ಮುಂದೆ ನಿಮ್ಮ ಕಥೆ ಏನು ಡಿ ಬಾಸ್ ಅಣ್ಣ..?

ಮುಂದೆ ನಿಮ್ಮ ಕಥೆ ಏನು ಡಿ ಬಾಸ್ ಅಣ್ಣ..?

105
0
SHARE

Post by Sandeep Shanivarasanthe

ಕನ್ನಡ ಚಿತ್ರ ರಂಗದ ಬೇಡಿಕೆಯ ನಟ ಚಾಲೆಂಜಿಂಗ್​ ಸ್ಟಾರ್​ ದರ್ಶನ್​. ಇವರಿಗೆ ಸಿನಿಮಾಗಳ ಮೇಲೆ ಎಷ್ಟು ಪ್ರೀತಿ ಇದೆಯೋ ಅಷ್ಟೇ ಪ್ರೀತಿ ಪ್ರಾಣಿಗಳು ಮತ್ತು ಕಾರ್​ಗಳ ಮೇಲೆಯೂ ಇದೆ. ಅದನ್ನ ನಾವೂ ಹೇಳಬೇಕಾಗಿಲ್ಲ. ಯಾಕಂದ್ರೆ ಮೊನ್ನೆ ತಾನೇ ಮೈಸೂರಿನ ಮೃಗಾಲಯಕ್ಕೆ ತೆರಳಿದ್ದ ಅವರು ಅಲ್ಲಿನ ಪ್ರಾಣಿಗಳನ್ನ ದತ್ತು ಸ್ವೀಕಾರ ಮಾಡಿದ್ರು. ಇನ್ನು ದರ್ಶನ್​ ಅವರ ಕಾರ್​ ಕ್ರೇಜ್ ಬಗ್ಗೆಯಂತೂ ನಾವು ಹೇಳಬೇಕಾಗಿಯೇ ಇಲ್ಲ. ಅವರ ಬಳಿ ಇರುವ ದುಬಾರಿ ಕಾರುಗಳೇ ಅದನ್ನ ಹೇಳುತ್ತವೆ.

