ್ದಾರೆ, ಹಾಗೂ ಅಂತರ್ಜಾಲದಿಂದ ನಕಲು ಮಾಡಿ ತಮ್ಮ ಸಂಶೋಧನೆಯನ್ನು ತಯಾರು ಮಾಡುತ್ತಿರುವುದರಿಂದ ಸಂಶೋಧನಾ ಗ್ರಂಥಗಳು ಪ್ರಾಮುಖ್ಯತೆಯನ್ನು ಕಳೆದುಕೊಳ್ಳುತ್ತಿವೆ ಎಂದರು.
ಹಿಂದೆ ಸಂಶೋಧಕರು ದೈಹಿಕ ಓದಿನಿಂದ ಅನೇಕ ಗ್ರಂಥಗಳನ್ನು ರಚಿಸುತ್ತಿದ್ದರು ಆದರೆ ಇಂದು ವಿದ್ಯಾರ್ಥಿಗಳಲ್ಲಿ , ಅಧ್ಯಾಪಕರಲ್ಲಿ ಓದುವ ಹವ್ಯಾಸ , ಮಂಥನ ಹಾಗೂ ಬರವಣಿಗೆಯ ಕ್ರಿಯಾಶೀಲತೆ ಕಡಿಮೆಯಾಗಿದ್ದು ವಿವಿಯು ನಡೆಸುವ ಅಧ್ಯಾಪಕರ ಕಾಯಾಮಾತಿ ಪಡೆದುಕೊಳ್ಳಲು ವಿಫಲವಾಗುತ್ತಿದ್ದಾರೆ ಎಂದು ತಿಳುವಳಿಕೆ ಹೇಳಿದರು. ಅಧ್ಯಾಪಕರುಗಳಾಗಲಿ ,ವಿದ್ಯಾರ್ಥಿಗಳಾಗಲಿ ಹೆಚ್ಚಿನ ಪುಸ್ತಕಗಳನ್ನು ಬರೆಯುವುದರ ಮೂಲಕ ಜೀವಂತಿಕೆಯನ್ನು ಉಳಿಸಿಕೊಳ್ಳಬೇಕು ಎಂದರು.
ಪ್ರಾಚ್ಯ ವಿದ್ಯಾ ಸಂಶೋಧನಾಲಯದ ನಿದೇರ್ಶಕಿ ಪ್ರೊ.ಡಾ. ಎಚ್.ಪಿ. ದೇವಕಿ ಕೃತಿಗಳ ಕುರಿತು ಸರಳ ವಿಶ್ಲೇಷಣೆ ನೀಡಿದರು, ಗೌರವ ಸಲಹೆಗಾರ ಡಾ.ಟಿ.ವಿ. ಸತ್ಯನಾರಾಯಣ ಸ್ವಾಗತಿಸಿದರು, ೨ನೇ ಶ್ರೇಣಿಯ ಸಹಾಯಕ ಸಂಶೋಧಕ ಡಾ.ಡಿ.ಪಿ. ಮಧುಸೂದನ ವಂದಿಸಿದರು.

ಬಾಕ್ಸ್ ಸುದ್ದಿ:
ಪ್ರಾಚ್ಯ ವಿದ್ಯಾ ಸಂಶೋಧನಾಲಯದಲ್ಲಿನ ಸಮಸ್ತ ಸಮಸ್ಯೆಯನ್ನು ಪಟ್ಟಿಮಾಡಿಕೊಟ್ಟರೆ ೧ನೇ ತಾರೀಕಿನಂದು ನಡೆಯಲಿರುವ ಸಿಂಡಿಕೆಟ್ ಸಭೆಯಲ್ಲಿ ಚರ್ಚಿಸಿ ನಮ್ಮ ಇತಿ-ಮಿತಿಯಲ್ಲಿ ,ಆರ್ಥಿಕ ವಾಗಿ ಆಡಳಿತಾತ್ಮಕವಾಗಿ ಸಮಸ್ಯೆ ಬಗೆಹರಿಸುತ್ತೇನೆ,
ಪ್ರೊ.ದಯಾನಂದ ಮಾನೆ
ಮೈಸುರು ವಿವಿ ಅಂಗಾಮಿ ಕುಲಪತಿ

ವರದಿ : ಮೋಹನ ಬಿ.ಎಂ. 

NO COMMENTS

LEAVE A REPLY