ದಾಖಲು ಮಾಡುವ ಪ್ರೌವೃತ್ತಿ ಇಳಿಮುಖ ಇಷ್ಟಕಾಮ್ಯ ಭಾವಸಂವಾದ ಕೃತಿ ಬಿಡುಗಡೆಯಲ್ಲಿ ನಾಗತಿಹಳ್ಳಿ ಚಂದ್ರಶೇಖರ್ ವಿಷಾದ.

ದಾಖಲು ಮಾಡುವ ಪ್ರೌವೃತ್ತಿ ಇಳಿಮುಖ ಇಷ್ಟಕಾಮ್ಯ ಭಾವಸಂವಾದ ಕೃತಿ ಬಿಡುಗಡೆಯಲ್ಲಿ ನಾಗತಿಹಳ್ಳಿ ಚಂದ್ರಶೇಖರ್ ವಿಷಾದ.

333
0
SHARE

ದಾಖಲು ಮಾಡುವ ಪ್ರೌವೃತ್ತಿ ಇಳಿಮುಖ
ಇಷ್ಟಕಾಮ್ಯ ಭಾವಸಂವಾದ ಕೃತಿ ಬಿಡುಗಡೆಯಲ್ಲಿ ನಾಗತಿಹಳ್ಳಿ ಚಂದ್ರಶೇಖರ್ ವಿಷಾದ

ಮೈಸೂರು ಮ್ಯಾಟರ್ :

ಇಂದು ಯಾವುದೇ ಸಿನಿಮಾ , ಅಥವಾ ಯಾರೇ ಮುಖ್ಯ ವ್ಯಕ್ತಿಗಳು ಮಾತನಾಡಿದರೆ ಅವರು ನೀಡಿದಂತಹ ಮಾಹಿತಿಯನ್ನು ಧ್ವನಿ ಮತ್ತು ಬರವಬಣಿಗೆಯ ರೂಪದಲ್ಲಿ ದಾಖಲು ಮಾಡಿ ವಿದ್ಯಾರ್ಥಿಗಳಿಗೆ ಕೇಳಿಸುತ್ತಿದ್ದ ಪ್ರೌವೃತ್ತಿ ಇಳಿಮುಖವಾಗಿದೆ ಎಂದು ಚಲನಚಿತ್ರ ನಿದೇರ್ಶಕ ನಾಗತೀಹಳ್ಳಿ ಚಂದ್ರಶೇಖರ್ ವಿಷಾದಿಸಿದರು.

ಮೈಸೂರಿನ ಗುಬ್ಬಿಗೂಡು ಸಾಂಸ್ಕøತಿಕ ಸಿರಿ ಹಾಗೂ ಮೈಸೂರು ವಿವಿಯ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಸಹಯೋಗದೊಂದಿಗೆ ಬಿ.ಎಂ.ಶ್ರೀ ಸಭಾಂಗಣದಲ್ಲಿ ಏರ್ಪಡಿಸಿದ್ದ ನಾಗತೀಹಳ್ಳಿ ಚಂದ್ರಶೇಖರ್ ಅವರ ಇಷ್ಟಕಾಮ್ಯ ಭಾವಸಂವಾದ ಕೃತಿ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ವಿದ್ಯಾರ್ಥಿಗಳು ಕೇವಲ ಒಂದು ದ್ವೀಪಕ್ಕೆ ಸೀಮಿತವಾದಂತೆ ಪ್ರಪಂಚವನ್ನೇ ಬೇಡ ಎನ್ನಬಾರದು ಎಂದು ಕಿವಿಮಾತು ಹೇಳಿದರು.

ಕತ್ತಲೆಕೋಣೆಯಲ್ಲಿ ಕುಳಿತು ನೋಡುತ್ತಿದ್ದ ಸಿನಿಮಾಗಳು ಇಂದು ಉದ್ಯಮವಾಗಿ ರಾರಾಜಿಸುತ್ತಿವೆ ಇಂಹತ ಸಿನಿಮಾಗಳನ್ನು ನೋಡಲು ನಿಮಗೆ ಸಾಹಿತ್ಯದ ಸಲಕರಣೆ ಬೇಕು ಎಂದರು. ಸಾಹಿತ್ಯೀಕವಾಗಿ ನಿರ್ಮಿಸಿದ್ದ ಕತೆಗಳೆಲ್ಲವೂ ಇಂದು ತಾತ್ಕಾಲಿಕವಾಗಿ ನಗಣ್ಯವಾಗಿಬಿಡುವಂತಹ ಪರಿಸ್ಥಿತಿ ಎದುರಾಗಿದೆ ಇದು ಇಂದಿನ ಸಿನಿಮಾ ಮಾಂತ್ರಿಕತೆಯಿಂದ ಎಂದರು.

