“ಮಹಿಳಾ ಸಾಧಕರಿಗೆ ಸೂಕ್ತ ರಕ್ಷಣೆ ಅಗತ್ಯ” : ಪ್ರತಿಮಾ ಪ್ರಸಾದ್.

“ಮಹಿಳಾ ಸಾಧಕರಿಗೆ ಸೂಕ್ತ ರಕ್ಷಣೆ ಅಗತ್ಯ” : ಪ್ರತಿಮಾ ಪ್ರಸಾದ್.

453
0
SHARE

ಮಹಿಳಾ ಸಾಧಕರಿಗೆ ಸೂಕ್ತ ರಕ್ಷಣೆ ಅಗತ್ಯ :ಪ್ರತಿಮಾ ಪ್ರಸಾದ್
ಮೈಸೂರು ಮ್ಯಾಟರ್:
ಇಂದು ಮಹಿಳೆ ಅಗಾಧ ಪ್ರಮಾಣದ ಸಾಧನೆ ಮಾಡಬೇಕಾದರೆ ಸೂಕ್ತ ರಕ್ಷಣೆಯ ಅಗತ್ಯವಿದೆ ಎಂದು ಭಾರತೀಯ ಮಹಿಳಾ ಸಂಘದ ಪ್ರಾಂತೀಯ ಅಧ್ಯಕ್ಷೆ ಪ್ರತಿಮಾ ಪ್ರಸಾದ್ ಬೇಡಿಕೆ ಇಟ್ಟರು.

ಅಂತರಸಂತೆ ಪ್ರಕಾಶನ ,ಕನ್ನಡಿಗರ ಸಹಕಾರ ಜ್ಯೋತಿ, ಅಂಬೇಡ್ಕರ್ ವಿವಿಧೋದ್ದೇಶ ಸೇವಾ ಸಂಸ್ಥೆ ಸಹಯೋಗದೊಂದಿಗೆ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ,ಡಾ.ಬಿ.ಆರ್‌ ಅಂಬೇಡ್ಕರ್ ಸಂಶೋಧನಾ ಕೇಂದ್ರದಲ್ಲಿ ಏರ್ಪಡಿಸಿದ್ದ ” ಅರಿವಿ‌ನ ಬೆಳಕು ಸಾವಿತ್ರಿಬಾಯಿ ಪುಲೆ” ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಪುಸ್ತಕ ಬಿಡುಗಡೆ ಕುರಿತು ಮಾತನಾಡಿದ ಅವರು

ಸಾವಿತ್ರಿಬಾಯಿ ಪುಲೆ ಅವರು ನಡೆದು ಬಂದ ಹಾದಿ, ಜೀವನ ವಿನಿಮಯ ಸಾಧನೆ ಮತ್ತು ಅವರು ಶೂದ್ರರ ಕುರಿತು ನಡೆಸಿದ ಪ್ರಗತಿಪರ ಚಿಂತನೆಗಳನ್ನು ವಿಮರ್ಷಿಸಿದರು. ಮಹಿಳೆಯರು ಸಮಾಜದಲ್ಲಿ ಹೊರಗೆ ಬರಲು ಎದುರುತ್ತಿದ್ದ ಪರಿಸ್ಥಿತಿ ಇತ್ತು .ಆದರೆ ಅಂತಹ ಸಂದರ್ಭದಲ್ಲಿಯೂ ಸಹ ಮಹಿಳೆ ಶಿಕ್ಷಿತಳಾಗಬೇಕು ಎಂದು ಮಹಿಳಾ ಸಬಲೀಕರಣ ನಡೆಸಿದ ಮೊಟ್ಟಮೊದಲ ಮಹಿಳೆ ಎಂದರು. ೧೮೬೩ ರಲ್ಲಿ ವಿಧವಾ ಮಕ್ಕಳಿಗೆ ಆಶ್ರಯ ನೀಡಿದರು, ಅನಾಥಾಲಯ,ವೃದ್ಧಾಶ್ರಮಗಳನ್ನು ಸಹ ನಿರ್ಮಾಣ ಮಾಡಿಸಿದರು ಎಂದು ಹೇಳಿದರು. ಇದರೊಂದಿಗೆ ಅಂಬೇಡ್ಕರ್ ,ಮತ್ತು ಜ್ಯೋತಿರಾವ್ ಪುಲೆ ಅವರ ಚಿಂತನೆಗಳನ್ನು ಮನನ ಮಾಡಿದರು.

ನಂತರ ವಕೀಲ ಟಿ.ನಾಗರಾಜು ಪ್ರಾಸ್ತಾವಿಕ ನುಡಿ ಮಾತನಾಡಿದರು.
ಇದೇ ವೇಳೆ, ಕುದುರೆಮಾಳ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯಿನಿ ಕೆ.ಪಿ ಲಲಿತಮ್ಮ ಅವರನ್ನು ಸನ್ಮಾನಿಸಲಾಯಿತು.
ಹಿರಿಯ ಸಹಕಾರಿ ಹೆಚ್‌.ವಿ ರಾಜೀವ್ ,ಎವಿವಿಎಸ್‌ ಅಧ್ಯಕ್ಷ ತುಂಬಲರಾಮಣ್ಣ, ಉಪಸ್ಥಿತರಿದ್ದರು

ಮೋಹನ ಬಿ.ಎಂ ಮೈಸೂರು

NO COMMENTS

LEAVE A REPLY