ಮರಳಿನಲ್ಲಿ ಅರಳಿದ ಶಿಲ್ಪಕಲೆ.

  382
  0
  SHARE

  ಮೈಸೂರು: ಕಲೆ ಎಲ್ಲರನ್ನು ಕೈಬೀಸಿ ಕರೆಯುತ್ತದೆ, ಆದರೆ ಅದನ್ನು ಕರಗತ ಮಾಡಿಕೊಳ್ಳುವುದು ಕೆಲವರು ಮಾತ್ರ.
  ಹಾಗೇ ಮೈಸೂರಿನಲ್ಲಿಲರುವ ಈ ಮರಳು ಶಿಲ್ಪ ಸಂಗ್ರಹಾಲಯ ಭಾರತದಲ್ಲೇ ಮೊಟ್ಟ ಮೊದಲನೆಯದಾಗಿದೆ.
  ಒಂದು ಎಕರೆ ತೆಂಗಿನ ತೋಟದಲ್ಲಿ ಕಂಗೊಳಿಸುತ್ತಿರುವ ಈ ಮರಳಿನ ಶಿಲ್ಪಕಲೆ ಪ್ರತಿ ವರ್ಷವೂ ಸಹ ಹೊಸದಾದ ಒಂದೊಂದು ಶಿಲ್ಪವನ್ನು ನಿರ್ಮಿಸುತ್ತಾರೆ.

  ಶಿಲ್ಪಗಳ ವಿಶೇಷತೆ:
  ಈ ಸಂಗ್ರಹಾಲಯದಲ್ಲಿ ಧರ್ಮಗಳನ್ನು ಸೂಚಿಸುವ ದೈವ ವಿಗ್ರಹ ,ಮಹಾಭಾರತದಲ್ಲಿ ಕೃಷ್ಣ ಸಾರಥ್ಯ ವಹಿಸಿದ ರಥದ ಶಿಲ್ಪ, ಮಕ್ಕಳನ್ನು ಆಕರ್ಷಿಸುವ ಟಾಮ್ ಅಂಡ್ ಜೆರ್ರಿ ,ಗರುಡ ,ರಾಣಿ ಚೆನ್ನಮ ,ನವಿಲು ,ಪ್ರೇಮಿಗಳನ್ನು ಆಕರ್ಷಿಸುವ ರೊಮ್ಯಾಂಟಿಕ್ ಪ್ರೇಮ ಶಿಲ್ಪ ಎಲ್ಲವೂ ಇವೆ. ಮೈಸೂರು ಮೃಗಾಲಯ ಮತ್ತು ಚಾಮುಂಡಿ ಬೆಟ್ಟ ,ದಸರಾ ವಸ್ತು ಸಂಗ್ರಹಾಲಯಕ್ಕೆ ಹತ್ತಿರ ಇರುವುದರಿಂದ ಇಲ್ಲಿಗೂ ಒಮ್ಮೆಲೆ ಧಾವಿಸಬಹುದು.

  ಮೈಸೂರಿನ ಜಾಕಿ ಕ್ವಾರ್ಟಸ್ ನಲ್ಲಿ ಇರಿಸಲಾಗಿದ್ದು, ಬೆಳಿಗ್ಗೆ 8:30 ಸಂಜೆ 6 ಗಂಟೆಗಳ ವರೆಗೆ ಪ್ರವೇಶ ಇರುತ್ತದೆ.
  ಪಾರಂಪರಿಕ ನಗರದಲ್ಲಿ ನಿಮ್ಮ ಶಿಲ್ಪಗಳನ್ನು ತನ್ನಿ ಅದಕ್ಕು ಮೊದಲು ಪ್ರದರ್ಶದಲ್ಲಿರುವ ಈ ಶಿಲ್ಪಗಳನ್ನು ಕಾಣಬನ್ನಿ.

  ಮೋಹನ ಬಿ.ಎಂ
  ಮೈಸೂರು

  NO COMMENTS

  LEAVE A REPLY