ಸೃಷ್ಟಿಯ ದೃಷ್ಟಿ ಈ ಯೋಜನೆ

ಸೃಷ್ಟಿಯ ದೃಷ್ಟಿ ಈ ಯೋಜನೆ

497
0
SHARE

ಸೃಷ್ಟಿಯ ದೃಷ್ಟಿ ಈ ಯೋಜನೆ:ಕೃಷ್ಣ ಹೊಂಬಾಲ್

ಮೈಸೂರು: ವಿಜ್ಞಾನ ದಿನವಾದ ಇಂದು ವಿಶೇಷ ಚೇತನರಿಗೆ ಆಯೋಜಿತವಾದ ಈ ಕಾರ್ಯಕ್ರಮ ಸೃಷ್ಟಿಯ ದೃಷ್ಟಿ ಈ ಯೋಜನೆಗೆ ಸಾಕ್ಷಿಯಾಗಿದೆ ಎಂದು ದೃಷ್ಠಿ ಸಂಸ್ಥೆಯ ಸಂಚಾಲಕ ಕೃಷ್ಣ ಹೊಂಬಾಲ್ ಅಭಿಪ್ರಾಯ ಪಟ್ಟರು.

ದೃಷ್ಠಿ ಸಂಸ್ಥೆವತಿಯಿಂದ ಮಾನಸಗಂಗೋತ್ರಿಯ ವಿಜ್ಞಾನ ಭವನದಲ್ಲಿ ಏರ್ಪಡಿಸಲಾದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.
ಈ ಕಾರ್ಯಕ್ರಮವನ್ನು ನೊಬೆಲ್ ಪ್ರಶಸ್ತಿ ವಿಜೇತ ಸರ್ ಸಿ.ವಿ.ರಾಮನ್ ಅವರ ಹಿನ್ನೆಲೆಯಲ್ಲಿ ಆಚರಿಸಲಾಗಿದೆ ಎಂದರು.
ಇಂದು ಬಾಹ್ಯ ದೃಷ್ಠಿ ಉಳ್ಳವರಿಗಿಂತ ಅಂತರ ದೃಷ್ಠಿ ಉಳ್ಳವರಿಗೆ ಹೆಚ್ಚು ಸ್ವಾತಂತ್ರ್ಯವಿದೆ. ಆದ್ದರಿಂದ ಉನ್ನತ ಶಿಕ್ಷಣದಲ್ಲಿರುವ ವಿಶೇಷ ಚೇತನರಿಗೆ ಉಪಯೋಗ ಆಗುವ ನಿಟ್ಟಿನಲ್ಲಿ ಈ ಯೋಜನೆಯನ್ನು ಆರಂಭಿಸಲಾಗಿದೆ.
ಕಾರ್ಯಕ್ರಮದ ಉದ್ಘಾಟನೆ ಭಾಷಣ ಮಾಡಿದ ಪರೀಕ್ಷಾಂಗ ಕುಲಸಚಿವ ಪ್ರೋ.ಜೆ.ಸೋಮಶೇಖರ್ ಇಂದು ದೃಷ್ಠಿ ಇರುವ ಜನವರಿಗಿಂತ ದೃಷ್ಟಿ ಇಲ್ಲದವರ ಸಾಧನೆ ಮತ್ತು ಆವಿಷ್ಕಾರ ಹೆಚ್ಚಾಗಿದೆ.
ನಾವೂ ಕೂಡ ವಿಜ್ಞಾನವನ್ನು ಕಬ್ಬಿಣದ ಕಡಲೆ ಎಂದು ಭಾವಿಸಿದ್ದೇವು, ಆದರೆ ಇಂದು ತಂತ್ರಜ್ಞಾನದ ಬಳಕೆ ಕಷ್ಟವನ್ನು ಸಹ ಸುಲಭ ಸಾಧ್ಯವಾಗಿ ಮಾಡುತ್ತಿದೆ ಎಂದರು.
ಇಂದಿನ ದೃಷ್ಠಿ ಚೇತನ ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಕಂಪನವಿದೆ ಅದನ್ನು ನಾವೂ ಅರಿಯಬೇಕು  ಎಂದರು.
ಮೊದಲ ಉಪನ್ಯಾಸ ಕುರಿತು ಮಾತನಾಡಿದ ಬೆಂಗಳೂರಿನ ತಾಂತ್ರಿಕ ಸಲಹೆಗಾರ ಶ್ರೀಧರ್ ಕಂಪ್ಯೂಟರ್ ಮೂಲಕ ವಿಕಲಚೇತನ ಮತ್ತು ದೃಷ್ಟಿ ಹೀನ ವಿದ್ಯಾರ್ಥಿಗಳಿಗೆ ಉಪಯೋಗ ಆಗುವಂತಹ ಸಾಫ್ಟ್‌ವೇರ್ ಗಳ ಬಗ್ಗೆ ಮಾರ್ಗದರ್ಶನ ನೀಡು ಉಪಯೋಗಿಸುವ ಮಾದರಿಯನ್ನು ತಿಳಿಸಿದರು.
ಕಾರ್ಯಕ್ರಮದ ಸಂಚಾಲಕಿ ಪ್ರೊ.ಎನ್ ಉಷಾರಾಣಿ, ಸಿಇಒ ನ ನಿರ್ದೇಶಕಿ ಡಾ.ಸುಷ್ಮಾ ಅಪ್ಪಯ್ಯ ,ಕರ್ನಾಟಕ ವಿವಿಯ ಸಹ ಪ್ರಾಧ್ಯಾಪಕ ಮಲ್ಲಪ್ಪ ಬಂಡಿ ವೇದಿಕೆಯಲ್ಲಿದ್ದರು.

ಮೋಹನ ಬಿ.ಎಂ
ಮೈಸೂರು

NO COMMENTS

LEAVE A REPLY