“ಬೇಸಿಗೆಯಲ್ಲೂ ಸುಂದರವಾಗಿ ಕಂಗೊಳಿಸುವ ಹಸಿರು ಬೆಟ್ಟಗಳು “

  426
  0
  SHARE

  ಬೇಸಿಗೆಯಲ್ಲೂ ಸುಂದರವಾಗಿ ಕಂಗೊಳಿಸುವ ಹಸಿರು ಬೆಟ್ಟಗಳು

  ಮೈಸೂರು ಮ್ಯಾಟರ್:-
  ಬೇಸಿಗೆಯಲ್ಲಿ ಸದಾ ಬಿಸಿಲಿನ ಬೇಗೆಯಲ್ಲೇ ಬೇಯುವ ಜನಸಿಗೆ ತಮನಗಾಳಿಯ ಸೂಸಿ ಕರೆಯುವ ಪ್ರವಾಸಿ ತಾಣ ಸಕಲೇಶಪುರ. ಸದಾ ಕಂಗೊಳಿಸುವ ಬೆಟ್ಟ, ಹಸಿರಾದ ಕಾಫಿತೋಟಗಳಿಂದ ಪ್ರವಾಸಿಗರಲ್ಲಿ ಸೋಜಿಗವನ್ನು ತರುತ್ತದೆ .
  ಮಲೆನಾಡು ಭಾಗವಾಗಿರುವ ಈ ಸಕಲೇಶಪುರ ಪಶ್ಚಿಮ ಘಟ್ಟಗಳಂತೆ ಅಮೃತಮಯವಾದ ವಾತಾವರಣದಿಂದ ಕೂಡಿರುತ್ತದೆ.
  ಟಿಪ್ಪು ಸುಲ್ತಾನ್ ೧೭೮೪ ರಿಂದ ೧೭೯೨ ರವರೆಗೆ ನರ್ಮಿಸಿರುವ ಈ ಶಾಂತಿಯುತ ವಾತಾವರಣಕ್ಕೆ ಒಮ್ಮೆ ಭೇಟಿ ನೀಡಲೇಬೇಕು.

  ವಿಶೇಷತೆ:-
  ಸಕಲೇಶಪುರ ದಿಂದ ಕುಕ್ಕೆ ಸುಬ್ರಹ್ಮಣ್ಯಕ್ಕೆ ಬೃಹತ್ ರೈಲುಮಾರ್ಗವು ಇದೆ. ಹಾಗೆ ಹೋಗುವ ಹಾದಿಯಲ್ಲಿ ರಂಗುರಂಗಿ‌ ಆಗರದಂತಿರುವ ದಟ್ಟವಾದ ಅರಣ್ಯಗಳನ್ನು ಕಾಣಬಹುದು ಮತ್ತು ಆಕಾಶದಿಂದಲೇ ಜಲಧಾರೆ ಧುಮ್ಮಿಕ್ಕುವಂತಹ ಸಾದೃಶ್ಯದ ಜಲಪಾತ ಗಳನ್ನು ಕಾಣಬಹುದು.ಇದರೊಂದಿಗೆ ಬಿಸ್ಲೆ ಬೆಟ್ಟ ,ಪುಷ್ಪಗಿರಿ ಬೆಟ್ಟಗಳ ಮೇಲೆ ನಿಂತರೆ ಹಚ್ಚ ಹಸಿರಿನ ಸೊಬಗನ್ನು ಸವಿಯಬಹುದು ಎನ್ನುತ್ತಾರೆ ಹಾಸನದ ವಿಧ್ಯಾರ್ಥಿಗಳು.
  ಹಾಗೇ ಇಲ್ಲಿ ಹೊಯ್ಸಳ ಕಾಲದ ಶಿವನ ದೇವಾಲಯ ಮತ್ತು ವಾಸ್ತುಶಿಲ್ಪಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ಒಂದು ಗ್ರಂಥವನ್ನೇ ಸೃಷ್ಟಿಸಬಹುದು.

  ಕೋಟ್
  ಪ್ರತಿವರ್ಷ ನಾವೂ ಬೇಸಿಗೆಯಲ್ಲಿಯೇ ಪ್ರವಾಸ ಕೈಗೊಳ್ಳುತ್ತೇವೆ. ಏಕೆಂದರೆ ಎಲ್ಲ ಸ್ಥಳಗಳಲ್ಲಿ ಮರಗಿಡಗಳು ಬಾಡಿದ್ದರು ಸಹ ಈ ಸಕಲೇಶ ಪುರ ಪ್ರವಾಸಿ ತಾಣ ಹಸಿರಾಗಿರುತ್ತದೆ.

  ಪೂರ್ಣಿಮ
  ಹಾಸನ ವಿದ್ಯಾರ್ಥಿನಿ.
  ಮೋಹನ ಬಿ. ಎಂ.
  ಮೈಸೂರು

  NO COMMENTS

  LEAVE A REPLY