ಈ ಮೆಜಸ್ಟಿಕ್​ ದಾಸನ ಕಾರ್​ ಕ್ರೇಜ್​ ಎಷ್ಟರ ಮಟ್ಟಿಗೆ ಇದೆ ಅಂದ್ರೆ, ಎಲ್ಲಾ ವರ್ಲ್ಡ್ ಕ್ಲಾಸ್ ಕಾರು​ಗಳೂ ಇವರ ಬಳಿ ಇವೆ. ಮೊನ್ನೆಯಷ್ಟೇ ತಮ್ಮ ಕಾರುಗಳ ಲಿಸ್ಟ್​ಗೆ ಸ್ಪೋರ್ಟ್ಸ್​ ಕಾರ್​ವೊಂದನ್ನ ಸೇರಿಸಿದ್ರು. up ದರ್ಶನ್​ ಬಳಿ ಇರೋ ಕಾರ್​ಗಳಲ್ಲಿ ಸಖತ್​ ಸೌಂಡ್​ ಮಾಡೋದು ಲ್ಯಾಂಬೋರ್ಗಿನಿ. ಆದರೆ ದರ್ಶನ್​ ಬಳಿ ಬಿಳಿಯಾನೆಯಷ್ಟೆ, ನೀಲಿ ಬಣ್ಣದ ಜಾಗ್ವಾರ್ ಕೂಡ ಇದೆ. ಸದ್ಯಕ್ಕೆ ಇವರ ಬಳಿ ಸುಮಾರು ₹5 ಕೋಟಿ ಬೆಲೆ ಬಾಳುವ ಲ್ಯಾಂಬೋರ್ಗಿನಿ, ಸುಮಾರು 40 ಲಕ್ಷ ರೂಪಾಯಿ ಬೆಲೆ ಬಾಳುವ ಮಿನಿ ಕೂಪರ್, 30 ಲಕ್ಷದ ಫಾರ್ಚೂನರ್, ಸುಮಾರು ₹80 ಲಕ್ಷದ ಫೋರ್ಡ್ ಮಸ್ಟಂಗ್, ₹50 ಲಕ್ಷದ ಮರ್ಸಿಡೀಜ್ ಬೆಂಜ್, ₹80 ಲಕ್ಷ ಬೆಲೆ ಬಾಳುವ ಹಮ್ಮರ್,​ ಸುಮಾರು 1 ಕೋಟಿ ರೂಪಾಯಿ ಬೆಲೆಯ ರೇಂಜ್ ರೋವರ್, ₹90 ಲಕ್ಷದ ಆಡಿ ಕ್ಯೂ 7, ಸುಮಾರು ₹90 ಲಕ್ಷದ Porsche, ₹60 ಲಕ್ಷದ ಜಾಗ್ವಾರ್, ಸೇರಿದಂತೆ ಹಲವು ದುಬಾರಿ ಕಾರುಗಳಿವೆ. ಇಷ್ಟೆಲ್ಲಾ ಕಾರುಗಳಿದ್ದು, ದಾಸನ ಕಾರ್ ಕ್ರೇಜ್ ಹೇಗಿದೆ ಎಂಬುದು ಇದರಿಂದಲೇ ಗೊತ್ತಾಗುತ್ತಿದೆ. ಮೈಸೂರಿನ ರಸ್ತೆಯಲ್ಲಿ ಲ್ಯಾಂಬೋರ್ಗಿನಿ ಕಾರೋಂದು  ಗುಲ್ಲೆಬ್ಬೆಸ್ಕೊಂಡು ಓಡಾಡ್ತಿದ್ರೆ ಸಾಕು, ದರ್ಶನ್​ ಸಾಂಸ್ಕೃತಿಕ ನಗರಿಯಲ್ಲೇ ಇದ್ದಾರೆ ಅಂತಾ ಅರ್ಥ… ಅಷ್ಟರಮಟ್ಟಿಗೆ ದರ್ಶನ್​ ಹಾಗೂ ಅವರ ಲ್ಯಾಂಬೋರ್ಗಿನಿ ಕಾರ್​ ಫೇಮಸ್​. ಇನ್ನು ಇದೇ ಅಕ್ಟೋಬರ್​ನಲ್ಲಿ ಮೈಸೂರಿನಲ್ಲಿ ನಡೆಯಲಿದ್ದ ಅಂತರಾಷ್ಟ್ರೀಯ ಮಟ್ಟದ ಕಾರ್​ ರೇಸಿಂಗ್​ನಲ್ಲಿ ಪಾಲ್ಗೊಳ್ಳುವ ದೃಷ್ಟಿಯಿಂದ ವೋಕ್ಸ್​ ವ್ಯಾಗನ್​ ಸ್ಪೋರ್ಟ್ಸ್​ ಕಾರ್​ನಲ್ಲಿ ತಾಲೀಮು ನಡೆಸ್ತಿದ್ರು. ಆದ್ರೆ ಈಗ ಅವರ ಬಲ ಮುಂಗೈ ಮುರಿದಿದ್ದು, ಸ್ಪರ್ಧೆಯಲ್ಲಿ ಪಾಲ್ಗೊಳ್ಳುವ ಸಾಧ್ಯತೆ ತುಂಬಾನೇ ಕಡಿಮೆ ಇದೆ.

ಸದ್ಯ ಈ ಸ್ಯಾಂಡಲ್​ವುಡ್​ ಬಾಕ್ಸ್​ ಆಫಿಸ್​ನ ಬಾದ್​ಷಾ ಕಾರ್ ಌಕ್ಸಿಡೆಂಟ್​ನಲ್ಲಿ ಆಸ್ಪತ್ರೆ ಸೇರಿದ್ದಾರೆ. ಅವರ ಬಲ ಮುಂಗೈಗೆ 25 ಹೊಲಿಗೆ ಕೂಡಾ ಬಿದ್ದಿದೆ. ಸದ್ಯಕ್ಕಂತೂ ಅವರು ಸ್ಟೇರಿಂಗ್​ ಹಿಡಿಯೋಕೆ ಸಾಧ್ಯಾನೇ ಇಲ್ಲ. ಹಾಗಂಥಾ ಈ ಸ್ಯಾಂಡಲ್​ವುಡ್​ ಸಾರಥಿ ಸುಮ್ಮನಿರ್ತಾರಾ?
ಕೈಗೆ ಬ್ಯಾಂಡೇಜ್​ ಹಾಕ್ಕೊಂಡು ಸುಮ್ಮನಿರೋಕೆ ಅವರಿಂದಾ ಸಾಧ್ಯನಾ? ಅನ್ನೋದೇ ಸದ್ಯದ ಪ್ರಶ್ನೆ.