ಆದ್ದರಿಂದ ಕನ್ನಡ ಚಿತ್ರರಂಗಹದಲ್ಲಿ ಉಪಯುಕ್ತ ಸಿನಿಮಾಗಳ ಬಗ್ಗೆ ಚರ್ಚೆಯಾಗಬೇಕು , ಆ ಸಿನಿಮಾದಲ್ಲಿನ ಗುಣ ದೊಷಗಳು, ಸಮಾಜಕ್ಕೆ ಈ ಸಿನಿಮಾ ಬೇಕೇ -ಬೇಡವೇ, ಸಮಾಜಕ್ಕೆ ಬೇಕಾಗುವಂತಹ ಮಾಹಿತಿಯನ್ನು ಸಿನಿಮಾ ಹೇಳುತ್ತಿದೆಯೇ , ವಾರ್ಷಿಕವಾಗಿ 200 ಸಿನಿಮಾಗಳು ಬಿಡುಗಡೆಯಾಗುತ್ತಿರುವ ಕನ್ನಡ ಚಿತ್ರರಂಗದ ಬಗ್ಗೆ ಯುವ ಮನಸ್ಸುಗಳಿಂದ ಚರ್ಚೆಯಾಗಬೇಕು ಎಂದು ಯುವ ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಇಂದಿನ ಸಿನಿಮಾ ಚಿತ್ರರಂಗ ಅತ್ಯಂತ ಕಠಿಣವಾಗಿದೆ , ಯುವಕರು ಸಿನಿಮಾ ಹುಚ್ಚಿನಿಂದ ಚಿತ್ರರಂಗದಲ್ಲಿ ನನಗೆ ಅತ್ಯಂತ ಸುಲಭವಾಗಿ ಸ್ಥಾನ ಸಿಗುತ್ತದೆ ಎಂದು ಮೂಢರಾಗಿದ್ದರೆ ಆದರೆ ಅವರಿಗೆ ಸಿನಮಾ ಆಕರ್ಷಣೆಯಾಗದೇ ಅರಿವಾಗಬೇಕು ಎಂದು ತಿಳುವಳಿ ಹೇಳಿದರು. ಈ ಪುಸ್ತಕದಲ್ಲಿ 55 ಲೇಖನವನ್ನು ಒಳಗೊಂಡಿದ್ದು ವಿದೇಶಿ ಕನ್ನಡಿಗರು , ಸಿನಿಮಾ ಕುಟುಂಬ ವರ್ಗದವರು ಮತ್ತು ವಿದ್ಯಾರ್ಥಿಗಳಿಂದ ರಚಿಸಲಾಗಿದೆ ಎಂದರು. ನಿಜವಾದ ಅನ್ನದಾತ ನಿರ್ಮಾಪಕನೇ ಆದ್ದರಿಂದ ಇಂತಹ ಸದಬಿರುಚಿ ಸಿನಿಮಾವನ್ನು ಪ್ರೋತ್ಸಾಹಿಸುವ ನಿರ್ಮಾಪಕರನ್ನು ಬೆಳೆಸಬೇಕು ಎಂದರು.

ಕೃತಿ ಕುರಿತು ಮಾತನಾಡಿದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಪ್ರಾಧ್ಯಾಪಕ ಪ್ರೊ. ನೀಲಗಿರಿ ಎಂ. ತಳವಾರ ಈ ಕೃತಿಯಲ್ಲಿ 56 ಲೇಖನಗಳಿದ್ದು ಸಾಹಿತ್ಯ ಮತ್ತು ಚಲನಚಿತ್ರ ಎರಡರ ವಿಷಯವನ್ನು ಒಳಗೊಂಡಿದೆ. ಮುಖ್ಯವಾಗಿ ಚಿತ್ರಕುಟುಂಬ(ನಟರು, ಚಿತ್ರಕುಟುಂಬದಿಂದ 12 ಲೇಖನ) ಮತ್ತು ಸಂವಾದ ಕುಟುಂಬ ಎಂಬ ಎರಡು ವಿಭಾಗಗಳಿವೆ, ಸಂವಾದ ಕುಟುಂಬದಲ್ಲಿ ಅನಿವಾಸಿ ಸಂವಹನ(5 ಲೇಖನ) , ದೇಸಿ ಸಂಹನ (39 ಲೇಖನ) ವಿಭಾಗವನ್ನು ಒಳಗೊಂಡಿದೆ ಎಂದರು. ಒಟ್ಟಾರೆಯಾಗಿ ಸಾಹಿತ್ಯ, ಸಂಕಲನ, ಅಭಿನಯ , ನಾಗತೀಹಳ್ಳಿ ಚಂದ್ರಶೇಖರ್ ಅವರ ಸ್ವಾಭದೊಂದಿಗೆ ಸಾಂಸ್ಕøತಿಕ ಸಾಹಿತ್ಯವನ್ನು ಈ ಪುಸ್ತಕ ಒಳಗೊಂಡಿದೆ ಎಂದರು.

ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ನಿದೇರ್ಶಕಿ ಪ್ರೊ. ಪ್ರೀತಿ ಶ್ರೀಮಂಧರ್ ಕುಮಾರ್ ಅಧ್ಯಕ್ಷತೆ ವಹಿಸಿದ್ದು, ನಿರ್ಮಾಪಕ ಶಂಕರೇಗೌಡ, ಮೈಸೂರು ವಿವಿಯ ಆಡಳಿತಾಧಿಕಾರಿ ಪ್ರೊ.ಸಿ ರಾಮಸ್ವಾಮಿ, ಚಿತ್ರ ನಟಿ ಮಯೂರಿ, ಕನ್ನಡ ಜಿ.ಸಾ.ಪ. ಅಧ್ಯಕ್ಷ ವೈ.ಡಿ ರಾಜಣ್ಣ, ಅಂಕಣಕಾರ ಗುಬ್ಬಿಗೂಡು ರಮೇಶ್ ಇದ್ದರು.

NO COMMENTS

LEAVE A REPLY