ನೆನಪಿನ ಆಗರವಾದ ಕೊಡಗಿನ ಅರಮನೆ

  423
  0
  SHARE

  ನೆನಪಿನ ಆಗರವಾದ ಕೊಡಗಿನ ಅರಮನೆ.
  ಸುಂದರ ಬದುಕಿನಲ್ಲೊಂದು ಚಂದದ ಮುನ್ನುಡಿಯಂತೆ ಕಂಡ ಈ ಪ್ರವಾಸಿ ತಾಣ ಅತ್ಯಂತ ಮನೋಹರವಾದದ್ದು.
  ಸಾಮಾನ್ಯವಾಗಿ ಅರಮನೆಗಳನ್ನು ವೀಕ್ಷಿಸುವಾಗ ಐತಿಹಾಸಿಕ ವಸ್ತುಗಳು ಮಾತ್ರ ಕಾಣುತ್ತವೆ ಆದರೆ ನಮ್ಮ ನಿತ್ಯ ಜೀವನದ ನೆನಪುಗಳನ್ನು ಮರುಕಳಿಸುವ ವಾತಾವರಣವನ್ನು ಈ ಅರಮನೆಯಲ್ಲಿ ಕಾಣಬಹುದು.
  ಆಗಿದ್ರೆ ಏನು ಅಂತ ವಿಶೇಷ ನೀವೇ ತಿಳಿಯಿರಿ .
  ಪ್ರಕೃತಿ ಸೌಂದರ್ಯದ ಖಜಾನೆಯನ್ನೇ ಹೊಂದಿರುವ ಮಡಿಕೇರಿಯಲ್ಲಿ ಶತಮಾನಗಳ ಕಾಲ ಅರಮನೆಯೊಂದು ಮನರೆಯಾದ ನೆನಪುಗಳನ್ನು ಮೆಲುಕು ಹಾಕುವಂತೆ ಮಾಡುತ್ತಿದ್ದು, ಪ್ರವಾಸಿಗರ ಗಮನ ಸೆಳೆಯುತ್ತಿದೆ. ಮಾನ್ಸೂನ್ ಮಾಸ ಮಡಿಕೇರಿಯ ಸೌಂದರ್ಯವನ್ನು ಮತ್ತಷ್ಟು ಹೆಚ್ಚುವಂತೆ ಮಾಡಿದ್ದು, ಇಲ್ಲಿರುವ ಆಕರ್ಷಣೀಯ ತಾಣಗಳ ಪೈಕಿ ನಾಲ್ಕುನಾಡು ಅರಮನೆ ಪ್ರವಾಸಿಗರ ಗಮನವನ್ನು ಹೆಚ್ಚು ಸೆಳೆಯುವಂತೆ ಮಾಡಿದೆ. 18ನೇ ಶತಮಾನದಲ್ಲಿ ದೊಡ್ಡವೀರ ರಾಜೇಂದ್ರ ಅವರು ನಿರ್ಮಿಸಿರುವ ನಾಲ್ಕುನಾಡು ಅರಮನೆ ಮಡಿಕೇರಿಯಿಂದ 30 ಕಿ.ಮೀಗಳ ದೂರದ ಯುವಕಪಾಡಿ ಗ್ರಾಮದಲ್ಲಿದೆ. ಕೊಡಗಿನ ಅತ್ಯಂತ ಎತ್ತರ ಬೆಟ್ಟವಾದ ತಡಿಯಂಡಮೋಳ್ ಬೆಟ್ಟಶ್ರೇಣಿಗಳ ನಡುವೆ ಯುವಕಪಾಡಿ ಗ್ರಾಮದ ಎತ್ತರವಾದ ಗುಡ್ಡದ ಮೇಲೆ ನಾಲ್ಕುನಾಡು ಅರಮನೆ ನಿರ್ಮಾಣವಾಗಿದ್ದು, ದಟ್ಟ ಕಾನನದ ನಡುವೆ ಅಂದಿನ ರಾಜ ಅರಮನೆಯನ್ನೇಕೆ ನಿರ್ಮಾಣ ಮಾಡಿದರು ಎಂಬ ಕುತೂಹಲದ ಪ್ರಶ್ನೆಗಳಿಗೆ ಈ ಅರಮನೆ ತನ್ನದೇ ಆದ ಇತಿಹಾಸ ಕಥೆಯನ್ನು ಹೇಳುತ್ತದೆ. ಅರಮನೆಯ ಮುಂಭಾಗದಲ್ಲಿ ಚೌಕಾಕಾರದ ಕಿರುಮಂಟಪವಿದ್ದು, ಇದಕ್ಕೆ ನಾಲ್ಕು ಪ್ರವೇಶ ದ್ವಾರಗಳಿವೆ. ಮಂಟಪದ ಮೇಲ್ಭಾಗದಲ್ಲಿ ನಾಲ್ಕು ದಿಕ್ಕಿಗೂ ಮಲಗಿರುವ ಬಸವನ ಮೂರ್ತಿಯಿದೆ. ಈ ಕಿರುಮಂಟಪವನ್ನು ವಿವಾಹಮಂಟಪವೆಂದೇ ಹೇಳಲಾಗುತ್ತದೆ. ಇದೇ ಮಂಟಪದಲ್ಲಿ 1796ರಲ್ಲಿ ದೊಡ್ಡವೀರರಾಜೇಂದ್ರ ಮತ್ತು ಮಹದೇವಮ್ಮಾಜಿಯವರ ವಿವಾಹವಾಗಿತ್ತು ಎನ್ನಲಾಗಿದೆ. ಹೆಂಚಿನ ಹೊದಿಕೆ ಹೊಂದಿರುವ ಈ ಅರಮನೆಯ ನೆಲವನ್ನು ಮರದಲ್ಲಿ ಕಲೆಗಳ ಕೆತ್ತನೆಯೊಂದಿನ ನಿರ್ಮಾಣ ಮಾಡಲಾಗಿದೆ. ಇನ್ನು ಕೆಲ ಗೋಡೆಗಳಲ್ಲಿ ರಾಜಸ್ಥಾನ ಮತ್ತು ಮೈಸೂರು ಮೂಲದ ಕಲಾವಿದರು ಪ್ರಕೃತಿಯ ಸೌಂದರ್ಯವನ್ನು ಬಿಂಬಿಸುವ ಕಲೆಗಳನ್ನು ಸುಣ್ಣದಿಂದ ಕೆತ್ತನೆ ಮಾಡಿದ್ದು, ಚಿತ್ರಗಳಲ್ಲಿ ಪೌರಾಣಿಕ ಪಕ್ಷಿಯಾಗಿರುವ ಎರಡು ತಲೆಯ ಗಂಡಬೇರುಂಡ, ಆನೆ ಮತ್ತು ಸಿಂಹಗಳು ಕಂಡುಬಂದಿದೆ. ಇದೇ ರೀತಿಯ ವಾಸ್ತುಶಿಲ್ಪ ಮಡಿಕೇರಿಯ ಓಂಕಾರೇಶ್ವರ ದೇವಸ್ಥಾನದಲ್ಲಿಯೂ ಕಾಣಸಿಗುತ್ತದೆ. ಸುತ್ತಿಲಿನ ಹಸಿರು ಕಾನನದ ಮಧ್ಯೆ ಅರಮನೆ ಕಳಶದಂತೆ ಕೂತಿರುವುದಾಗಿ ಕಾಣುತ್ತದೆ ಎಂದು ಇಲ್ಲಿನ ಹಿರಿಯರು ಅರಮನೆಯ ಸೌಂದರ್ಯವನ್ನು ವರ್ಣನೆ ಮಾಡಿದ್ದಾರೆ.
  ಮೋಹನ ಬಿ.ಎಂ
  ಮಾನಸಗಂಗೋತ್ರಿ

  NO COMMENTS

  LEAVE A REPLY