ವಿವಿಗಳಲ್ಲಿ ಗುಣಮಟ್ಟದ ಶಿಕ್ಷಣದ ಕೊರತೆ

ವಿವಿಗಳಲ್ಲಿ ಗುಣಮಟ್ಟದ ಶಿಕ್ಷಣದ ಕೊರತೆ

389
0
SHARE

ವಿವಿಗಳಲ್ಲಿ ಗುಣಮಟ್ಟದ ಶಿಕ್ಷಣದ ಕೊರತೆ

ಮೈಸೂರುಮ್ಯಾಟರ್ ವಾರ್ತೆ ಮೇ.4 :

ಇಂದು ಜ್ಞಾನ ಬೆಳೆಸುವ ವಿವಿಗಳಲ್ಲಿಯೇ ಶಿಕ್ಷಣದ ಗುಣಮಟ್ಟ ಕುಸಿದಿದೆ ಎಂದು ಪರೀಕ್ಷಾಂಗ ಕುಲಸಚಿವ ಸೋಮಶೇಖರ್ ಅಭಿಪ್ರಾಯ ಪಟ್ಟರು‌.
ಡಾ.ಬಿ.ಆರ್.ಅಂಬೇಡ್ಕರ್ ಅವರ 126ನೇ ಜನ್ಮ ದಿನೋತ್ಸವ ಪ್ರಯುಕ್ತ ಗುರುವಾರ ಮಾನಸಗಂಗೋತ್ರಿಯ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ವತಿಯಿಂದ ಆಬಿ.ಎಂ.ಗಿರಿರಾಜ್ ನಿರ್ದೇಶನದ ‘ಭಾರತ ಭಾಗ್ಯ ವಿಧಾತ’ ದೃಶ್ಯ ರೂಪಕ ಪ್ರದರ್ಶನ ಆಯೋಜನೆ ಹಾಗೂ ವಿಭಾಗದ ಸುತ್ತಮುತ್ತ ಸಸಿಗಳನ್ನು ನೆಡುವ ಮೂಲಕ ಅರ್ಥಪೂರ್ಣವಾಗಿ ಆಚರಿಸಲಾಯಿತು.
ಮಾನಸಗಂಗೋತ್ರಿಯ ಮಾನವಿಕ ಸಮುಚ್ಛಯದ ಹರ್ಮನ್ ಮೋಗ್ಲಿಂಗ್ ಸಂವಹನ ತಂತ್ರಜ್ಞಾನ ಕೇಂದ್ರದ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಬಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಅವರ ಜಯಂತ್ಯೋತ್ಸವ ಕಾರ್ಯಕ್ರಮವನ್ನು ಮೈಸೂರು ವಿಶ್ವವಿದ್ಯಾನಿಲಯದ ಪರೀಕ್ಷಾಂಗ ಕುಲಸಚಿವ ಡಾ.ಸೋಮಶೇಖರ್ ಉದ್ಘಾಟಿಸಿ, ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿದರು. ಹಾಗೂ ಮನಸ್ಸನ್ನು ಬೆಳೆಸುವುದೆ ಮಾನವನ ಅಸ್ತಿತ್ವದ ಅಂತಿಮ ಗುರಿ ಎಂಬ ಸಂದೇಶವನ್ನು ಅಂಬೇಡ್ಕರ್ ಅವರ ಜಗತ್ತಿನ ಸಂದೇಶವನ್ನು ತಿಳಿ ಹೇಳಿದರು.
ಈ ವೇಳೆ ಮಾತನಾಡಿ, ಪತ್ರಿಕೋದ್ಯಮದಲ್ಲಿ ಒಳಗೊಳ್ಳುವ ಯಾವುದೇ ವಿಷಯಗಳು ಅಂದಿನ ಸಮಾಜದಲ್ಲಿ ಇಲ್ಲವೆಂಬುದನ್ನು ಮನಗಂಡ ಡಾ.ಬಿ.ಆರ್.ಅಂಬೇಡ್ಕರ್ ಅವರು ಪತ್ರಿಕೋದ್ಯಮದ ಕಾರ್ಯಗಳು ಈ ಸಮಾಜಕ್ಕೆ ತುಂಬಾ ಅವಶ್ಯಕ ಎಂದು ಮನಗಂಡಿದ್ದರು. ಆದ ಕಾರಣ ತಾವೇ ಸ್ವಯಂ ಪ್ರೇರಿತರಾಗಿ ಒಬ್ಬ ಪತ್ರಕರ್ತನಾಗುವ ಮೂಲಕ ದೇಶದಲ್ಲಿರುವ ಶೋಷಿತ ವರ್ಗಗಳಿಗೆ ಹೊಸ ಆಯಾಮವನ್ನು ನೀಡಿದ್ದಂತಹ ಮಹಾನ್ ಮಾನವತಾವಾದಿ ಎಂದು ಶ್ಲಾಘಿಸಿದರು.
