ಇವರೇನಾ ಆಧುನಿಕ ಯುಗದ ರಾಣಿ ಚನ್ನಮ್ಮ..?

ಇವರೇನಾ ಆಧುನಿಕ ಯುಗದ ರಾಣಿ ಚನ್ನಮ್ಮ..?

100
0
SHARE

Post by ಸಂದೀಪ್ ಶನಿವಾರಸಂತೆ

ಸೆಪ್ಟೆಂಬರ್ 25:ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಸದ್ದು ಮಾಡುತ್ತಿರುವ ಹೆಸರು. ಕಿರಿಕ್ ಕೀರ್ತಿಯ ಡೋಂಗಿತನ ಬಯಲು ಮಾಡಿದ ಇವರ ಬಗ್ಗೆ ತಿಳಿದುಕೊಳ್ಳೋದು ಬಹಳಷ್ಟಿದೆ.
ಕಾಶಿಮಠದ ರಾಮಚಂದ್ರ ಸ್ವಾಮೀಜಿ ಕಾರ್ಕಳದ ಸಾರ್ವಜನಿಕ ಸಭೆಯಲ್ಲಿ ಹೇಳ್ತಾರೆ “ಚೈತ್ರಾ ಕುಂದಾಪುರ ನವದುರ್ಗೆಯರ ಅವತಾರ” ಅಂತ. ಕರಾವಳಿಯ ಉಭಯ ಜಿಲ್ಲೆಗಳಲ್ಲಿ ಚಿರಪರಿಚಿತ ಹೆಸರಿದು. ಕರಾವಳಿಯ ಜಿಹಾದಿ ಶಕ್ತಿಗಳು ಈ ಹೆಸರು ಕೇಳಿದ್ರೆ ನಡುಗುತ್ತವೆ. ಲವ್ ಜಿಹಾದ್ ನ ವಿರುದ್ಧ ಪ್ರಾಣವನ್ನೆ ಪಣಕ್ಕಿಟ್ಟು ಹೋರಾಡುತ್ತಿರುವ ಹೆಣ್ಣುಮಗಳು. ಲವ್ ಜಿಹಾದ್ ವಿರುದ್ಧದ ಕಾನೂನು ಹೋರಾಟಕ್ಕಾಗಿ ಸದ್ದಿಲ್ಲದೆ ದಾಖಲೆ ಸಂಗ್ರಹಿಸಿ ಕರಾವಳಿಯಲ್ಲಿ ಬೀಡು ಬಿಡುತ್ತಿರುವ ಭಯೋತ್ಪಾದಕರ ಹುಟ್ಟಡಗಿಸಲು ಹೊರಟಾಕೆ. ಅವರ ಹೋರಾಟವನ್ನ ಕುಗ್ಗಿಸಲು ಭಯೋತ್ಪಾದಕರು ಫೋಟೋ ಎಡಿಟ್ , ಜೀವ ಬೆದರಿಕೆ ಹಾಕಿ. ಶತ ಪ್ರಯತ್ನ ಮಾಡಿದರೂ ಜಗ್ಗದೆ ಹಿಂದೂ ಧರ್ಮದ ಏಳ್ಗೆಗೆ ಶ್ರಮಿಸುತ್ತಿರುವಾಕೆ. ಅವಿಭಜಿತ ದಕ್ಷಿಣ ಕನ್ನಡದ ಜನ ನಿರೀಕ್ಷಿಸುತ್ತಿರುವ, ಆಂತಕವಾದದ ವಿರುದ್ಧ ಸೆಟೆದು ನಿಲ್ಲಬಲ್ಲ ಭವಿಷ್ಯದ ಭರವಸೆಯ ನಾಯಕಿ…. ಕುಂದಾಪುರದ ಸಾಮಾನ್ಯ ಬಡ ಕುಟುಂಬದಲ್ಲಿ ಹುಟ್ಟಿ ಸ್ವಂತ ಪರಿಶ್ರಮದಲ್ಲಿ ಪರಿಶ್ರಮದಲ್ಲಿಹೆತ್ತವರಿಗೆಹೆತ್ತವರಿಗೆ ಹೊರೆಯಾಗದಂತೆ ಪಾರ್ಟ್ ಟೈಂ ಕೆಲಸ ಮಾಡಿಕೊಂಡೆ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಅಧ್ಯಯನ ಮುಗಿಸಿ ಇಂದು ಬರುವ ಅಲ್ಪ ಸಂಬಳದಲ್ಲೆ ಕೆಲವು ಬಡ ವಿದ್ಯಾರ್ಥಿಗಳ ಶಿಕ್ಷಣದ ವೆಚ್ಚವನ್ನು ಭರಿಸಿಯೂ ಪ್ರಚಾರದ ಹಂಗಿಗೆ ಬೀಳದೆ ತನ್ನಪಾಡಿಗೆ ಇರುವವರು. ಅದಕ್ಕಿಂತ ಹೆಚ್ಚಾಗಿ ಹೆಚ್ಚಿನ ಶಿಕ್ಷಣ ಮಾಡುವುದಕ್ಕೆ ಆಗದ ಹೆಣ್ಣುಮಕ್ಕಳ ಮನೆ ಮನೆಗೆ ತೆರಳಿ ಹೆತ್ತವರ ಮನವೊಲಿಸಿ ಸದ್ದಿಲ್ಲದೆ ಹೆಣ್ಣುಮಕ್ಕಳ ಶಿಕ್ಷಣಕ್ಕೆ ಶ್ರಮಿಸುತ್ತಿರುವವರು. ಪ್ರತಿಷ್ಠಿತ ಸಂಸ್ಥೆಗಳಲ್ಲಿ ಕೆಲಸ ದೊರಕಿಯೂ ನೈತಿಕತೆ ಮಾರಿಕೊಳ್ಳದೆ ಸಾರಾಸಗಟಾಗಿ ಅಲ್ಲಿಂದ ಹೊರಬಂದವರು. ಮಹಾನಗರಗಳ ಉತ್ತಮ ಕೆಲಸದ ಅವಕಾಶವಿದ್ದೂ ಧರ್ಮ ಜಾಗೃತಿಯ ಕಾರಣಕ್ಕೆ ಊರಿನಲ್ಲೆ ನೆಲೆ ನಿಂತವರು. ವಿದ್ಯಾರ್ಥಿ ಜೀವನದಲ್ಲೆ ಯಕ್ಷಗಾನ, ಭರತನಾಟ್ಯ , ತಾಳಮದ್ದಲೆಯನ್ನು ಕಲಿತು ಏಕಪಾತ್ರಾಭಿನಯ, ನಾಟಕ, ಭಾಷಣಗಳಲ್ಲಿ 3 ಬಾರಿ ರಾಷ್ಟ್ರಮಟ್ಟ, 12 ಬಾರಿ ರಾಜ್ಯ ಮಟ್ಟಗಳಲ್ಲಿ, ಸಾವಿರಾರು ಸ್ಥಳೀಯ ಪ್ರಶಸ್ತಿಗಳನ್ನು ಬಾಚಿಕೊಂಡಾಕೆ. ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ ರಾಷ್ಟ್ರೀಯ ಕಾರ್ಯಕಾರಣಿ ಸದಸ್ಯೆಯಾಗಿ, ಕೇಂದ್ರೀಯ ಕಾರ್ಯ ಸಮಿತಿ ಸದಸ್ಯೆಯಾಗಿ ಕಾರ್ಯನಿರ್ವಹಿಸಿ ಹಲವು ರಾಷ್ಷ್ಟ್ರ ನಾಯಕರನ್ನ ದಂಗು ಬಡಿಸಿದಾಕೆ. ಚಿಕ್ಕ ವಯಸ್ಸಿನಲ್ಲೆ ಕಣ್ಣು, ಕಿಡ್ನಿ, ಹೃದಯ ದಾನಗಳ ಪ್ಲೆಡ್ಜ್ ಮಾಡಿದ ಮಾದರಿ ಹೆಣ್ಣು. ಅಕ್ಷತಾ ದೇವಾಡಿಗ ಅನ್ನುವ ಪ್ರತಿಭಾವಂತ ಹೆಣ್ಣುಮಗಳ ಕೊಲೆಯಾದಾಗ ಹೋರಾಟದ ಕಿಚ್ಚು ಹಚ್ಚಿ ಸಂಪೂರ್ಣ ಊರನ್ನೆ ಸಂಘಟಿಸಿ ಹೋರಾಟದ ಮೂಲಕ ಸಚಿವರು, ಶಾಸಕರುಗಳ ಬೆವರಿಳಿಸಿದವರು. ಹಲವು ಶೈಕ್ಷಣಿಕ ಸಮಸ್ಯೆಗೆ ಬೀದಿಗಿಳಿದು ಹೋರಾಡಿಯೂ ಪ್ರಚಾರದಿಂದ ದೂರ ಉಳಿದವರು. ಅದ್ಬುತ ಮಾತುಗಾರಿಕೆ ಇವರಿಗೆ ದೇವರು ಕೊಟ್ಟ ವರ. ವಿಚಾರವಾದಿ, ಬುದ್ಧಿ ಜೀವಿ, ಕಮ್ಯೂನಿಸ್ಟರನ್ನು ತೀಕ್ಷ್ಣ ಬರಹದ ಮೂಲಕ ಬೆತ್ತಲಾಗಿಸುತ್ತಾರೆ. ಚಿಕ್ಕ ವಯಸ್ಸಿನಲ್ಲೆ ಪ್ರಬುದ್ಧತೆ, ಸಂಘಟನಾ ಚಾತುರ್ಯದಿಂದ ಗಮನ ಸೆಳೆದವರು. ಕರಾವಳಿಯ ಸಚಿವರು ಶಾಸಕರುಗಳ ತಪ್ಪುಗಳನ್ನ ಸಾರಾಸಗಟಾಗಿ ಪ್ರಶ್ನಿಸಿ ಜೀವ ಬೆದರಿಕೆಗಳ ನಡುವೆಯೂ ಯಾವುದೆ ಭಯವಿಲ್ಲದೆ ತಿರುಗುವ ಡೈನಾಮಿಕ್ ಪತ್ರಕರ್ತೆ. ತೆರೆಮರೆಯಲ್ಲೆ ರಾಷ್ಟ್ರ ಸೇವೆ ಮಾಡುತ್ತಾ ಹಿಂದುತ್ವಕ್ಕಾಗಿ ಶ್ರಮಿಸುತ್ತಿರುವ ಇಂತಹ ಹೆಣ್ಣು ಮಕ್ಕಳು ಪ್ರತಿ ಮನೆಯಲ್ಲಿ ಹುಟ್ಟಿಬರಬೇಕು

NO COMMENTS

LEAVE A REPLY