ಮೈಸೂರಿನ ಅರಮನೆ ಮೈದಾನದಲ್ಲಿ ದಾಖಲೆಯ ಅತೀ ಉದ್ದದ ಸರಪಳಿ ಯೋಗ ಪ್ರದರ್ಶನ

ಮೈಸೂರಿನ ಅರಮನೆ ಮೈದಾನದಲ್ಲಿ ದಾಖಲೆಯ ಅತೀ ಉದ್ದದ ಸರಪಳಿ ಯೋಗ ಪ್ರದರ್ಶನ

445
0
SHARE

ಮೈಸೂರಿನ ಅರಮನೆ ಮೈದಾನದಲ್ಲಿ ದಾಖಲೆಯ ಅತೀ ಉದ್ದದ ಸರಪಳಿ ಯೋಗ ಪ್ರದರ್ಶನ

ಮೈಸೂರು: ಅಂತರಾಷ್ಟ್ರೀಯ ಯೋಗ ದಿನದ ಅಂಗವಾಗಿ ಇಂದು ನಗರದ ಐತಿಹಾಸಿಕ ಅರಮನೆಯ ಆವರಣದಲ್ಲಿ ಯೋಗ ಪ್ರದರ್ಶನ ಮಾಡಲಾಯಿತು. ಇದು ಗಿನ್ನಿಸ್ ದಾಖಲೆಯ ಪುಟ ಸೇರಿದೆ. ಮೈಸೂರಿನ ಸುಮಾರು 51 ಶಾಲೆಗಳಿಂದ, ಎಂಟು ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು, ಅವರಿಗೆ ಮಾರ್ಗದರ್ಶನ ನೀಡಲು 400 ಕ್ಕೂ ಹೆಚ್ಚು ಯೋಗ ತರಬೇತುದಾರರು ಸೇರಿ ಅತೀ ಉದ್ದದ ಸರಪಳಿ ಯೋಗಾಸನ ಮಾಡುವ ಮೂಲಕ ಮೈಸೂರಿಗೆ ಗಿನ್ನಿಸ್ ದಾಖಲೆ ಬರೆಯುವಲ್ಲಿ ಪಾತ್ರರಾಗಿದ್ದಾರೆ. ಅರಮನೆಯ ಜಯಮಾರ್ತಾಂಡ, ಬಲರಾಮ, ಕೋಟೆ ಆಂಜನೇಯ, ಕರಿಕಲ್ಲು ತೊಟ್ಟಿ ದ್ವಾರಗಳಲ್ಲಿ ಪ್ರವೇಶಕ್ಕಾಗಿ ಅನುವು ಮಾಡಿಕೊಡಲಾಗಿತ್ತು. 2.30 ನಿಮಿಷಗಳ ಕಾಲ ನಡೆದ ಯೋಗ ಪ್ರದರ್ಶನದಲ್ಲಿ ಸರಪಳಿ ಮಾದರಿಯಲ್ಲಿ ವೀರಭದ್ರಾಸನ 1, 2, ತ್ರಿಕೋನಾಸನ, ಗಳನ್ನು ಮಕ್ಕಳು ಪ್ರದರ್ಶಿಸಿದರು. ಬಿರು ಬಿಸಿಲಿನ ಮಧ್ಯೆದಲ್ಲಿಯೂ ಮಕ್ಕಳೆಲ್ಲರೂ ತಮ್ಮೂರಿನ ಹೆಸರು ಗಿನ್ನಿಸ್ ದಾಖಲೆಯಲ್ಲಿ ಸೇರಬೇಕು ಎಂಬ ಮಹದಾಸೆಯಿಂದ ಉತ್ಸುಕರಾಗಿ ಯೋಗ ಪ್ರದರ್ಶನ ನೀಡಿದರು. ಮೈಸೂರು ಜಿಲ್ಲಾಧಿಕಾರಿಯವರಾದ ರಂದೀಪ್, ಸಂಸದರಾದ ಪ್ರತಾಪ್ ಸಿಂಹ, ಮೈಸೂರಿನ ಮಹಾಪೌರಾದ ರವಿಕುಮಾರ್, ಕರ್ನಾಟಕ ಪ್ರವಾಸೋದ್ಯಮ ಇಲಾಖೆಯ ನಿರ್ದೇಶಕರಾದ ಜನಾರ್ಧನ್ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಶುಭ ಹಾರೈಸಿದರು.


