ಗಿನ್ನೀಸ್ ದಾಖಲೆಯ ನಿರ್ಮಾಣಕ್ಕೆ ತೆರೆಯ ಹಿಂದಿನ ಸಹಕಾರ

  268
  0
  SHARE

  ಗಿನ್ನೀಸ್ ದಾಖಲೆಯ ನಿರ್ಮಾಣಕ್ಕೆ ತೆರೆಯ ಹಿಂದಿನ ಸಹಕಾರ

  ಮೈಸೂರು ಮ್ಯಾಟರ್ ವಾರ್ತೆ:

  ಅಂತರಾಷ್ಟ್ರೀಯ ಯೋಗದಿನದ ಅಂಗವಾಗಿ ಸೋಮವಾರ ನಗರದ ಅರಮನೆ ಆವರಣದಲ್ಲಿ ನಡೆಯಲಿರುವ ಬೃಹತ್ ಚೈನ್ ಯೋಗ ಪ್ರದರ್ಶನಕ್ಕೆ ತೆರೆಯ ಹಿಂದಿನ ಸೇವಕರ ಸಹಕಾರ ಹೆಚ್ಚಾಗಿದೆ.
  ಯೋಗ ಆರೋಗ್ಯಕ್ಕೆ ಎಷ್ಟು ಮುಖ್ಯವೋ ಹಾಗೇ ಕಾರ್ಯಕ್ರಮಕ್ಕೆ ಸಹಕಾರ ಮುಖ್ಯ .
  ಯೋಗ ತರಭೇತಿದಾರರಿಗೆ ಹಾಗೂ ಪ್ರೇಕ್ಷಕರಿಗೆ ಕಾಣುತ್ತಿರುವುದು ಕೇವಲ ತರಬೇತಿ ನೀಡುವರು ಯೋಗ ಹೇಳಿಕೊಡುವವರು ಮಾತ್ರ, ಆದರೆ ಅಂತರಾಷ್ಟ್ರೀಯ ಚೈನ್ ಯೋಗ ಪ್ರದರ್ಶನ ಗಿನ್ನೀಸ್ ದಾಖಲೆ ನಿರ್ಮಾಣ ಮಾಡಲು ಹಲವು ವಿಭಾಗಗಳು ತೆರೆಯ ಹಿಂದೆ ಶ್ರಮ ವಹಿಸಿ ಕೆಲಸ ಮಾಡುತ್ತಿವೆ. ನಗರ ಜಿಲ್ಲಾಧಿಕಾರಿ ರಂದೀಪ್ ಸರ್ಕಾರದಿಂದ ಅನುಮತಿ ನೀಡಿದ್ದು ,ಸಂಪೂರ್ಣ ಸಹಕಾರವನ್ನು ಸಹಕಾರ ನೀಡಿದ್ದಾರೆ.ಈ ಪೈಕಿ ಮೈಸೂರಿನ ಎಂಟು ಪ್ರೌಢಶಾಲೆ ಹಾಗೂ ಕಾಲೇಜು ಸೇರಿದಂತೆ 33 ಶಾಲಾ ಕಾಲೇಜುಗಳ ಸುಮಾರು ೬೦೦೦ಕ್ಕೂ ಅಧಿಕ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
  ಶನಿವಾರ 10,000 ವಿದ್ಯಾರ್ಥಿಗಳು ತಾಲೀಮು ನಡೆಸಿದರು. ಎಲ್ಲ ವಿದ್ಯಾರ್ಥಿಗಳಿಗೂ ಮೊದಲೇ ಮ್ಯಾಟ್ ಅಥವಾ ಜಮಖಾನಾ ತರಲು ಸೂಚಿಸಲಾಗಿದ್ದು, ತಾವು ತಂದ ಮ್ಯಾಟ್ ಗಳಲ್ಲಿ ಕುಳಿತು ಯೋಗ ಪ್ರದರ್ಶನ ನೀಡಿದರು. ವಿದ್ಯಾರ್ಥಿಗಳಿಗೆ ಕುಡಿಯುವ ನೀರು, ಬಿಸ್ಕೆಟ್, ಬಾಳೆಹಣ್ಣು ವಿತರಿಸಲಾಯಿತು.

  ತೆರೆಯ ಹಿಂದಿನ ವಿಭಾಗಗಳು:– ನೋಂದಣಿ ವಿಭಾಗ , ಲಘು ತಿನಿಸು ವಿಭಾಗ , ನೀರು ವಿತರಣಾ ವಿಭಾಗ, ರಕ್ಷಣೆಗಾಗಿ ಪೋಲಿಸ್ ವ್ಯವಸ್ಥೆ ವಿಭಾಗ , ಇದರೊಂದಿಗೆ ಯೋಗಪಟುಗಳಿಗೆ ಯಾವುದೇ ರೀತಿಯ ತೊಂದರೆ ಆಗದಂತೆ ಸ್ವಯಂಸೇವಕರಾಗಿ ವಿವಿಧ ಕಾಲೇಜಿನ ವಿದ್ಯಾರ್ಥಿಗಳು ಕಾರ್ಯ ನಿರ್ವಹಿಸುತ್ತಿದ್ದಾರೆ.

