ನಾಮಕಾವಸ್ಥೆಯ ಕಾರ್ಯ ನಿರ್ವಹಣೆ ಪರಿಶಿಷ್ಟ ಪಂಗಡದ ಬೇಡಿಕೆಗಳಿಗಾಗಿ ದ್ಯಾವಪ್ಪ ಒತ್ತಾಯ

ನಾಮಕಾವಸ್ಥೆಯ ಕಾರ್ಯ ನಿರ್ವಹಣೆ ಪರಿಶಿಷ್ಟ ಪಂಗಡದ ಬೇಡಿಕೆಗಳಿಗಾಗಿ ದ್ಯಾವಪ್ಪ ಒತ್ತಾಯ

381
0
SHARE

ನಾಮಕಾವಸ್ಥೆಯ ಕಾರ್ಯ ನಿರ್ವಹಣೆ
ಪರಿಶಿಷ್ಟ ಪಂಗಡದ ಬೇಡಿಕೆಗಳಿಗಾಗಿ ದ್ಯಾವಪ್ಪ ಒತ್ತಾಯ

ಮೈಸೂರು ಮೇ.೯ : ವಾಲ್ಮೀಕಿ ಪರಿಶಿಷ್ಟ ವರ್ಗಗಳ ಅಭಿವೃದ್ಧಿ ನಿಗಮ ರಾಜ್ಯದಲ್ಲಿ ನಾಮಕಾವಸ್ಥೆಯಾಗಿ ಕಾರ್ಯ ನಿರ್ವಹಿಸುತ್ತಿದೆ ಕರ್ನಾಟಕ ರಾಜ್ಯ ನಾಯಕ ಹಿತರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ದ್ಯಾವಪ್ಪ ನಾಯಕ ಆಗ್ರಹಿಸಿದರು .
ಮಂಗಳವಾರ ನಗರದ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ರಾಜ್ಯ ಜನಸಂಖ್ಯೆಯಲ್ಲಿ ೮೦ ಲಕ್ಷದಷ್ಟಿರುವ ಪರಿಶಿಷ್ಟ ಪಂಗಡದವರು ಶೈಕ್ಷಣಿಕ, ಆರ್ಥಿಕ ಹಾಗೂ ರಾಜಕೀಯವಾಗಿ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಎಂದರು .ಪರಿಶಿಷ್ಟ ಪಂಗಡಕ್ಕೆ ಪ್ರತ್ಯೇಕ ಸಚಿವಾಲಯ ಸ್ಥಾಪಿಸಬೇಕೆಂದು ಸಿದ್ದರಾಮಯ್ಯ ಅವರಿಗೆ ಒತ್ತಾಯಿಸಿದ್ದಾರೆ. ಸದರಿ ಇಲಾಖೆಯ ಟಿ ಎಸ್ ಪಿ ಯೋಜನೆಯಡಿ ಸಮುದಾಯ ಭವನ, ರಸ್ತೆ, ಚರಂಡಿ ಸೇರಿದಂತೆ ಮೂಲಭೂತ ಸೌಕರ್ಯಗಳ ಅನುಷ್ಠಾನದಲ್ಲಿ ವಿಳಂಬ ನೀತಿ ಅನುಸರಿಸುತ್ತಿದ್ದು, ಸಮುದಾಯದ ಅಭಿವೃದ್ಧಿ ಕುಂಠಿತವಾಗುತ್ತಿದೆ. ಹೀಗಾಗಿ ಸಮುದಾಯಗಳ ತಳಮಟ್ಟದ ಅಭಿವೃದ್ಧಿಗಾಗಿ ಪ್ರತ್ಯೇಕ ನಿಗಮ ಅತಿ ಅವಶ್ಯಕವಾಗಿದೆ ಎಂದು ತಿಳಿಸಿದರು.
ಬೇಡಿಕೆಗಳು : ರಾಜ್ಯದ ಎಲ್ಲಾ ವಿವಿಗಳಲ್ಲಿಯೂ ವಾಲ್ಮೀಕಿ ಅಧ್ಯಯನ ಪೀಠ ಸ್ಥಾಪಿಸಬೇಕು ಹಾಗೂ ಮೈಸೂರು ನಗರದಲ್ಲಿ ವಾಲ್ಮೀಕಿ ಪ್ರತಿಮೆಯನ್ನು ಸ್ಥಾಪಿಸಬೇಕು ಹಾಗೂ ಕೇಂದ್ರ ಮತ್ತು ಹೊರ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಪರಿಶಿಷ್ಟ ಪಂಗಡದವರಿಗೆ ಕೇವಲ ಶೇ.೩ರಷ್ಟು ಮೀಸಲಾತಿಯಿದೆ. ಅದನ್ನು ಶೇ.೮ಕ್ಕೆ ಏರಿಸಬೇಕು. ಸರ್ಕಾರದಿಂದ ವಾಲ್ಮೀಕಿ ಅಭಿವೃದ್ಧಿ ಪ್ರಾಧಿಕಾರ ರಚನೆಯಾಗಬೇಕು.ಎಂಬ ಬೇಡಿಕೆಗಳನ್ನು ಸರ್ಕಾರ ತ್ವರಿತವಾಗಿ ಬಗೆಹರಿಸಬೇಕು ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಪ್ರತಿಭಟನೆ ನಡೆಸುವುದಾಗಿ ತಿಳಿಸಿದ್ದಾರೆ.
ವೇದಿಕೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರಭಾರ್ಕ ಹುಣಸೂರು, ಜಿಲ್ಲಾ ಕಾರ್ಯದರ್ಶಿ ಸುರೇಶ್ ಕುಮಾರ ಬೀಡು, ಖಜಾಂಚಿ ಮಾದೇಶ ಕೆರಹಳ್ಳಿ, ನಗರಾಧ್ಯಕ್ಷ ರಾಜು ಮಾರ್ಕೆಟ್ ಇದ್ದರು .

NO COMMENTS

LEAVE A REPLY