ಚುನಾವಣೆಯಲ್ಲಿ ಸ್ವಾಭಿಮಾನಕ್ಕೆ ಜಾಗವಿಲ್ಲ : ದೀಪಕ್

ಚುನಾವಣೆಯಲ್ಲಿ ಸ್ವಾಭಿಮಾನಕ್ಕೆ ಜಾಗವಿಲ್ಲ : ದೀಪಕ್

451
0
SHARE

ಚುನಾವಣೆಯಲ್ಲಿ ಸ್ವಾಭಿಮಾನಕ್ಕೆ ಜಾಗವಿಲ್ಲ : ದೀಪಕ್

ಮೈಸೂರು : ರಾಜಕೀಯ ಕ್ಷೇತ್ರದಲ್ಲಿ ಸ್ವಾಭಿಮಾನಕ್ಕೆ ಜಾಗವಿಲ್ಲ ಎಂದು ಪತ್ರಕರ್ತರ ಸಂಘದ ಅಧ್ಯಕ್ಷರಾದ ಕೆ.ದೀಪಕ್ ಬೇಸರ ವ್ಯಕ್ತಪಡಿಸಿದರು.

ಬಹುಜನ ವಿದ್ಯಾರ್ಥಿ ಸಂಘದ ವತಿಯಿಂದ ಭಾನುವಾರ ಮಾನಸಗಂಗೋತ್ರಿಯ ಮಾನವಿಕ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ವಿಮೋಚಕರ ಧ್ವನಿ ಸುರುಳಿ ಹಾಗೂ ಪುಸ್ತಕಗಳ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು

ಇತ್ತೀಚಿನ ದಿನಗಳಲ್ಲಿ ರಾಜಕೀಯ ಪಕ್ಷಗಳು ಕಸರೆರಚಾಟದಲ್ಲಿ ತೊಡಗಿವೆ ಅದರ ಮದ್ಯೆ ದಲಿತರ ಸ್ವಾಭಿಮಾನ ಸಾಯುತ್ತಿದೆ ಎಂದರು.ಹಾಗೆ ನೋಡಿದಲ್ಲಿ ನರೇಂದ್ರ ಮೋದಿ ಹಾಗು ಟ್ರಂಪ್ ಒಂದೇ ರೀತಿಯ ಎರಡು ಮುಖಗಳು ಎಂದು ಅಭಿಪ್ರಾಯ ಪಟ್ಟರು.

ಅದ್ಯಕ್ಷತೆಯನ್ನು ವಹಿಸಿ ಮಾತನಾಡಿದ ಸಾಹಿತಿ ಕೆ.ಎಸ್.ಭಗವಾನ್,ಗ್ರಂಥಾಲಯವೆ ದೇವಸ್ಥಾನ ಅದಕ್ಕೆ ಅತೀ ಹೆಚ್ಚು ಕಾಲ ಓದುವ ಹವ್ಯಾಸವನ್ನು ಬೇಳೆಸಿಕೋಳ್ಳಿ ಮೌಡ್ಯಕ್ಕೆ ಒಳಗಾಗಬೇಡಿ ಎಂದು ಹೇಳಿದರು.

ವಿಚಾರ ಲಹರಿ, ಟ್ರಂಪ್ ಆಧುನಿಕ ಪುಷ್ಯಮಿತ್ರ ಸುಂಗ ಪುಸ್ತಕವನ್ನು ಬಿಡುಗಡೆ ಮಾಡಲಾಯಿತು.

ನಾಗಸಿದ್ದಾರ್ಥ ಹೊಲೆಯಾರ್ ಉದ್ಘಾಟನೆ ಮಾಡಿದರು, ಹಿರಿಯ ರಂಗಕರ್ಮಿ ರಾಜಶೇಖರ್ ಕದಂಬ,ಎಸ್.ಡಿ.ಪಿ.ಐ.ಕಾರ್ಯದರ್ಶಿ ಅಮ್ಜದ್ ಖಾನ್,ಸಾಹಿತ್ಯ ರಚನೆಕಾರರು ಗೋವಿಂದ ಸ್ವಾಮಿ,ಬಿ.ವಿ.ಎಸ್ ಸಂಯೋಜಕರು ಸೋಸಲೆ ಸಿದ್ದರಾಜು,ಗಣೇಶ್ ಮೂರ್ತಿ ಇದ್ದರು.

ವಿನೋದ್ ಕುಮಾರ್ ಎಸ್ ವಿ
ಮಾನಸ ಗಂಗೋತ್ರಿ
ಮೈಸೂರು

NO COMMENTS

LEAVE A REPLY