ಮೈಸೂರಿನಲ್ಲಿ ನಡೆದ ಈ ಪ್ರದರ್ಶನದ ಮುಖ್ಯ ಯೋಗ ಮಾರ್ಗದರ್ಶಕರಾಗಿ ಅಚ್ಚುಕಟ್ಟಾಗಿ ಕಾರ್ಯಕ್ರಮ ನಡೆಸಿಕೊಟ್ಟ, ಜಿಎಸ್‍ಎಸ್ ಯೋಗ ಸಂಸ್ಥೆಯ ಶ್ರೀ ರಂಗನಾಥ್ ರವರು ‘ಸಾವಿರಾರು ಮಂದಿ ಮಕ್ಕಳಿಗೆ ಒಟ್ಟಿಗೇ ಯೋಗಾಸನ ಮಾಡಿಸಿದ್ದು ಇದೇ ಮೊದಲ ಅನುಭವ, ಚೈನ್ ಯೋಗಾಸನ ಆದ್ದರಿಂದ ಚೈನ್ ಮಾದರಿಯಲ್ಲಿ ಮಾಡಬಹುದಾದ ನಾಲ್ಕು ಯೋಗಾಸನಗಳನ್ನು ಮಾತ್ರ ಇಂದು ಮಕ್ಕಳಿಂದ ಮಾಡಿಸಲಾಯಿತು. ಮೇಲಿನಿಂದ ಮಕ್ಕಳು ಯೋಗ ಮಾಡುವುದನ್ನು ನೋಡುವುದೇ ಬಹಳ ಖುಷಿಯಾಯಿತು.

21ನೇ ತಾರೀಖು ನಡೆಯುವ ಯೋಗ ಪ್ರದರ್ಶನದಲ್ಲಿ 6 ಮಂದಿ ಮಾರ್ಗದರ್ಶಕರು ಇರುತ್ತೇವೆ, ಅಲ್ಲಿನ ಯೋಗ ಪ್ರದರ್ಶನದಲ್ಲಿ ಸರ್ಕಾರದ ನಿರ್ದೇರ್ಶನದಂತೆ ಇರುವ ಯೋಗಾಸನಗಳನ್ನು ಮಾಡಿಸಲಾಗುವುದು’ ಎಂದು ತಮ್ಮ ಅಭಿಪ್ರಾಯ ಹಂಚಿಕೊಂಡರು.

ಕೋಟ್-೧
ಇದೊಂದು ಮಹತ್ವದ ಕಾರ್ಯ, ಅಂತರಾಷ್ಟ್ರೀಯ ಯೋಗ ದಿನದ ಅಂಗವಾಗಿ ಹಮ್ಮಿಕೊಂಡಿದ್ದ ಯೋಗ ಕೇವಲ ದಾಖಲೆಗೆ ಮಾತ್ರವಲ್ಲದೆ, ಆರೋಗ್ಯ ಸುಧಾರಣೆಗೂ ಯೋಗ ಬಹುಮುಖ್ಯವಾದುದ್ದಾಗಿದೆ, ಪ್ರತಿನಿತ್ಯ ಯೋಗ ಮಾಡುವುದರಿಂದ ಸಂತೋಷ ಮತ್ತು ತೃಪ್ತಿ ಸಿಗುತ್ತದೆ, ಮನಸ್ಸಿಗೆ ನೆಮ್ಮದಿ ದೊರಕುತ್ತದೆ.
ದೇವೇಂದ್ರ, ಪತಂಜಲಿ ಯೋಗ ಶಿಕ್ಷಣ ಸಮಿತಿ, (ಮೈಸೂರು ಮಕ್ಕಳ ಕೂಟ)

 

ಕೋಟ್-೨
ಮೈಸೂರಿನ ಅರಮನೆಯಲ್ಲಿ ಸರಪಳಿ ಯೋಗ ಪ್ರದರ್ಶನ ಮಾಡಿ ತುಂಬಾ ಹೆಮ್ಮೆಯಾಗಿದೆ. ಗಿನ್ನಿಸ್ ದಾಖಲೆ ಮಾಡಲು ಶಾಲಾ ಮಕ್ಕಳಿಗೆ ಅವಕಾಶ ದೊರೆತಿರುವುದು ಸಂತಸದ ವಿಷಯ, ಮನೆಯಲ್ಲಿ ಅಲ್ಲದೆ ನಮ್ಮ ಶಾಲೆಗೂ ಕೀರ್ತಿ ತಂದಿದೆ. ಬಿಸಿಲಿನಲ್ಲಿ ಕಾದದ್ದು ಸ್ವಲ್ಪ ಬೇಸರ ತಮದಿದೆ ಆದರೂ ಪರಿಶ್ರಮಕ್ಕೆ ತಕ್ಕ ಪ್ರತಿಫಲ ಸಿಕ್ಕಿದೆ.
ಯಶಸ್ವಿನಿ, ವಿದ್ಯಾರ್ಥಿನಿ, ಶ್ರೀ ನಟರಾಜ ಪಬ್ಲಿಕ್ ಶಾಲೆ.

                                     : – ತ್ರಿವೇಣಿ

NO COMMENTS

LEAVE A REPLY