ರೈತರ ಸಾಲಾ ಮನ್ನಾ ಮಾಡಲು ಕಬ್ಬು ಬೆಳೆಗಾರರ ಸಂಘ ಒತ್ತಾಯ

ರೈತರ ಸಾಲಾ ಮನ್ನಾ ಮಾಡಲು ಕಬ್ಬು ಬೆಳೆಗಾರರ ಸಂಘ ಒತ್ತಾಯ

300
0
SHARE

ರೈತರ ಸಾಲಾ ಮನ್ನಾ ಮಾಡಲು ಕಬ್ಬು ಬೆಳೆಗಾರರ ಸಂಘ ಒತ್ತಾಯ

ಮೈಸೂರು ಮ್ಯಾಟರ್ ವಾರ್ತೆ

ರಾಜ್ಯದಲ್ಲಿನ ಬರಗಾಲದಿಂದಾಗಿ ರೈತರು ಅಪಾರ ಪ್ರಮಾಣದಲ್ಲಿ ನಷ್ಟ ಹೊಂದಿದ್ದಾರೆ ಆದ್ದರಿಂದ ರೈತರ ಸಂಪೂರ್ಣ ಸಾಲವನ್ನು ಸರ್ಕಾರ ತಕ್ಷಣವೇ ಮನ್ನಾ ಮಾಡಬೇಕೆಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯ ಸಂಚಾಲಕ ಹಳೆಮಿರ್ಲೆ ಸುನಯ್ ಗೌಡ ಆಗ್ರಹಿಸಿದರು.

ಮಂಗಳವಾರ ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಸರ್ಕಾರವನ್ನು ಆಗ್ರಹಿಸಿದ ಮಾತನಾಡಿದ ಅವರು, ಸಾಲಾ ಮನ್ನಾ ಮಾಡದಿದ್ದರೆ ರಾಷ್ಟ್ರವ್ಯಾಪಿ ಉಗ್ರ ಚಳುವಳಿಯನ್ನು ಎದುರಿಸಬೇಕಾಗುತ್ತದೆ ಎಂದು ತಿಳಿಸಿದರು. ಇಂದು ರೈತರು ಬೆಳೆದ ಬೆಳೆಗೆ ಸೂಕ್ತ ಬೆಲೆ ಸಿಗದೇ ಅವರ ಬದುಕು ದುಸ್ಥಿತಿಯಲ್ಲಿದೆ. ರೈತರ ಸಾಲಾ ಮನ್ನಾ ಮಾಡುವ ವಿಚಾರ ಬಹುದಿನಗಳಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರ ಚರ್ಚೆ ನಡೆಸುತ್ತಿದ್ದು ಒಬ್ಬರ ಮೇಲೊಬ್ಬರು ನೆಪ ಒಡ್ಡುತ್ತಿದ್ದಾರೆ ಹೊರತು ಪರಿಹಾರ ಸೂಚಿಸುವ ನಿರ್ಧಾರ ಇನ್ನೂ ಕೈಗೊಂಡಿಲ್ಲ ಎಂದರು. ಈವಿಚಾರವಾಗಿ ರಾಜ್ಯ ಕಬ್ಬು ಬೆಳೆಗಾರರ ಸಂಘ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡುವ ಸಲುವಾಗಿ ಜೂನ್. 28 ರಂದು ಚಾಮುಂಡಿ ಅತಿಥಿ ಗೃಹದಲ್ಲಿ ಸಭೆ ಕರೆಯಲಾಗಿದೆ ಎಂದು ತಿಳಿಸಿದ್ದಾರೆ.

ಬೇಡಿಕೆಗಳು.

