ಗಿನ್ನೀಸ್ ದಾಖಲೆಗೆ ಮೆರುಗುತಂದ ಯೋಗ ಪ್ರದರ್ಶನ

ಗಿನ್ನೀಸ್ ದಾಖಲೆಗೆ ಮೆರುಗುತಂದ ಯೋಗ ಪ್ರದರ್ಶನ

383
0
SHARE

ಗಿನ್ನೀಸ್ ದಾಖಲೆಗೆ ಮೆರುಗುತಂದ ಯೋಗ ಪ್ರದರ್ಶನ

ಅಂತರಾಷ್ಟ್ರೀಯ ಯೋಗ ದಿನಾಚರಣೆ ಉದ್ಘಾಟನೆಯಲ್ಲಿ ಎಚ್.ಸಿ. ಮಹದೇವಪ್ಪ

ಮೈಸೂರು ಮ್ಯಾಟರ್ ವಾರ್ತೆ

3ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಅಂಗವಾಗಿ ಮೈಸೂರಿನಲ್ಲಿ ಗಿನ್ನೀಸ್ ದಾಖಲೆ ನಿರ್ಮಿಸಲು ನಡೆದ ಯೋಗ ಪ್ರದರ್ಶನ ಮೆರುಗು ತಂದಿದೆ.

ಮೈಸೂರಿನ ರೇಸ್‍ಕೋರ್ಸ್ ಆವರಣದಲ್ಲಿ ನಡೆದ ಅಂತರಾಷ್ಟರೀಯ ಯೋಗಪ್ರದರ್ಶವನ್ನು ಉದ್ಘಾಟಿಸಿ ಮಾತನಾಡಿದ ಲೋಕೋಪಯೋಗಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್.ಸಿ. ಮಹದೇವಪ್ಪ , 3 ಹಸಾವಿರ ವರ್ಷಗಳ ಹಿಂದೆ ಪತಂಜಲಿ ಮಹರ್ಷಿ ಆರೋಗ್ಯ ಶುದ್ದೀಯಾಗುವ ಕಾರಣದಿಂದ ಈ ಯೋಗವನ್ನು ಪರಿಚಯಿಸಿದರು, ಇಂದು ವಿಶ್ವದಾದ್ಯಂತ 189 ರಾಷ್ಟ್ರಗಳು ಅಂತರಾಷ್ಟ್ರೀಯ ಯೋಗದಿನವನ್ನಾಗಿ ಆಚರಣೆ ಮಾಡುತ್ತಿದ್ದು ಮೈಸೂರು ದೆಹಲಿಯ ರಾಜ್ ಪಥ್ ನಲ್ಲಿ 33,900 ಸಾವಿರ ಮಂದಿ ಯೋಗ ಮಾಡಿ ಗಿನ್ನಿಸ್ ದಾಖಲೆ ಮಾಡಿರುವುದನ್ನು ಹಿಂದಿಕ್ಕುತ್ತದೆ ಎಂದರು.
ಯೋಗ ಮಾಡುವುದರಿಂದ ಆರೋಗ್ಯ ಶುದ್ದಿಯಾಗುತ್ತದೆ ಇದರೊಂದಿಗೆ ಯುವ ಜನತೆ ಸಮಾಜಮುಖಿಯಾಗಿ ಬೆಳವಣಿಗೆಯಾಗಲು ಸಹಕಾರಿಯಾಗುತ್ತದೆ ಎಂದು ಯುವಜನತೆಯಲ್ಲಿ ಸ್ಪೂರ್ತಿ ತುಂಬಿದರು.

ಡೋಲು ಬಾರಿಸುವುದರ ಮೂಲಕ ಯೋಗ ಪ್ರದರ್ಶನಕ್ಕೆ ಚಾಲನೆ ನೀಡಿದ ಕೇಂದ್ರ ಸಚಿವ ಡಿ.ವಿ ಸದಾನಂದ ಗೌಡ ಭಾರತ ಸಮ ಸಮಸ್ಯೆಗಳಿಗೆ ನಿಡಿದ ಕೊಡುಗೆಯೇ ಯೋಗ. ಇದು ಭಾರತ ಕಂಡ ಅದ್ಬುತ ಸೂತ್ರ, ಆರೋಗ್ಯದ ಸಮಸ್ಯೆಗೆ ಅವಶ್ಯಕವಿಲ್ಲದೆ ಯೋಗ ಮಾಡಲು ಸಾಧ್ಯವೇ ಇಲ್ಲ ಎಂದರು. ಮನಸ್ಸು ಹತೋಟಿಯಲ್ಲಿದ್ದಾಗ ವ್ಯಕ್ತಿ ಶಕ್ತಿಯಾಗುತ್ತಾನೆ ಆ ಶಕ್ತಿ ಸಾಮಾಜಿಕ ವ್ಯವಸ್ಥೆಗೆ ಬೆಳಕಾಗುತ್ತದೆ ಎಂದರು. 2017 ರಲ್ಲಿ ಆರೋಗ್ಯ ಭಾಗ್ಯ ಯೋಗದ ಮೂಲಕ ಪ್ರಧಾನಿ ನರೇಂದ್ರ ಮೋದಿಯವರು 175 ರಾಷ್ಟ್ರಗಳ ಒಪ್ಪಿಗೆಯನ್ನು ಪಡೆದು ಆರೋಗ್ಯದ ಉದ್ದೇಶ ದಿಂದ ರಾಷ್ಟ್ರಾದ್ಯಂತ ಯೋಗದಿನವನ್ನು ಆಚರಿಸಲಾಗುತ್ತಿದೆ ಎಂದರು.

