ಬೌದ್ಧ ಧರ್ಮ ಸ್ವೀಕರಿಸಿ ಅಂಬೇಡ್ಕರ್ ಚಿಂತನೆ ಮರುಕಳಿಸುವೆ

ಬೌದ್ಧ ಧರ್ಮ ಸ್ವೀಕರಿಸಿ ಅಂಬೇಡ್ಕರ್ ಚಿಂತನೆ ಮರುಕಳಿಸುವೆ

507
0
SHARE

ಬೌದ್ಧ ಧರ್ಮ ಸ್ವೀಕರಿಸಿ ಅಂಬೇಡ್ಕರ್ ಚಿಂತನೆ ಮರುಕಳಿಸುವೆ

ಮೈಸೂರು ಮೆ.೯ :
ನನ್ನ ರಾಜಕೀಯ ಜೀವನದ ಜೊತೆಗೆ  ದೀಕ್ಷೆ ಸ್ವೀಕರಿಸಿ ಅಂಬೇಡ್ಕರ್ ಚಿಂತನೆ ಮರುಕಳಿಸುವಂತೆ ಮಾಡುವೆ ಎಂದು ಮಾಜಿ ಶಾಸಕ ವಿ. ಶ್ರೀನಿವಾಸ್ ಪ್ರಸಾದ್ ಅಭಿಪ್ರಾಯ ವ್ಯಕ್ತಪಡಿಸಿದರು.

ಮಂಗಳವಾರ ಮಹಾಬೋಧಿ ಮೈತ್ರಿ ಮಂಡಲದ ವತಿಯಿಂದ ಮಹಾಬೋಧಿ ಕಾರ್ಲಾ ಸ್ಟೂಡೆಂಟ್ ಹೋಂ ನಲ್ಲಿ ೨೫೬೧ ನೇ ಬುದ್ಧ ಜಯಂತಿ ಅಂಗವಾಗಿ ಏರ್ಪಡಿಸಿದ್ದ ಸಾರ್ವಜನಿಕ ಸಮಾರಂಭದಲ್ಲಿ ಮಾತನಾಡಿದ ಅವರು
ಮನುಷ್ಯನಿಗೆ ಯೋಚನಾಶಕ್ತಿ ಇದೆ ,ಅದ್ದರಿಂದ ನಾಗರೀಕ ಸಮಾಜ ಸೃಷ್ಟಿಯಾಗಬೇಕಾದರೆ ಒಂದು ಧರ್ಮದ ಅಗತ್ಯವಿತ್ತು ಆ ಅಗತ್ಯವನ್ನು ಬೌದ್ಧ ಧರ್ಮ ಪೂರೈಸಿದೆಎಂದರು. ಜಗತ್ತಿನ ಬಹುತೇಕ ರಾಷ್ಟ್ರಗಳಲ್ಲಿ ಇಂದು ಬೌದ್ಧ ಧರ್ಮದ ವೈಜ್ಞಾನಿಕ, ವೈಚಾರಿಕ, ವಾಸ್ತವಿಕ ಚಿಂತನೆಗಳೇ ಹೆಚ್ಚಾಗಿದ್ದು , ಬೌದ್ಧ ಧರ್ಮ ಏಷ್ಯಾ ಖಂಡದ ಬೆಳಕಾಗಿದೆ ಎಂದರು. ಪಾಪ – ಪುಣ್ಯ ಇವುಗಳ ಬಗ್ಗೆ ಬುದ್ಧ ಅಧ್ಯಯನ ಮಾಡಿಲ್ಲ‌. ಇಂದಿನ ನಮ್ಮ ಯುವಕರು ಹಿಂದೂ ಹಿಂದೂ ಧರ್ಮದಲ್ಲಿ ಇದ್ದರೂ ದಲಿತರ ಬಗ್ಗೆ ಇರುವ ಅಂಬೇಡ್ಕರ್ ಚಿಂತನೆಯನ್ನು ತಿಳಿಯುವಲ್ಲಿ ವಿಫಲರಾಗಿದ್ದಾರೆ. ಆದ್ದರಿಂದ ಮರಳಿ ಮನೆಗೆ ಬುದ್ದನೆಡೆಗೆ ಎಂಬ ಪುಸ್ತಕವನ್ನು ಪ್ರಕಾಶಿಸಲಾಗಿದೆ ಎಂದರು.
ಇದರೊಂದಿಗೆ ಹಿಮ್ಮಾವು ಬಳಿಯಲ್ಲಿ ೪೪ ಎಕರೆ ಭೂಮಿಯನ್ನು ಬೌದ್ದ ವಿದ್ಯಾಲಯ ಮತ್ತು ಅಂಬೇಡ್ಕರ್ ಕೇಂದ್ರದ ನಿರ್ಮಾಣ ಮಾಡುವ ಸಲುವಾಗಿ ನೀಡಿದ್ದೇನೆ ಅದು ಸದ್ಯದಲ್ಲೇ ರಿಜಿಸ್ಟರ್ ಆಗಲಿದೆ ಎಂದರು.