ರೈತರ ಎಲ್ಲಾ ರೀತಿಯ ಸಾಲ ಮನ್ನಾ ಮಾಡಬೇಕು, 2016-17ನೇ ಸಾಲಿನಲ್ಲಿ ಕಬ್ಬಿಗೆ ಸಕ್ಕರೇ ಬೆಲೆ ಹೆಚ್ಚಾಗಿರುವುದರಿಂದ ಅದರ ಲಾಭದಲ್ಲಿ ರೈತರಿಗೆ ಹೆಚ್ಚುವರಿಯಾಗಿ ರೂ. 500 ನೀಡಬೇಕು, 2017-18ನೇ ಸಾಲಿನಲ್ಲಿ ಬೆಳೆದ ಒಂದು ಟನ್ ಕಬ್ಬಿಗೆ 3500 ರೂ. ನಿಗಧಿ ಮಾಡಬೇಕು, ಶ್ರೀರಾಮ ಸಕ್ಕರೆ ಕಾರ್ಖಾನೆ ಪ್ರಾರಂಭಕ್ಕೆ ಕ್ರಮ ಕೈಗೊಳ್ಳಬೇಕು. ನಂಜನಗೂಡು ತಾ. ಹುಲ್ಲಳ್ಳಿ ವಿತರಣಾ ನಾಲೆಗಳ ಉಪನಾಲೆಗಳ ಕಾಮಗಾರಿಯಾಗಬೇಕು ಮತ್ತು ಪ.ಜಾತಿ, ಪ. ಪಂಗಡ ಅವರೇ ದೂರು ನೀಡಬೇಕೆಂಬ ತಾರತಮ್ಯ ನಿಲ್ಲಬೇಕು, ವಿದ್ಯಚ್ಚÀ್ಚಕ್ತಿ ಮಂಡಳಿಯವರು ದಂಡರೂಪದಲ್ಲಿ ಪಡೆಯುತ್ತಿರುವ 10,000 ರೂ. ವಸೂಲಿ ಮಾಡುವುದನ್ನು ನಿಲ್ಲಿಸಿ ಸಮರ್ಪಕವಾಗಿ ವಿದ್ಯುತ್ ಸರಬರಾಜು ಮಾಡಬೇಕು, ಬಗರ್ ಹುಕುಂ ಸಾಗುವಳಿ ದಾರರಿಗೆ ಸರ್ಕಾರದಿಂದ ಸಾಗುವಳಿ ಚೀಟಿ ನೀಡಬೇಕು, ಸರ್ಕಾರಿ ಬ್ಯಾಂಕುಗಳು ರೈತರಿಂದ ಸಾಲಾ ವಸೂಲಿ ಮಾಡದಂತೆ ಲಿಖಿತ ಆದೇಶ ನೀಡಬೇಕು, ನದಿಗಳು ತುಂಬಿ ಹರಿಯುವ ಸಂದರ್ಭದಲ್ಲೇ ಕೆರೆಗಳಿಗೆ ನೀರು ತುಂಬಿಸಬೇಕು,

ಮುಖ್ಯವಾಗಿ ರಾಜ್ಯದ ಬಹುತೇಕ ಕೆರೆಗಳಲ್ಲು ರೈತರೇ ಹೂಳು ತೆಗೆದಿದ್ದಾರೆ ಆದರೆ ಸರ್ಕಾರಿ ಅಧಿಕಾರಿಗಳು ಃಆಗೂ ಗುತ್ತಿಗೆ ದಾರರು ಹೂಳು ತೆಗೆದಿದ್ದೇವೆ ಎಂದು ಅಕ್ರಮವಾಗಿ ಬಿಲ್ ಪಡೆಯದಂತೆ ನೋಡಿಕೊಳ್ಳಬೇಕು ಏಕೆಂದರೆ ಈಗಾಗಲೇ ಸಾಲಿಗ್ರಾಮ ಕೆರೆಗೆ 1,1/4(ಒಂದು ಕಾಲೂ ಕೋಟಿ) ಕೋಟಿ ರೂ. ಹಣ ಮಂಜೂರಾಗಿದೆ ಎಂದರು.

ವರುಣ ಕ್ಷೇತ್ರದ ರೈತಮೋರ್ಚ ಅಧ್ಯಕ್ಷ ಕೆ.ಎಸ್. ಮಾದಪ್ಪ, ರಾಜ್ಯ ಕಾರ್ಯದರ್ಶಿ ಎಂ.ಎಸ್. ರಾಜೇಂದ್ರ ,ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರರ ಸಂಘದ ಸಹ ಕಾರ್ಯದರ್ಶಿ ಜಿಮಾರಳ್ಳಿ ಮಂಜು, ನಂಜುಂಡಸ್ವಾಮಿ ಇದ್ದರು.

ಮೋಹನ ಬಿ.ಎಂ. ಮೈಸೂರು

NO COMMENTS

LEAVE A REPLY