199 ರಾಷ್ಟ್ರಗಳಲ್ಲಿ ಇಂದು ಯೋಗದಿನ ಆಷರಣೆಯಾಗುತ್ತಿದ್ದು ಕೋಟ್ಯಾಂತರ ಜನರು ಪಾಲ್ಗೊಳ್ಳಲಿದ್ದಾರೆ ಅದೇ ರೀತಿ ಮೈಸೂರು ಗಿನ್ನೀಸ್ ದಾಖಲೆಗೆ ಸಜ್ಜಾಗುತ್ತಿದೆ ಇದಕ್ಕೆ ಯೋಗಪಟುಗಳೇ ಕಾರಣ ಎಂದು ತಿಳಿಸಿದರು.

‘ಸ್ವಚ್ಚತಾ ಪ್ರತಿಜ್ಞಾ ವಿಧಿ: ಸಂಸದ ಪ್ರಥಾಪ್ ಸಿಂಹ’

 ಪ್ರಥಾಪ್ ಸಿಂಹ ಅಂತರಾಷ್ಟ್ರಿಯ ಯೋಗದಿನದ ಅಂಗವಾಗಿ ನಡೆದ ಯೋಗ ಪ್ರದರ್ಶನದಲ್ಲಿ ಸ್ವಚ್ಚತೆ ಕುರಿತು ಪ್ರತಿಜ್ಞಾ ವಿಧಿ ನಡೆಸಿದರು.

“ತ್ಯಾಜ್ಯ ವಿಂಗಡಿಸುವ ಪ್ರಕಾರ ನಾನು ನನ್ನ ಮನೆ, ಹಾಗೂ ಅಂಗಡಿಯಲ್ಲಿ ಉತ್ಪತ್ತಿಯಾದ ತ್ಯಾಜ್ಯವನ್ನು ಎರಡು ಬುಟ್ಟಿಗಳಲ್ಲಿ ಬೇರ್ಪಡಿಸುತ್ತೆನೆ. ಹಸಿ ಕಸವನ್ನು ಹಸಿರು ಬುಟ್ಟಿಯಲ್ಲಿ ,ಒಣಗಿದ ಕಸವನ್ನು ನೀಲಿಬುಟ್ಟಿಯಲ್ಲಿ ಸ್ವ-ಮೂಲತಃ ಕಸವನ್ನು ಬೇರ್ಪಡಿಸುವುದರ ಮೂಲಕ ಸ್ವಚ್ಚಭಾರತಕ್ಕೆ ಸಹಕರಿಸುತ್ತೇನೆ.” ಎಂದು ಯೋಗ ಪಟುಗಳಿಂದ ಪ್ರತಿಜ್ಞಾವಿಧಿ ಸ್ವಿಕರಿಸಿದರು.

ವಿವಿಧ ಯೋಗಾಸನ :

ಅಂತರಾಷ್ಟ್ರೀಯ ಯೋಗಪ್ರದರ್ಶನದಲ್ಲಿ ಗಿನ್ನೀಸ್ ದಾಖಲೆಯನ್ನು ಮಾಡುವ ಉದ್ದೇಶವನ್ನು ಹೊಂದಿದ್ದು ಸುಮಾರು 54 ಸಾವಿರದ 101 ಯೋಗ ಪಟುಗಳಿಂದ ವಿವಿಧ ಬಗೆಯ ಆಸನಗಳನ್ನು ಪ್ರದರ್ಶಿಸಲಾಯಿತು.ಪದ್ಮಾಸನ, ಶವಾಸನ, ತಾಡಾಸನ,ಪಾದಮುಕ್ತಾಸನ, ಪಾದ ಹಸ್ತಾಸನ, ಹೀಗೆ ಉಸಿರಾಟ, ದೇಹ ತೊಂದರೆ , ಮಲಬದ್ದತೆ ಇತ್ಯಾದಿ ಕಾಯಿಲೆಗಳಿಂದ ಮುಕ್ತವಾಗಬಹದಾದ ಯೋಗಸಾನಗಳನ್ನು ಸಚಿವರು ಹಾಗೂ ಯೋಗ ಪಟುಗಳು ಪ್ರದರ್ಶಿಸಿದರು.

