ಯೋಗ ಆರೋಗ್ಯದ ಅಸ್ತ್ರ

ಯೋಗ ಆರೋಗ್ಯದ ಅಸ್ತ್ರ

365
0
SHARE

ಯೋಗ ಆರೋಗ್ಯದ ಅಸ್ತ್ರ: ನಾರಾಯಣಗೌಡ

ಮೈಸೂರು ಮ್ಯಾಟರ್ ವಾರ್ತೆ
ಇಂದು ಯೋಗ ಮಾಡುವುದರಿಂದ ಮಾನವನ ಆರೋಗ್ಯ ಶುಧ್ದೀಕರಣವಾಗುತದೆ , ಯೋಗ ಪ್ರತಿಯೊಬ್ಬ ಮಾನವನ ಆರೋಗ್ಯದ ಅಸ್ತ್ರ ಎಂದು ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ನಾರಾಯಣ ಗೌಡ ಸುದ್ದಿಗೋಷ್ಠಿಯಲ್ಲಿ ಅಭಿಮತ ವ್ಯಕ್ತಪಡಿಸಿದರು.
ಮಂಗಳವಾರ ನಗರದ ಪತ್ರಕರ್ತರ ಭವನದಲ್ಲಿ ಕೆ.ಎಂ.ಪ್ರವೀಣ್ ಕುಮಾರ್ ಚಾರಿಟಬಲ್ ಟ್ರಸ್ಟ್ ನಿಂದ ವಿಶ್ವ ಯೋಗಾ ದಿನಾಚರಣೆಯಂಗವಾಗಿ “ಯೋಗ ಪ್ರವೀಣ ಪ್ರಶಸ್ತಿ-2017” ಪ್ರಧಾನ ಸಮಾರಂಭದಲ್ಲಿ ಮಾತನಾಡಿದ ಅವರು ಪ್ರಸಕ್ತ ಸಾಲಿನ ವಿಶ್ವ ಯೋಗ ದಿನಾಚರಣೆಯಂದು ಮೈಸೂರನ್ನು ಇಡೀ ವಿಶ್ವವೇ ಬೆರಗುಗಣ್ಣಿನಿಂದ ನೋಡುವಂತೆ ತಯಾರಿಸಿದೆ ಎಂದರು.

ಇಂದು ಯೊಗದಿನವನ್ನು 48 ಮುಸ್ಲಿಂ ದೇಶಗಳು ಸೇರಿದಂತೆ ಒಟ್ಟು 192 ರಾಷ್ಟ್ರಗಳು ಜೂ.21ರಂದು ವಿಶ್ವ ಯೋಗದಿನಾಚರಣೆಯನ್ನು ಆಚರಿಸುತ್ತಿರುವುದು ಅತ್ಯಂತ ಸಂತಸವಾಗಿದ್ದು ಇಡೀ ವಿಶ್ವಕ್ಕೆ ಭಾರತ ಮಾದರಿಯಾಗಿದೆ.
ನಡೆಸಿದ್ದು, ಕಳೆದ 19ರಂದು ಆರಮನೆ ಆವರಣದಲ್ಲಿ ಸುಮಾರು 8381 ಜನರು ನಡೆಸಿದ ಚೈನ್ ಯೋಗ ಪ್ರದರ್ಶನದ ಮೂಲಕ ಈಗಾಗಲೇ ನೂತನ ವಿಶ್ವ ದಾಖಲೆಯನ್ನು ಮೈಸೂರು ನಿರ್ಮಿಸಿದ್ದು ಮತ್ತೊಂದು ಗಿನ್ನಿಸ್ ದಾಖಲೆಗೆ ಸಕಲ ಸಿದ್ಧತೆ ನಡೆಸಿರುವ ಜಿಲ್ಲಾಡಳಿತಕ್ಕೆ ಸಹಕಾರ ನೀಡೋಣ ಎಂದು ತಿಳಿಸಿದರು. ಯೋಗಕ್ಕೆ ಯಾವುದೇ ರೀತಿಯ ಜಾತಿ, ಧರ್ಮ, ಮತ, ಪಂಗಡ ಇಲ್ಲ. ಇದು ದೈಹಿಕ ಹಾಗೂ ಮಾನಸಿಕ ಆರೋಗ್ಯದ ಸಮತೋಲನಕ್ಕೆ ಅತಿ ಅವಶ್ಯ ಎಂದು ತಿಳಿಸಿದರು.

ಇದೇ ವೇಳೆ ಮೈಸೂರು ಯೋಗ ಅಸೋಸಿಯೇಷನ್ ಅಧ್ಯಕ್ಷ ಯೋಗ ಪ್ರಕಾಶ್, ಪೆÇಲೀಸ್ ಪಬ್ಲಿಕ್ ಸ್ಕೂಲ್ ನ ಯೋಗ ಶಿಕ್ಷಕ ನಾಗಭೂಷಣ, ಹಿಮಾಲಯ ಫೌಂಡೇಷನ್ ಸಂಸ್ಥಾಪಕ ಎನ್.ಅನಂತ್, ಚಿನ್ಮಯಿ ಯೋಗ ಶಾಲೆ ಶಿಕ್ಷಕಿ ಕೆ.ಆರ್.ಪಾರ್ವತಮ್ಮ ಹಾಗೂ ನಿರ್ವಾಣ ಯೋಗ ಶಾಲೆಯ ಬಿ.ಶ್ರೀನಾಥ್ ಅವರನ್ನು ಸನ್ಮಾನಿಸಲಾಯಿತು.

ರಘುರಾಂ ವಾಜಪೇಯಿ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಮಾಜಿ ಮುಡಾ ಅಧ್ಯಕ್ಷ ಕೆ.ಆರ್.ಮೋಹನ್ ಕುಮಾರ್, ಪಾಲಿಕೆ ಸದಸ್ಯ ಮಾ.ವಿ.ರಾಂಪ್ರಸಾದ್, ಜೆ.ಡಿ.ಎಸ್. ನ ಬಸವರಾಜು, ಹೆಚ್.ಎನ್.ಶ್ರೀಧರ್ ಮೂರ್ತಿ, ಸುಮಂತ್ ಶಾಸ್ತ್ರಿ, ವಿಕ್ರಂ ಅಯ್ಯಂಗಾರ್ ಉಪಸ್ಥಿತರಿದ್ದರು.

ಮೋಹನ ಬಿ.ಎಂ ಮೈಸೂರು

NO COMMENTS

LEAVE A REPLY