ಮಾರಕವಾಯ್ತಾ ಅಭಿವೃದ್ಧಿ ಕಾಮಗಾರಿ?

  405
  0
  SHARE

  ಮಾರಕವಾಯ್ತಾ ಅಭಿವೃದ್ಧಿ ಕಾಮಗಾರಿ?

  ಮೈಸೂರು: ನಗರದ ಹೃದಭಾಗದಲ್ಲಿರುವ ಕುಕ್ಕರಳ್ಳಿ ಕೆರೆ ಅಭಿವೃದ್ಧಿ ಕಾಮಗಾರಿ ಕೈಗೊಂಡಿರುವುದು ಮಾರಕವಾಗುತ್ತಿದೆ ಎಂದು ಸಾರ್ವಜನಿಕರ ಅಭಿಪ್ರಾಯವಾಗಿದೆ.
  ಏಕೆಂದರೆ ಅಭಿವೃದ್ಧಿ ಮಾಡುವುದರ ಜೊತೆಗೆ ಪರಿಸರ ನಾಶವೂ ಸಹ ಉಂಟಾಗುತ್ತಿದೆ. ಈಗಾಗಲೇ ಬಹುಪಾಲು ಕೆರೆಗಳಲ್ಲಿ ನೀರು ಬತ್ತಿ ಹೋಗುತ್ತಿವೆ.
  ಕೆಆರ್‌ಎಸ್ ,ಮುಳ್ಳೂರು ಕೆರೆ, ಬೋರನ ಕಟ್ಟೆ, ಹುಣಸೂರಿನ ಲಕ್ಷಣತೀರ್ಥ ,ಕುಕ್ಕರಳ್ಳಿ ಕೆರೆ, ಸೇರಿದಂತೆ ಸಾಕಷ್ಟು ಕೆರೆಗಳಲ್ಲಿ ನೀರು ಬತ್ತಿದೆ.
  ಆದರೆ ನಗರದ ಕುಕ್ಕರಳ್ಳಿ ಕೆರೆಯಲ್ಲಿ ಅಭಿವೃದ್ಧಿ ಕಾಮಗಾರಿ ಚಾಲನೆಯಾಗಿದೆ ,ಸಾರ್ವಜನಿಕರು ಕೆರೆಗೆ ಬರುವ ಚರಂಡಿ ನೀರನ್ನು ಬೇರೆಡೆಗೆ ಸಾಗಿಸಿದರೆ ಸಾಕು ,ಪರಿಸರ ಹಾನಿಯಾಗುವ ಅಭಿವೃದ್ಧಿ ಬೇಕಿಲ್ಲ ಎನ್ನುತ್ತಿದ್ದಾರೆ.
  ಈ ಕುರಿತು ಮೈಸೂರಿನ ಪ್ರಭಾರ ಕುಲಪತಿ ಜಿಲ್ಲಾಧಿಕಾರಿಗಳಿಗೆ ಕಾಮಗಾರಿ ಸ್ಥಗಿತಗೊಳಿಸುವಂತೆ ಒತ್ತಾಯಿಸಿದ್ದಾರೆ.
  ಪರಿಸರ ತಜ್ಞರು ಹಾಗೂ ಕೆರೆ ಅಭಿವೃದ್ಧಿ ಮಂಡಳಿ, ಸಾರ್ವಜನಿಕರ ಅಭಿಪ್ರಾಯ ಸಂಗ್ರಹಿಸದೇ ಏಕಾ-ಏಕಿ ಅಭಿವೃದ್ಧಿ ಕಾಮಗಾರಿ ಆರಂಬಿಸಿರುವುದು ವಲಸೆ ಪಕ್ಷಿಗಳ ಅಂತ್ಯವಾಗಲು ಕಾರಣವಾಗುತ್ತಿದೆ.

  ಕೋಟ್ -೧
  ಕೆರೆಯ ಹೂಳನ್ನು ತೆಗೆಸಿದರೆ ಸಾಕು ಆದರೆ ಅಭಿವೃದ್ಧಿಯ ಹೆಸರಿನಲ್ಲಿ ವನ್ಯಜೀವಿಗಳನ್ನು ಹತವಾಗಿಸುವುದು ಸರಿಯಲ್ಲ.
  ಸಿದ್ದರಾಜು ಆರ್
  ಸಾರ್ವಜನಿಕ.

  ಕೋಟ್-೨
  ಅಭಿವೃದ್ಧಿ ಉತ್ತಮವಾದುದೆ ಏಕೆಂದರೆ ಕೆರೆಯಲ್ಲಿ ಅಧಿಕ ಸೊಳ್ಳೆಗಳು ಇದ್ದು ಅನಾರೋಗ್ಯ ಉಂಟು ಮಾಡಿದ್ದು ಆಗಿದೆ ಸಾರ್ವಜನಿಕರು ಇದನ್ನು ಸಹ ಅರ್ಥಮಾಡಿಕೊಂಡು ಸಹಕರಿಸಬೇಕು.
  ಶೇಖರ್ ಗೊಪಿನಾಥಮ್
  ಕನ್ನಡಪ್ರಭ

  ಮೋಹನ ಬಿ.ಎಂ
  ಮೈಸೂರು.

  NO COMMENTS

  LEAVE A REPLY