 

ರಕ್ಷಣಾ ಕ್ರಮಗಳು

ಯೋಗ ಪ್ರದರ್ಶನದಲ್ಲಿ ಪಾಲ್ಗೊಂಡಿದ್ದ ಯೋಗಪಟುಗಳನ್ನು ಕರೆತರಲು ಸರ್ಕಾರಿ ಬಸ್ ವ್ಯವಸ್ಥೆ ಮಾಡಲಾಗಿತ್ತು. ಯಾವುದೇ ರೀತಿಯ ಟ್ರಾಫಿಕ್ ಸಮಸ್ಯೆಗಳು ಹುಟ್ಟಿಕೊಳ್ಳದಂತೆ ಪ್ರತಿ ರಸ್ತೆಯಲ್ಲಿಯು ಯೋಗ ಪಟುಗಳು ಸುರಕ್ಷಿತವಾಗಿ ಸಾಗಲು ಹಾಗೂ ಅಹಿತಕರ ಘಟನೆಗಳು ನಡೆಯದಂತೆ ನೋಡಿಕೊಳ್ಳಲು ಪೋಲೀಸ್ ಸೇವೆಯನ್ನು ಒದಗಿಸಲಾಗಿತ್ತು.ಇದಲ್ಲದೆ, ಕುಡಿಯುವ ನೀರಿನ ವ್ಯವಸ್ಥೆ, ಅಂಬ್ಯುಲೆನ್ಸ್ ವ್ಯವಸ್ಥೆ, ಶೌಚಾಲಯದ ವ್ಯವಸ್ಥೆಯನ್ನು ಸಹ ಮಾಡಲಾಗಿತ್ತು.

ಕಾರ್ಯನಿರ್ವಹಿಸಿದವರ ಸಂಖ್ಯೆ: ಸ್ಟೀವರ್ಡ್ -1258, ಸ್ವಯಂಸೇವಕರು -2000, ಯೋಗ ತರಬೇತಿದಾರರು- 170 ಕಾರ್ಯನಿರ್ವಹಿಸಿದ್ದಾರೆ.

ಕೋಟ್-1

ಮೈಸೂರಿನಲ್ಲಿ ನಡೆದ ಈ ಯೋಗ ಪ್ರದರ್ಶನ ಗಿನ್ನೀಸ್ ದಾಖಲೆಯನ್ನು ಮಾಡಿದೆ ಆದರೆ ಫಲಿತಾಂಶ ಹೊರಬೀಳಬೇಕಿದೆ ಅಷ್ಟೇ ಈ ಯೋಗ ಪ್ರದರ್ಶನದಲ್ಲಿ ಪಾಲ್ಗೊಂಡಿದ್ದು ನನಗೆ ನಿಜಕ್ಕೂ ಹೆಮ್ಮೆ.

ರಾಕೇಶ್
ವಿದ್ಯಾರ್ಥಿ

ಕೋಟ್-2

ಸಾಂಸ್ಕøತಿಕ ನಗರಿ ಮೈಸೂರಿನಲ್ಲಿ ಈ ಯೋಗ ಪ್ರದರ್ಶನ ಬಾರಿ ಜನರಲ್ಲಿ ಮೆಚ್ಚುಗೆಯನ್ನು ವ್ಯಕ್ತಪಡಿಸಿದೆ . ಸಾರ್ವಜನಿಕರು, ವಿದ್ಯಾರ್ಥಿಗಳು ಹಾಗೂ ಕೆಲಸದ ಒತ್ತಡದಲ್ಲಿಯೂ ಪಾಲ್ಗೊಂಡಿರುವ ಸರ್ಕಾರಿ ನೌಕರರು ಪಾಲ್ಗೊಂಡಿರುವುದು ಉತ್ತಮವಾಗಿದೆ.

ಪ್ರತಿಮಾ
ಸ್ವಯಂ ಸೇವಕಿ

ವರದಿ- ಮೋಹನ ಬಿ.ಎಂ.

NO COMMENTS

LEAVE A REPLY