ಕನ್ನಡ ಚಿತ್ರ ರಂಗದ ಬೇಡಿಕೆಯ ನಟ ಚಾಲೆಂಜಿಂಗ್​ ಸ್ಟಾರ್​ ದರ್ಶನ್​. ಇವರಿಗೆ ಸಿನಿಮಾಗಳ ಮೇಲೆ ಎಷ್ಟು ಪ್ರೀತಿ ಇದೆಯೋ ಅಷ್ಟೇ ಪ್ರೀತಿ ಪ್ರಾಣಿಗಳು ಮತ್ತು ಕಾರ್​ಗಳ ಮೇಲೆಯೂ ಇದೆ. ಅದನ್ನ ನಾವೂ ಹೇಳಬೇಕಾಗಿಲ್ಲ. ಯಾಕಂದ್ರೆ ಮೊನ್ನೆ ತಾನೇ ಮೈಸೂರಿನ ಮೃಗಾಲಯಕ್ಕೆ ತೆರಳಿದ್ದ ಅವರು ಅಲ್ಲಿನ ಪ್ರಾಣಿಗಳನ್ನ ದತ್ತು ಸ್ವೀಕಾರ ಮಾಡಿದ್ರು. ಇನ್ನು ದರ್ಶನ್​ ಅವರ ಕಾರ್​ ಕ್ರೇಜ್ ಬಗ್ಗೆಯಂತೂ ನಾವು ಹೇಳಬೇಕಾಗಿಯೇ ಇಲ್ಲ. ಅವರ ಬಳಿ ಇರುವ ದುಬಾರಿ ಕಾರುಗಳೇ ಅದನ್ನ ಹೇಳುತ್ತವೆ.

