ನನ್ನ ಅದೃಷ್ಟ ಕಲ್ಪಿಸಿದ ಅವಕಾಶ :ಸಣ್ಣಯ್ಯ ಮೈಸೂರು ಮ್ಯಾಟರ್:

  440
  0
  SHARE

  ನನ್ನ ಅದೃಷ್ಟ ಕಲ್ಪಿಸಿದ ಅವಕಾಶ :ಸಣ್ಣಯ್ಯ

  ಮೈಸೂರು ಮ್ಯಾಟರ್:
  ಇಂದಿನ ಸಾಧನೆಗೆ ನನ್ನ ಅದೃಷ್ಟವೇ ನನಗೆ ಕಲ್ಪಸಿದ ಅವಕಾಶ ಎಂದು ಖ್ಯಾತ ವಿದ್ವಾಂಸ ಸಣ್ಣಯ್ಯ ಹೇಳಿಕೊಂಡರು.
  ಗುರುವಾರ ಕಲಾಮಂದಿರದ ಮನೆಯಂಗಳದಲ್ಲಿ
  ಮೈಸೂರಿನ ಕದಳಿ ಮಹಿಳಾ ವೇದಿಕೆ ಮತ್ತು ದೇಸಿರಂಗ ಸಾಂಸ್ಕೃತಿಕ ವೇದಿಕೆಯ ಸಹಯೋಗದೊಂದಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಏರ್ಪಡಿಸಿದ್ದ ಸಾಧಕರ ಕುರಿತು ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಗಿಡಕ್ಕೆ ನೀರು ಹಾಕುವ ಮೂಲಕ ಕಾರ್ಯವನ್ನು ಉದ್ಘಾಟಿಸಿದರು.

  ಕೃಷ್ಣ ಜನಮನ ಅವರ ಪ್ರಶ್ನೆಗೆ ಉತ್ತರಿಸಿ ಪ್ರಾಚ್ಯ ವಿದ್ಯಾಲಯ ಸಂಸ್ಥೆಯಲ್ಲಿ ಉತ್ತಮ ಅವಕಾಶಗಳಿದ್ದವು ಅಲ್ಲಿನ ಗ್ರಂಥಗಳು ಪ್ರಕಟಣೆಯಾಗುವ ಸಲುವಾಗಿ ಹಸ್ತಪ್ರತಿಗಳ ಸಂಗ್ರಹಕ್ಕೆ ಆಸಕ್ತಿ ಉಂಟಾಯಿತು ಎಂದರು.
  ಸಾಹಿತಿ ಹನೂರು ಕೃಷ್ಣ ಮಾತನಾಡಿ ಪಾಗೂ ಹಳಕಟ್ಟಿ ಅವರ ಕಾಲದಿಂದಲೂ ಸಹ ಸಣ್ಣಯ್ಯ ಅವರು ಹಸ್ತಪ್ರತಿಗಳ ಸಂಗ್ರಹ ಮತ್ತು ತರ್ಜುಮೆ ಮಾಡುತ್ತಿದ್ದಾರೆ ಇದು ಅವರ ಗಣನೀಯ ಸಾಧನೆಗೆ ಪೂರಕವಾಗಿದೆ ಎಂದರು.
  ಸಾಧಕ ಸಣ್ಣಯ್ಯ ಅವರನ್ನು ಕುರಿತು ಮಾತನಾಡಿದ ಮಂಡ್ಯ ಮಹಿಳಾ ಸರ್ಕಾರಿ ಕಾಲೇಜಿನ ಸಹ ಪ್ರಾದ್ಯಾಪಕ ಡಾ.ಎ.ಆರ್ ಮದನ್‌ಕುಮಾರ್ ವಿವಿಧ ಹಸ್ತಪ್ರತಿಗಳನ್ನು ಸಂಗ್ರಹಿಸಿ ಮೈಕ್ರೋಫಿಲ್ಮ್‌ಗಳನ್ನು ಪ್ರಕಟಿಸುತ್ತಿದ್ದರು. ಇದುವರೆಗೂ 95ಕೃತಿಗಳನ್ನು ರಚಿಸಿ ಸುಮಾರು 50 ಲೇಖನಗಳನ್ನು ಪತ್ರಿಕೆಗಳಲ್ಲಿ ಪ್ರಕಟಿಸಿದ್ದಾರೆ ಎಂದರು.
  ಹಾಗೂ ಕರ್ನಾಟಕ, ತಮಿಳುನಾಡು ನೆರೆ ರಾಜ್ಯಗಳಿಂದ 55 ಜೈನ
  ಸಹಾಯಕ ನಿರ್ದೇಶಕ ಹೆಚ್‌.ಚನ್ನಪ್ಪ ಪ್ರಾಸ್ತಾವಿಕ ನುಡಿಯನ್ನಾಡಿದರು.

  ಭಿತ್ತಿಚಿತ್ರ ಪ್ರದರ್ಶನ :
  ದೇಶಿಕೇಂದ್ರ ಸ್ವಾಮಿ ಅವರಿಂದ ಪುಸ್ತಕ ಬಿಡುಗಡೆ, ಮಹಾವೀರ ಜಯಂತಿ ಅಂದು ಅವರಿಂದ ಸನ್ಮಾನ, ದೇವೇಂದ್ರ ಕೀರ್ತಿ ಮತ್ತು 2013ರಲ್ಲಿ ಶ್ರೀಕಂಠ ಬಿದರಿ ಅವರಿಂದ ಸನ್ಮಾನ, ಡಾ.ಹಂ.ಪ ನಾಗರಾಜಯ್ಯ, ಇಂದ್ರಕು
  ಮಾರ್ ,ಜಿತೇಂದ್ರ ಕುಮಾರ್ ಅವರಿಂದ ವರ್ಧಮಾನ ಅವರಿಂದ ಪುರಾಣ ಸಂಪುಟ ಬಿಡುಗಡೆ ,ಗೋಂವಿಂದಪೈ ಸಂಸ್ಥೆಯಿಂದ ಸೇಡಿಯಾಪು ಪ್ರಶಸ್ತಿ, ರಾಜದಯಪಾಲ ರಮಾದೇವಿ ಅವರಿಂದ ಚಾವುಂಡರಾಯ ಪ್ರಶಸ್ತಿ, ಹೀಗೆ ಅನೇಕ ಪ್ರಶಸ್ತಿ ಮತ್ತು ಕೃತಿಗಳನ್ನು ರಚಿಸಿ ಭಿತ್ತಿಚಿತ್ರಗಳನ್ನು ಪ್ರದರ್ಶಿಸಿದರು.

  ಪುಸ್ತಕಗಳ ಪ್ರದರ್ಶನ : ಸಣ್ಣಯ ಅವರು ರಚಿಸಿರುವ ಗೊಮ್ಮಟ ಸಾರ ಮೂರು ಸಂಪುಟ ಹಾಗೀ ಮೋಹನ ತರಂಗಿಣಿಯ ಸಂಗ್ರಹ ,ಸೇರಿದಂತೆ ಅವರ ಪ್ರಶಸ್ತಿ ಕೃತಿಗಳನ್ನು ಪ್ರದರ್ಶನದಲ್ಲಿ ಇಡಲಾಗಿತ್ತು.

  ಮೋಹನ ಬಿ.ಎಂ ಮೈಸೂರು

  NO COMMENTS

  LEAVE A REPLY