ಅಂಬೇಡ್ಕರ್ ಅವರು ತಮ್ಮ ಶಾಲಾ ದಿನಗಳಿಂದ ಉನ್ನತ ಶಿಕ್ಷಣದವರೆಗೂ ಜ್ಞಾನದ ಅನುಸಂಧಾನದಿಂದಾಗಿ ಬಹುದೊಡ್ಡ ಶಕ್ತಿಯಾಗಿ ರೂಪುಗೊಂಡಿದ್ದರು. ಆದರೆ ದೇಶಕ್ಕೆ ಸ್ವಾತಂತ್ರ್ಯ ಬಂದು 70 ವರ್ಷಗಳೆ ಕಳೆದರೂ ವಿಶ್ವವಿದ್ಯಾನಿಲಯಗಳು ಮಾತ್ರ ಬೆಳೆದು ನಿಂತಿದೆ. ಬದಲಾಗಿ ಸ್ನಾತಕೋತ್ತರ ಅಭ್ಯರ್ಥಿಗಳಲ್ಲಿ ಕೌಶಲ್ಯವನ್ನು ಮೂಡಿಸುವಲ್ಲಿ ಎಷ್ಟರ ಮಟ್ಟಿಗೆ ಸಫಲವಾಗಿದೆ ಎಂಬುದು ಮಾತ್ರ ಇಂದಿಗೂ ಪ್ರಶ್ನೆಯಾಗಿಯೇ ಉಳಿದುಕೊಂಡಿದೆ ಎಂದು ಪ್ರಸ್ತುತ ವಿಶ್ವವಿದ್ಯಾನಿಲಯಗಳ ಕಾರ್ಯವೈಖರಿ ಕುರಿತು ಅಸಮಾಧಾನ ವ್ಯಕ್ತಪಡಿಸಿದರು.
ಇದಕ್ಕೂ ಮುನ್ನ ಪತ್ರಿಕೋದ್ಯಮ ವಿಭಾಗದ ವತಿಯಿಂದ ಮೈಸೂರು ವಿಶ್ವವಿದ್ಯಾನಿಲಯದ ಪರೀಕ್ಷಾಂಗ ಕುಲಸಚಿವ ಡಾ.ಸೋಮಶೇಖರ್, ದಲಿತ ವೆಲ್‍ಫೇರ್ ಟ್ರಸ್ಟ್ ಅಧ್ಯಕ್ಷ ಶಾಂತರಾಜು ಹಾಗೂ ಮುಖ್ಯ ಅಭಿಯಂತರರಾದ ಶಂಕರ್ ದೇವನೂರು ಎಂಬುವವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಮೈಸೂರು ದಸರಾ ವಸ್ತುಪ್ರದರ್ಶನ ಮತ್ತು ಮಾರಾಟ ಪ್ರಾಧಿಕಾರದ ಅಧ್ಯಕ್ಷ ಸಿದ್ಧರಾಜು, ಮೈಸೂರು ವಿಶ್ವವಿದ್ಯಾನಿಲಯದ ಆಡಳಿತಾಧಿಕಾರಿ ಪ್ರೊ.ರಾಮಸ್ವಾಮಿ, ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥೆ ಡಾ.ಎನ್.ಉಷಾರಾಣಿ, ಪ್ರಾಧ್ಯಾಪಕರಾದ ಡಾ.ಬಿ.ಪಿ.ಮಹೇಶ್‍ಚಂದ್ರಗುರು, ಡಾ.ಸಿ.ಕೆ.ಪುಟ್ಟಸ್ವಾಮಿ, ಸಹಾಯಕ ಪ್ರಾಧ್ಯಾಪಕರಾದ ಡಾ.ಎಂ.ಎಸ್.ಸಪ್ನ ಹಾಗೂ ಡಾ.ಎನ್.ಮಮತಾ ಸೇರಿದಂತೆ ವಿಭಾಗದ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
———————

ವರದಿ ಮೋಹನ ಬಿ.ಎಂ ಮೈಸೂರು

NO COMMENTS

LEAVE A REPLY