“ಸ್ವಾತಂತ್ರ್ಯಕ್ಕಾಗಿ ಆಚರಿಸಿದ ಟಿಬೆಟ್ ದಿನ” : ಗಮನಸೆಳೆಯಿತು ಛಾಯಾಚಿತ್ರ ಪ್ರದರ್ಶನ . ಮೈಸೂರು ಮ್ಯಾಟರ್:

  435
  0
  SHARE

  “ಸ್ವಾತಂತ್ರ್ಯಕ್ಕಾಗಿ ಆಚರಿಸಿದ ಟಿಬೆಟ್ ದಿನ
  : ಗಮನಸೆಳೆಯಿತು ಛಾಯಾಚಿತ್ರ ಪ್ರದರ್ಶನ” .
  ಮೈಸೂರು ಮ್ಯಾಟರ್:
  ಟಿಬೆಟಿಯನ್ ಸಾಮ್ರಾಜ್ಯ1959 ರಲ್ಲಿ ಚೀನಾ ದೇಶ ಆಕ್ರಮಣ ಮಾಡಿದ್ದು ಅಲ್ಲಿ ಜನರ ಸ್ವಾತಂತ್ರ್ಯವನ್ನು ಕಸಿದುಕೊಂಡಿದೆ. ಆದ್ದರಿಂದ ಅಲ್ಲಿನ ಎಷ್ಟೋ ಜನರಿಗೆ ಪ್ರಜಾಪ್ರಭುತ್ವ ಎಂದರೆ ಏನು ಎಂದೇ ತಿಳಿಯದಾಗಿದೆ .ಹಾಗಾಗಿ ಟಿಬೆಟಿಯನ್ನರು ಅವರು ಪ್ರಜಾಪ್ರಭುತ್ವವನ್ನು ಆಗ್ರಹಿಸಲು ಅಲ್ಲ ನಮಗೆ ಚೀನಿಯರ ವಿರುದ್ದ ಮಾತನಾಡಲು ಸ್ವಾತಂತ್ರ್ಯವನ್ನು ಕೊಡಿ ಎನ್ನುವ ಉದ್ದೇಶದಿಂದ ಪ್ರತಿವರ್ಷ ಮಾರ್ಚ್ ೧೦ ರಂದು ಈ ಟಿಬೆಟ್ ದಿನವನ್ನು ಆಚರಿಸಲಾಗುತ್ತದೆ.
  ಭಾರತ ಸರ್ವಧರ್ಮಗಳ ನಾಡು ಸಂಸ್ಕೃತಿ ಕಲೆಗಳ ಬೀಡು ಎಂಬುದು ತಿಳಿದಿದೆ. ಆದರೆ ಈ ವಿದೇಶದ ಸಂಸ್ಕೃತಿ ಕಲೆಗಳೊಂದಿಗೆ ಅಲ್ಲಿನ ರಾಜಕೀಯ ಬಂಡಾಯಗಳು ಹಾಗೂ ಅಲ್ಲಿನ ವಾಸ್ತು ಶಿಲ್ಪಗಳು ಮತ್ತು ನೆನಪುಗಳನ್ನು ಮರುಕಳಿಸುವ ದೃಶ್ಯಗಳನ್ನು ಕೇವಲ ಛಾಯಾಚಿತ್ರದ ಮೂಲಕ ಪ್ರದರ್ಶಿಸಿದ್ದು ಸೋಜಿಗವೇ ಸರಿ ಎನ್ನುವುದನ್ನು ಮೈಸೂರು ಟಿಬೆಟ್ ಅಸೋಸಿಯೇಷನ್ ವಿದ್ಯಾರ್ಥಿ ಸಂಘ ಶುಕ್ರವಾರ ಸಾಬೀತು ಪಡಿಸಿದರು.

  ವಸ್ತು ಪ್ರದರ್ಶನದಲ್ಲಿ ಏನಿತ್ತು:
  ೧೪ ನೇ ದಲಾಯಿಲಾಮನ ಸಾಧನೆಗಳ ಚಿತ್ರ ,ಅವನು ೧೪ ನೇ ವರ್ಷದಲ್ಲಿ ನಡೆಸಿದ‌ ರಾಜಕೀಯ ಭಾಷಣ, ಟಿಬೆಟ್ ನಲ್ಲಿ ತಯಾರಾಗುವ ಆಯುರ್ವೇದ ಔಷಧಗಳು , ಕಣ್ಣಿನ ಔಷದಿ ಸೇರಿದಂತೆ ಮನೆಯ ಔಷದಿಗಳು ಸಹ ಪ್ರದರ್ಶನದಲ್ಲಿದ್ದವು.ಇದರೊಂದಿಗೆ ದಲಾಯಿಲಾಮ ನಡೆಸಿದ ರಾಜಕೀಯ ಅನ್ವೇಷಣೆಗಳು, ಇಂದಿರಾಗಾಂಧಿ ಅವರೊಂದಿಗಿನ ಸಮಾವೇಶ, ಟಿಬೆಟಿಯನ್ ಅರಮನೆ ಈ ಎಲ್ಲದರ ನೈಜ ಚಿತ್ರಣವನ್ನು ಛಾಯಾಚಿತ್ರದಲ್ಲಿ ಪ್ರದರ್ಶಿಸಿದರು.

  ವಿಶೇಷತೆ: ಟಿಬೆಟಿಯನ್ ನಲ್ಲಿ ಮ ಟೀಶರ್ಟ್ ಉಡುಪು ,ಹ್ಯಾಂಡ್‌ಬ್ಯಾಗ್ ,ಹಾಗೂ ಮಣಿಸರ, ಇವುಗಳನ್ನು ಕೊಂಡುಕೊಳ್ಳುವಲ್ಲಿ ಪ್ರೇಕ್ಷಕರ ಆಸಕ್ತಿ ಹೆಚ್ಚಾಗಿದ್ದಿತು. ಹಾಗೂ ನೈಜವಾಗಿ ಆಯುರ್ವೇದ ಔಷಧ ತಯಾರಿಕಾ ವಿಧಾನವನ್ನು ವಿಡಿಯೋ ಮೂಲಕ ಪ್ರದರ್ಶಿಸಿದ್ದು ಮಾಹಿತಿಯುಕ್ತವಾಗಿತ್ತು.
  “ಭಾರತ ಪ್ರಜಾಪ್ರಭುತ್ವ ರಾಷ್ಟ್ರ ಎಂಬುದು ಎಷ್ಟು ಸತ್ಯವೋ ಅದಕ್ಕೆ ಟಿಬೆಟ್ ವಿರುದ್ದವಾಗಿದೆ ಅದ್ದರಿಂದ ಧನಿ ಎತ್ತುವ ಸಲುವಾಗಿ ಈ ಛಾಯಾಚಿತ್ರ ಪ್ರದರ್ಶನ ಪ್ರತಿವರ್ಷ ಆಯೋಜಿಸುತ್ತೇವೆ”.

  ಟಿಂಜರ್ ಆರ್ಟಿನ್ ಟಿಬೆಟ್ ವಿದ್ಯಾರ್ಥಿನಿ.


  ಮೋಹನ ಬಿ.ಎಂ ಮೈಸೂರು

  NO COMMENTS

  LEAVE A REPLY