  ಕಾರ್ಯದಲ್ಲಿ ಪಾಲ್ಗೊಂಡಿರುವ ತೆರೆಯ ಹಿಂದಿನ ಸೇವಕರು:-

  ಮೈಸೂರು ಟ್ರಾವೆಲ್ ಅಸೋಸಿಯೇಷನ್ ಅಧ್ಯಕ್ಷ ಮತ್ತು ಸೇಫ್ವೀಲ್ಸ್ ಎಂ.ಡಿ.    ಬಿ.ಎಸ್‌. ಪ್ರಶಾಂತ್ ಮತ್ತು . ಕೌಟಿಲ್ಯ ವಿದ್ಯಾಲಯ ಪ್ರಿನ್ಸಿಪಾಲ್.              ಡಾ.ಎಲ್. ಸವಿತಾ ಮತ್ತು ಸೇಫ್ವೀಲ್ಸ್ ಎಚ್.ಆರ್. ಐಶ್ವರ್ಯ ಜೈನ್, ಶಿವಪ್ರಸಾದ್ ಭಟ್, ಸುಮುಕು, ಸೆಫೆವೀಲ್ನ ರೆವಣ್ಣ, ಸೇಫ್ವೀಲ್ ಮ್ಯಾನೇಜರ್ ಪ್ರವೀಣ್ ,ಕೆ.ಎಚ್‌.ಕಿರಣ್
  ಮತ್ತು ಕೌಟಿಲ್ಯ ಶಾಲೆಯ ಉಶಮನಿ, ಶಿಕ್ಷಕಿ ರಾಧಾ. ಅರಮನೆ ಉಪ ನಿರ್ದೇಶಕ ಸುಬ್ರಮಣ್ಯ ಅವರು ತಂಡಕ್ಕೆ ಎಲ್ಲಾ ಸೌಲಭ್ಯಗಳನ್ನು ಒದಗಿಸುವಲ್ಲಿ ಸಹಾಯ ಮಾಡಿದ್ದಾರೆ. ವಿವೇಕ್ ಚಿರಾಗ್ ಜಾಹೀರಾತುಗಳು ಉತ್ತಮ ಧ್ವನಿ ಸೌಲಭ್ಯಗಳನ್ನು ಒದಗಿಸುತ್ತಿದ್ದಾರೆ. ಇದರ ಜೊತೆಗೆ ಮಾನಸ ಗಂಗೋತ್ರಿಯ ಪತ್ರಿಕೋದ್ಯಮ ವಿಭಾಗದ ವಿದ್ಯಾರ್ಥಿಗಳಾದ ರಾಕೇಶ್. ಮೋಹನ್. ಮೇಘನಾ. ಯಶ್ವಾಂತ್. ಯಶ್ವಾನಿ. ಕವ್ಯಾ. ತ್ರಿವೇಣಿ. ದಿಂಡಿಮಾ ಭೂಷಣ್
  ಸ್ವಯಂಸೇವಕರಾಗಿ ತೊಡಗಿಸಿಕೊಂಡಿದ್ದಾರೆ

  : ಕೋಟ್ -೧
  ಮೈಸೂರಿನಲ್ಲಿ ನಡೆಯುತ್ತಿರುವ ಚೈನ್ಚಯೋಗ ಪ್ರದರ್ಶನ ನೋಂದಣಿ ವೇಳೆ ೮೦೦೦ ಸಂಖ್ಯೆ ಆದರೆ ಶನಿವಾರ ೧೦ ರಿಂದ ೧೧ ಸಾವಿರದ ವರೆಗೂ ಸಹ ಯೋಗಪಟುಗಳು ಪಾಲ್ಗೊಂಡಿದ್ದರು. ಖಂಡಿತವಾಗಿ ಚೈನ್‌ ಯೋಗ ಗಿನ್ನೀಸ್ ರೆಕಾರ್ಡ್ ಮಾಡುವ ಭರವಸೆ ಹೊಂದಿದ್ದೇವೆ.

  :-ಐಶ್ವರ್ಯ
  ಕಾರ್ಯ ನಿರ್ವಾಹಕಿ

   

  : ಕೋಟ್-೨
  ಅಂತರಾಷ್ಟ್ರೀಯ ಯೋಗದಿನದ ಅಂಗವಾಗಿ ಚೈನ್‌ ಯೋಗ ಪ್ರದರ್ಶನದ ಮೂಲಕ ಗಿನ್ನೀಸ್ ದಾಖಲೆ ನಿರ್ಮಿಸಿ ಮೈಸೂರಿಗೆ ಮತ್ತು ರಾಜ ಮನೆತನಕ್ಕೆ ಕೊಡುಗೆ ನೀಡುವ ಸಲುವಾಗಿ ಈ ಕಾರ್ಯ ಮಾಡುತ್ತಿದ್ದೇವೆ.

     :- ಬಿ.ಎಸ್‌. ಪ್ರಶಾಂತ್ ನಿರ್ವಾಹಕರುಮೈಸೂರು ಟ್ರಾವೆಲ್ ಅಸೋಸಿಯೇಷನ್ ಅಧ್ಯಕ್ಷ ಮತ್ತು ಸೇಫ್ವೀಲ್ಸ್ ಎಂ.ಡಿ.

   

  :- ಮೋಹನ ಬಿ.ಎಂ
  ಮೈಸೂರು

  NO COMMENTS

  LEAVE A REPLY