ಈ ಮೆಜಸ್ಟಿಕ್​ ದಾಸನ ಕಾರ್​ ಕ್ರೇಜ್​ ಎಷ್ಟರ ಮಟ್ಟಿಗೆ ಇದೆ ಅಂದ್ರೆ, ಎಲ್ಲಾ ವರ್ಲ್ಡ್ ಕ್ಲಾಸ್ ಕಾರು​ಗಳೂ ಇವರ ಬಳಿ ಇವೆ. ಮೊನ್ನೆಯಷ್ಟೇ ತಮ್ಮ ಕಾರುಗಳ ಲಿಸ್ಟ್​ಗೆ ಸ್ಪೋರ್ಟ್ಸ್​ ಕಾರ್​ವೊಂದನ್ನ ಸೇರಿಸಿದ್ರು.  ದರ್ಶನ್​ ಬಳಿ ಇರೋ ಕಾರ್​ಗಳಲ್ಲಿ ಸಖತ್​ ಸೌಂಡ್​ ಮಾಡೋದು ಲ್ಯಾಂಬೋರ್ಗಿನಿ. ಆದರೆ ದರ್ಶನ್​ ಬಳಿ ಬಿಳಿಯಾನೆಯಷ್ಟೆ, ನೀಲಿ ಬಣ್ಣದ ಜಾಗ್ವಾರ್ ಕೂಡ ಇದೆ. ಸದ್ಯಕ್ಕೆ ಇವರ ಬಳಿ ಸುಮಾರು ₹5 ಕೋಟಿ ಬೆಲೆ ಬಾಳುವ ಲ್ಯಾಂಬೋರ್ಗಿನಿ, ಸುಮಾರು 40 ಲಕ್ಷ ರೂಪಾಯಿ ಬೆಲೆ ಬಾಳುವ ಮಿನಿ ಕೂಪರ್, 30 ಲಕ್ಷದ ಫಾರ್ಚೂನರ್, ಸುಮಾರು ₹80 ಲಕ್ಷದ ಫೋರ್ಡ್ ಮಸ್ಟಂಗ್, ₹50 ಲಕ್ಷದ ಮರ್ಸಿಡೀಜ್ ಬೆಂಜ್, ₹80 ಲಕ್ಷ ಬೆಲೆ ಬಾಳುವ ಹಮ್ಮರ್,​ ಸುಮಾರು 1 ಕೋಟಿ ರೂಪಾಯಿ ಬೆಲೆಯ ರೇಂಜ್ ರೋವರ್, ₹90 ಲಕ್ಷದ ಆಡಿ ಕ್ಯೂ 7, ಸುಮಾರು ₹90 ಲಕ್ಷದ Porsche, ₹60 ಲಕ್ಷದ ಜಾಗ್ವಾರ್, ಸೇರಿದಂತೆ ಹಲವು ದುಬಾರಿ ಕಾರುಗಳಿವೆ. ಇಷ್ಟೆಲ್ಲಾ ಕಾರುಗಳಿದ್ದು, ದಾಸನ ಕಾರ್ ಕ್ರೇಜ್ ಹೇಗಿದೆ ಎಂಬುದು ಇದರಿಂದಲೇ ಗೊತ್ತಾಗುತ್ತಿದೆ. ಮೈಸೂರಿನ ರಸ್ತೆಯಲ್ಲಿ ಲ್ಯಾಂಬೋರ್ಗಿನಿ ಕಾರೋಂದು  ಗುಲ್ಲೆಬ್ಬೆಸ್ಕೊಂಡು ಓಡಾಡ್ತಿದ್ರೆ ಸಾಕು, ದರ್ಶನ್​ ಸಾಂಸ್ಕೃತಿಕ ನಗರಿಯಲ್ಲೇ ಇದ್ದಾರೆ ಅಂತಾ ಅರ್ಥ… ಅಷ್ಟರಮಟ್ಟಿಗೆ ದರ್ಶನ್​ ಹಾಗೂ ಅವರ ಲ್ಯಾಂಬೋರ್ಗಿನಿ ಕಾರ್​ ಫೇಮಸ್​. ಇನ್ನು ಇದೇ ಅಕ್ಟೋಬರ್​ನಲ್ಲಿ ಮೈಸೂರಿನಲ್ಲಿ ನಡೆಯಲಿದ್ದ ಅಂತರಾಷ್ಟ್ರೀಯ ಮಟ್ಟದ ಕಾರ್​ ರೇಸಿಂಗ್​ನಲ್ಲಿ ಪಾಲ್ಗೊಳ್ಳುವ ದೃಷ್ಟಿಯಿಂದ ವೋಕ್ಸ್​ ವ್ಯಾಗನ್​ ಸ್ಪೋರ್ಟ್ಸ್​ ಕಾರ್​ನಲ್ಲಿ ತಾಲೀಮು ನಡೆಸ್ತಿದ್ರು. ಆದ್ರೆ ಈಗ ಅವರ ಬಲ ಮುಂಗೈ ಮುರಿದಿದ್ದು, ಸ್ಪರ್ಧೆಯಲ್ಲಿ ಪಾಲ್ಗೊಳ್ಳುವ ಸಾಧ್ಯತೆ ತುಂಬಾನೇ ಕಡಿಮೆ ಇದೆ.

ಸದ್ಯ ಈ ಸ್ಯಾಂಡಲ್​ವುಡ್​ ಬಾಕ್ಸ್​ ಆಫಿಸ್​ನ ಬಾದ್​ಷಾ ಕಾರ್ ಌಕ್ಸಿಡೆಂಟ್​ನಲ್ಲಿ ಆಸ್ಪತ್ರೆ ಸೇರಿದ್ದಾರೆ. ಅವರ ಬಲ ಮುಂಗೈಗೆ 25 ಹೊಲಿಗೆ ಕೂಡಾ ಬಿದ್ದಿದೆ. ಸದ್ಯಕ್ಕಂತೂ ಅವರು ಸ್ಟೇರಿಂಗ್​ ಹಿಡಿಯೋಕೆ ಸಾಧ್ಯಾನೇ ಇಲ್ಲ. ಹಾಗಂಥಾ ಈ ಸ್ಯಾಂಡಲ್​ವುಡ್​ ಸಾರಥಿ ಸುಮ್ಮನಿರ್ತಾರಾ?
ಕೈಗೆ ಬ್ಯಾಂಡೇಜ್​ ಹಾಕ್ಕೊಂಡು ಸುಮ್ಮನಿರೋಕೆ ಅವರಿಂದಾ ಸಾಧ್ಯನಾ? ಅನ್ನೋದೇ ಸದ್ಯದ ಪ್ರಶ್ನೆ.

NO COMMENTS

LEAVE A REPLY