ಚಾಮರಾಜ ನಗರದ ಪ್ರಸ್ತಾವತ ನಳಂದಾ ಬುದ್ಧ ವಿಸ್ವ ವಿದ್ಯಾಲಯ ಕಾರ‌್ಯದರ್ಶಿ ಭಂತೇ ಬೋಧಿ ದತ್ತ, ಮಾತನಾಡಿ ಭಾರತದಲ್ಲಿ ಹೆಣ್ಣುಮಕ್ಕಳು ಇಂದಿಗೂ ದೀಪ ಹಚ್ಚುವುದು ಮುಂದೆ ಒಂದು ದಿನ ನಾನೂ ಬುದ್ಧನಂತೆ ಜ್ಞಾನಿಯಾಗಬೇಕು ಎನ್ನುವ ದೃಷ್ಠಿಯಿಂದ ಎಂದರು. ಬುದ್ದ ಅಂದು ಜ್ಞಾನೋದಯವನ್ನು ಪಡೆದು ೮೪ ಉಪದೇಶವನ್ನು ನೀಡಿದ್ದಾರೆ , ಮುಂದೊಂದು ದಿನ ನೀವೆಲ್ಲರು ಬುದ್ಧರಂತೆ ಆಗಬೇಕು ಎಂದು ಸುಮೇಧ ಪಂಡಿತ ಬುದ್ದನಾಗುವ ಸನ್ನಿವೇಶ, ಹಾಗೂ ಬುದ್ಧ ಪರಿನಿರ್ವಾಣ ಹೊಂದಿದ ಬಗೆಯ ಸಂಕ್ಷಿಪ್ತ ಇತಿಹಾಸ ತಿಳಿಸಿದರು. ಮತ್ತು ಪ್ರಪಂಚದಲ್ಲಿ ಐತಿಹಾಸಿಕ ಮತ್ತು ಧಾರ್ಮಿಕ ಹಿನ್ನೆಲೆ ಹೊಂದಿರುವ ವ್ಯಕ್ತಿ ಬುದ್ಧನೇ ಎಂದು ಮನುಷ್ಯ ಬುದ್ಧನಾಗುವುದು ಹೇಗೆ ಎಂಬ ಮಾರ್ಗವನ್ನು ಸೂಚಿಸಿದರು.

ಚಾಯಚಾಮರಾಜೇಂದ್ರ ಎಂಜಿನಿಯರಿಂಗ್ ಕಾಲೇಜು ಸಹ ಪ್ರಾಧ್ಯಾಪಕ ಎ.ತ್ಯಾಗರಾಜ ಮೂರ್ತಿ ಇದ್ದರು.

ವರದಿ- ಮೋಹನ ಬಿ.ಎಂ. ಮೈಸೂರು

NO COMMENTS

LEAVE A REPLY