“ಜವಾಬ್ದಾರಿಯ‌ ಸಂಕೇತವೆ‌ ಪ್ರಶಸ್ತಿ” : ರಾಜಶೇಖರ ಕೋಟಿ

“ಜವಾಬ್ದಾರಿಯ‌ ಸಂಕೇತವೆ‌ ಪ್ರಶಸ್ತಿ” : ರಾಜಶೇಖರ ಕೋಟಿ

436
0
SHARE

“ಜವಾಬ್ದಾರಿಯ‌ ಸಂಕೇತವೆ‌ ಪ್ರಶಸ್ತಿ” : ರಾಜಶೇಖರ ಕೋಟಿ


ಮೈಸೂರು : ಪ್ರಶಸ್ತಿ ಕೂಡುವುದು ಆತನ ಸಾಧನೆಯನ್ನು ಮೆಚ್ಚಿ ಅದು ಆತನ ಜವಾಬ್ದಾರಿಯನ್ನು ಹೆಚ್ಚಿಸುತ್ತದೆ ಎಂದು ರಾಜಶೇಖರ ಕೋಟಿ ಹೇಳಿದರು.
ರೋಟರಿ ಮೈಸೂರು ಮಿಡ್ ಟೌನ್ ಬುಧವಾರ ಆಯೋಜಿಸಿದ್ದ ಸಿಲಿಕಾನ್ ಪತ್ರಿಕೋದ್ಯಮ ಪ್ರಶಸ್ತಿ ಸಮಾರಂಭದಲ್ಲಿ ಮಾತನಾಡಿ,
ನಾವು ಪ್ರಶಸ್ತಿಯನ್ನು ಅರಸಿ ಹೊಗುವುದಲ್ಲ ಅದು ತಾನಾಗೆ ಬರುವಂತದ್ದು. ಪತ್ರಿಕೆ ಎಂದರೆ ರಾಜಕೀಯ ಸುದ್ದಿಗೆ ಮೊದಲ ಆದ್ಯತೆ ನೀಡುವುದು ಸಹಜ ಅದರೂಂದಿಗೆ ಮಾನವಿಯ ಅಂತಕರಣವನ್ನು ಬೆಳೆಸುವಂತಹ ಸಾಮಾಜಿಕ ಮನೋಭಾವ ವನ್ನು ಮೂಡಿಸುವಂತಹ ಸುದ್ದಿಗೆ ಆದ್ಯತೆಯನ್ನು ನೀಡಬೇಕಾಗಿದೆ ಎಂದರು.

ವಿಜಯ ಕರ್ನಾಟಕ ಮುಖ್ಯ ವರದಿಗಾರ ಡಾ.ಕೊಡ್ಲಿ ಗುರುರಾಜ್ , ಸ್ಟಾರ್ ಆಫ್ ಮೈಸೂರು ಛಾಯಾಚಿತ್ರ ಪತ್ರಕರ್ತ ಎಮ್. ಎನ್ . ಲಕ್ಷೀ ನಾರಾಯಣ ಯಾದವ್ ಪ್ರಶಸ್ತಿಯನ್ನು ಪುರಸ್ಕರಿಸಿದರು.

ರೋಟರಿ ಮೈಸೂರು ಮಿಡ್ ಟೌನ್ ಅಧ್ಯಕ್ಷ ಕೆ.ಬಿ.ಹರೀಶ್, ಕಾರ್ಯದರ್ಶಿ ಎ.ಎನ್.ಅಯ್ಯಣ್ಣ, ಸಿಲಿಕಾನ್ ಪ್ರೈವೇಟ್ ಲಿಮಿಟೆಡ್ ನಿರ್ದೇಶಕ ಎಸ್.ರಾಘವೇಂದ್ರ, ಎಂ.ಎಸ್.ನವೀನ್ ಚಂದ್ರ ಇದ್ದರು.

: ವಿನೋದ್ ಕುಮಾರ್ ಎಸ್ ವಿ

NO COMMENTS

LEAVE A REPLY