ನಾಡಹಬ್ಬದ ಚಾಲನೆ ಯಲ್ಲಿ ಕನ್ನಡದ ಪುಟ್ಟ ರಾಜ ಮಾಣಿ ..ಆದ್ಯವೀರ

ನಾಡಹಬ್ಬದ ಚಾಲನೆ ಯಲ್ಲಿ ಕನ್ನಡದ ಪುಟ್ಟ ರಾಜ ಮಾಣಿ ..ಆದ್ಯವೀರ

154
0
SHARE

Post by: Sandeep Shanivarasanthe

ಮೈಸೂರು: ಐತಿಹಾಸಿಕ ಹಬ್ಬ ದಸರಾಗೆ ನಾಡಿನ ಜನತೆ ಸಿದ್ಧರಾಗುತ್ತಿದ್ದಾರೆ. ಇತ್ತ ಗಜಪಡೆಗಳು ಕೂಡ ಸಜ್ಜಾಗುತ್ತಿದ್ದು, ಯದುವಂಶದ ಆದ್ಯವೀರ್ ನರಸಿಂಹರಾಜ ಒಡೆಯರ್ ಕೂಡ ತನ್ನ ಮೊದಲ ದಸರಾ ಹಬ್ಬಕ್ಕೆ ತಯಾರಾಗುತ್ತಿದ್ದಾರೆ.

ಆದ್ಯವೀರ ಡಿಸೆಂಬರ್ 6 2017ರಲ್ಲಿ ಜನಿಸಿದ್ದರು. ಆದ್ದರಿಂದ ಆದ್ಯವೀರ್ ಗೆ ಇದೇ ಮೊದಲ ದಸರವಾಗಿದೆ. ಈ ಬಾರಿಯ ದಸರಾ ವಿಶೇಷವಾಗಿದೆ. ಆದ್ದರಿಂದ ಮೈಸೂರಿನ ಸಂಸ್ಥಾನದ ಯದುವಂಶಕ್ಕೆ ಸುಮಾರು 6 ದಶಕಗಳಿಂದ ಸಂತಾನ ಇರಲಿಲ್ಲ. ಆದರೆ ಕಳೆದ ವರ್ಷ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಮತ್ತು ತ್ರಿಷಿಕಾ ದಂಪತಿಗೆ ಆದ್ಯವೀರ್ ಜನಿಸುವ ಮೂಲಕ ರಾಜಮನೆತನಕ್ಕೆ ಸಂತಾನ ಪ್ರಾಪ್ತಿಯಾಗಿತ್ತು. ಈ ಸಂತಸವನ್ನು ಇಡೀ ನಾಡಿನ ಜನತೆಯೂ ಸಂಭ್ರಮಿಸಿತ್ತು.

ಆದ್ಯವೀರ್ ಜನಿಸಿ ಸುಮಾರು ಒಂಭತ್ತು ತಿಂಗಳಾಗಿದೆ. ಇದುವರೆಗೂ ಅವರ ಫೋಟೋ ಎಲ್ಲಿಯೂ ಲಭ್ಯವಾಗಿರಲಿಲ್ಲ. ಆದರೆ ಈಗ ಅವರು ಹೇಗಿದ್ದಾರೆ ಎಂಬುದನ್ನು ಈ ಫೋಟೋ ಮೂಲಕ ತಿಳಿಯಬಹುದು. ಆದ್ಯವೀರ್ ಅವರು ತಮ್ಮ ತಾಯಿ ತ್ರಿಷಿಕಾ ಅವರ ಆರೈಕೆಯಲ್ಲಿದ್ದಾರೆ.

ಈಗಾಗಲೇ ದಸರಾಗೆ ಅರ್ಜುನ ಮತ್ತು ತಂಡ ಅರಮನೆಗೆ ಬಂದಿದ್ದು, ಅವುಗಳಿಗೆ ಪೌಷ್ಠಿಕ ಆಹಾರ ನೀಡುವ ಮೂಲಕ ಆರೈಕೆ ಮಾಡಲಾಗುತ್ತಿದೆ. ಪ್ರತಿದಿನ ಆನೆಗಳಿಗೆ ರಸ್ತೆಗಳಲ್ಲಿ ತಾಲೀಮು ನಡೆಯುತ್ತಿದೆ. ತೂಕವನ್ನು ಕೂಡ ಅಳತೆ ಮಾಡಲಾಗಿದೆ. ಇತ್ತೀಚೆಗಷ್ಟೆ ಅರ್ಜುನ ಮತ್ತು ತಂಡದ ಆನೆಗಳು ಅರಮನೆ ಮುಂದೆ ಕ್ಯಾಮೆರಾಗೆ ಪೋಸ್ ಕೊಟ್ಟಿದ್ದವು. ನಾಡಿನ ಹಬ್ಬವಾದ ದಸರಾಗೆ ಸಕಲ ಸಿದ್ಧತೆ ಕೂಡ ನಡೆಯುತ್ತಿದೆ.

NO COMMENTS

LEAVE A REPLY