ವಿವಿಗಳಲ್ಲಿ ಸಮರ್ಪಕವಾದ ಕೆಲಸಗಳು ಸಾಗುತ್ತಿಲ್ಲ

ವಿವಿಗಳಲ್ಲಿ ಸಮರ್ಪಕವಾದ ಕೆಲಸಗಳು ಸಾಗುತ್ತಿಲ್ಲ

388
0
SHARE

ವಿವಿಗಳಲ್ಲಿ ಸಮರ್ಪಕವಾದ ಕೆಲಸಗಳು ಸಾಗುತ್ತಿಲ್ಲ

ಮೈಸೂರು ಮ್ಯಾಟರ್ ವಾರ್ತೆ ಮೆ.೫:

ಇತ್ತೀಚೆಗೆ ಜ್ಞಾನ ಸಾರುವ ವಿವಿಗಳಲ್ಲಿ ಸಮರ್ಪಕವಾದ ಕೆಲಸಗಳು ಸಾಗುತ್ತಿಲ್ಲ ಎಂದು ನಿವೃತ್ತ ಸಮಾಜಶಾಸ್ತ್ರ ಪ್ರಾಧ್ಯಾಪಕ ಡಾ.ಸತ್ಯನಾರಾಣ ವಿಷಾದಿಸಿದರು.

ನಗರದ ಸೆಂಟರ್ ಫಾರ್ ರಿಸರ್ಚ್ ಇನ್ ರೂರಲ್ ಅಂಡ್ ಟ್ರೈಬಲ್ ಡೆವಲಪ್‍ಮೆಂಟ್ ಸಂಸ್ಥೆನಲ್ಲಿ ಎಂ.ಎಸ್.ಡಬ್ಲೂ ಸೋಸಿಯಲೈಟ್ ಸಹಯೋಗದೊಂದಿಗೆ ಸಿಡಿಪಿಓ ಮತ್ತು ಗ್ರೇಡ್-1 ಅಧೀಕ್ಷಕ ಹುದ್ದೆಗಳಿಗೆ ನೀಡುವ 6 ದಿನಗಳ ತರಭೇತಿ ಕಾರ್ಯಾಗಾರದಲ್ಲಿ ಮಾತನಾಡಿದ ಅವರು ಇಂದು ವಿವಿಗಳಲ್ಲಿ ಶಿಕ್ಷಣದ ಗುಣಮಟ್ಟ ಕಡಿಮೆಯಾಗಿದೆ ಎಂದರು.

ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಬೇಕಾದ ಸರಕುಗಳು ಸಿಗುತ್ತಿಲ್ಲ, ಆದ್ದರಿಂದ ವಿದ್ಯಾರ್ಥಿಗಳು ಟ್ಯೂಷನ್, ಮತ್ತು ಟ್ಯೂಟೋರಿಯಲ್ ತರಗತಿಗಳ ಮೊರೆ ಹೋಗುತ್ತಿದ್ದಾರೆ. ಈ ನಿಟ್ಟಿನಲ್ಲಿ ಹೆಚ್ಚಾಗಿ ಸ್ಪೈರಲ್ ಬೈಂಡಿಂಗ್ ಮೂಲಕ ನೋಟ್ಸ್ ಗಳನ್ನು ವಿದ್ಯಾರ್ಥಿಗಳಿಗೆ ನೀಡಿ ಹೊರಗಿನ ವಿಷಯಗಳನ್ನು ತಿಳಿಯುವಲ್ಲಿ ವಿದ್ಯಾರ್ಥಿಗಳು ಅಸಮರ್ಥರಾಗುತ್ತಿದ್ದಾರೆ.

ಆದ್ದರಿಂದ ಈ ಸ್ವಾಯತ್ತ ಸಂಸ್ಥೆಯು ಎಲ್ಲಾ ರೀತಿಯ ನೋಟ್ಸ್ ಅನ್ನು ಬಿಟ್ಟು ಸಮಗ್ರ ಮಾಹಿತಿಯನ್ನು ವಿದ್ಯಾರ್ಥಿಗಳಿಗೆ ನೀಡಲಿದೆ ಇದನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

6 ದಿನಗಳ ಕಾಲ ನಡೆಯಲಿರುವ ಈ ತರಭೇತಿ ಕಾರ್ಯಾಗಾರದಲ್ಲಿ ಸಮಾಜಕಾರ್ಯ, ಸಮಾಜಶಾಸ್ತ್ರ, ಪೌಷ್ಠಿಕತೆ, ಮಹಿಳಾ ಅಧ್ಯಯನ ಮತ್ತು ಮಕ್ಕಳ ಆರೋಗ್ಯ ಸೇವಾ ಕ್ಷೇತ್ರದಲ್ಲಿ ಪರಿಣತಿ ಉಳ್ಳ 100ಕ್ಕೂ ಹೆಚ್ಚು ಅಭ್ಯರ್ಥಿಗಳು ಭಾಗವಹಿಸಿದ್ದರು.

ಸಂಸ್ಥೆಯ ಕಾರ್ಯದರ್ಶಿ ಡಾ.ಆರ್. ನಾಗರಾಜು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದು, ನಿವೃತ್ತ ಪ್ರಾಧ್ಯಾಪಕ ರಮಣಯ್ಯ, ಟ್ರಸ್ಟೀಗಳಾದ ಪ್ರೊ.ಕೃಷ್ಣಪ್ಪ, ಪ್ರೊ. ಕೆ.ಟಿ ಶಿವಣ್ಣ ಭಾಗವಹಿಸಿದ್ದು ,ಪ್ರೊ. ಕಾಳಚನ್ನೆಗೌಡ ಸ್ವಾಗತಿಸಿದರು.

ವರದಿ – ಮೋಹನ ಬಿ.ಎಂ.

NO COMMENTS

LEAVE A REPLY