ಕಿಕ್ ಬಾಕ್ಸಿಂಗ್ ಚಾಂಪಿಯನ್ ನಲ್ಲಿ ಕೊಡಗಿನ ಪೋರ ಎರಡನೆ ಕಿಂಗ್….

ಕಿಕ್ ಬಾಕ್ಸಿಂಗ್ ಚಾಂಪಿಯನ್ ನಲ್ಲಿ ಕೊಡಗಿನ ಪೋರ ಎರಡನೆ ಕಿಂಗ್….

113
0
SHARE

Post by : Sandeep Shanivarasanthe

ಬೆಂಗಳೂರು ಸೆಪ್ಟೆಂಬರ್ 20

ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ರಾಜ್ಯ ಕಿಕ್ ಬಾಕ್ಸಿಂಗ್ ಚಾಂಪಿಯನ್ ಷಿಪ್ ನಲ್ಲಿ ಕೊಡಗಿನ ರಾಹುಲ್ ರಾವ್ ೨ ಚಿನ್ನದ ಪದಕ ಗೆದ್ದು ಜಿಲ್ಲೆ ಗೆ ಕೀರ್ತಿ ತಂದಿದ್ದಾರೆ.

ರಾಜ್ಯ ಕಿಕ್ ಬಾಕ್ಸಿಂಗ್ ಸಂಸ್ಥೆ ವತಿಯಿಂದ ಆಯೋಜಸಲಾಗಿದ್ದ ಪಂದ್ಯಾವಳಿ ಯ ಸೀನಿಯರ್ ವಿಭಾಗದ ಲೈಟ್ ಕಾಂಟಾಕ್ಟ್ ಹಾಗೂ ಮ್ಯೂಸಿಕಲ್ ಫಾರ್ಮ್ ಸ್ಪರ್ಧೆ ಗಳಲ್ಲಿ ಭಾಗವಹಿಸಿದ ರಾಹುಲ್ ೨ ರಲ್ಲೂ ಚಿನ್ನದ ಪದಕ ಗಳಿಸಿದರು. ಇದರೊಂದಿಗೆ ರಾಷ್ಟ್ರೀಯ ಕಿಕ್ ಬಾಕ್ಸಿಂಗ್ ಚಾಂಪಿಯನ್ ಷಿಪ್ ಗೂ ಆಯ್ಕೆ ಯಾದರು.

ಮೈಸೂರಿನ ವಿರ್ವಿದ (Virvida) ಅಕಾಡೆಮಿ ಯ ಶಾಮ್ ಅವರಿಂದ ತರಬೇತಿ ಪಡೆಯುತ್ತಿರುವ ರಾಹುಲ್ ರಾವ್ ಮೂರ್ನಾಡು ನಿವಾಸಿಗಳಾದ ಶ್ರೀಪತಿ ರಾವ್ ಹಾಗೂ ಕುಸುಮಾವತಿ ಅವರ ಪುತ್ರ.

ನೃತ್ಯದಲ್ಲೂ ಹೆಸರು ಮಾಡಿರುವ ರಾಹುಲ್ ಇತ್ತೀಚೆಗೆ ನಡೆದ ರಾಷ್ಟ್ರೀಯ ಹಿಪ್ ಹಾಪ್ ಚಾಂಪಿಯನ್ ಷಿಪ್ ನಲ್ಲಿ ಮೆಗಾ ಕ್ರಿವ್ ವಿಭಾಗದಲ್ಲಿ ಚಿನ್ನದ ಪದಕ ಗಳಿಸಿದರು. ಜೊತೆಗೆ ಮುಂದಿನ ತಿಂಗಳು ನೆದರ್ಲ್ಯಾಂಡ್ಸ್ ನ ಲಿಡಾನ್ ನಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ಹಿಪ್ ಹಾಪ್ ಸ್ಪರ್ಧೆ ಯಲ್ಲಿ ಭಾರತ ತಂಡ ವನ್ನು ಪ್ರತಿನಿಧಿಸಲು ಆಯ್ಕೆಯಾಗಿದ್ದಾರೆ ಎಂದು . ವಿನೋದ್ ಕರ್ಕೇರ ಹಾಗೂ ಪೃಥ್ವಿ ನಾಯಕ್ ಅವರು ತಿಳಿಸಿದ್ದಾರೆ

NO COMMENTS

LEAVE A REPLY