ಅಂಬಾರಿ ವಿಚಾರದ ಬಗ್ಗೆ ನನ್ನ ತಾಯಿಯನ್ನ ಕೇಳಿ: ಯದುವೀರ್ ಒಡೆಯರ್

ಅಂಬಾರಿ ವಿಚಾರದ ಬಗ್ಗೆ ನನ್ನ ತಾಯಿಯನ್ನ ಕೇಳಿ: ಯದುವೀರ್ ಒಡೆಯರ್

95
0
SHARE

Post by Sandeep Shanivarasanthe

ಮೈಸೂರು, ಸೆಪ್ಟೆಂಬರ್ 19 : ಮೈಸೂರು ದಸರಾ ಹೇಗೆ ನಡೆಯಬೇಕೋ ಹಾಗೆಯೇ ನಡೆಯುತ್ತದೆ. ಈ ವರ್ಷವೂ ಪದ್ಧತಿಯಂತೆಯೇ ನಡೆಯಲಿದೆ. ಅರಮನೆಯಲ್ಲಿ ನಡೆಯುವ ಕಾರ್ಯಕ್ರಮಗಳ ಕುರಿತು ನಾನು ಚರ್ಚೆ ನಡೆಸಿಲ್ಲ ಎಂದು ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ತಿಳಿಸಿದರು

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಂಬಾರಿ ವಿಚಾರದ ಬಗ್ಗೆ ನನಗೆ ಮಾಹಿತಿ ಇಲ್ಲ. ಅಮ್ಮನನ್ನೇ ಕೇಳಬೇಕೆಂದು ಉತ್ತರಿಸಿದರು. ಸದ್ಯಕ್ಕೆ ರಾಜಕೀಯಕ್ಕೆ ಬರಲು ಆಸಕ್ತಿ ಇಲ್ಲ. ಯಾವ ಪಕ್ಷದವರೂ ನಮ್ಮನ್ನು ಸಂಪರ್ಕಿಸಿಲ್ಲ. ಒತ್ತಡವೂ ಇಲ್ಲ. ಧಾರ್ಮಿಕ ಕಾರ್ಯಗಳಲ್ಲಿ ತೊಡಗಿದ್ದೇನೆ.

ತ್ರಿಷಿಕಾ ಅವರಂತೆಯೇ ನನಗೂ ಆದಿವಾಸಿಗಳ ಜೀವನ ಪದ್ಧತಿಯ ಬಗ್ಗೆ ತಿಳಿಯುವ ಆಸಕ್ತಿ ಇದೆ. ಅವರು ಪಿಎಚ್ ಡಿ ಮಾಡುವ ಆಸೆ ಹೊಂದಿದ್ದಾರೆ. ಇನ್ನು ನೋಂದಾಯಿಸಿಲ್ಲ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು

ಇಸ್ರೇಲ್ ಪರವಾಗಿ ಹೋರಾಡಿ ವಿಜಯಿಯಾದ ಹೈಫಾ ಯುದ್ಧದಲ್ಲಿ ಮೈಸೂರು ಸೈನಿಕರು ಪಾಲ್ಗೊಂಡಿದ್ದರು. ಅದಕ್ಕೀಗ ಹೈಫಾ ಯುದ್ಧದ ಶತಮಾನೋತ್ಸವ ಸೆ.23ರಂದು ಸಂಜೆ 6 ಗಂಟೆಗೆ ನಗರದ ರಾಜೇಂದ್ರ ಕಲಾಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ.

ಅಂದು ಮೈಸೂರು ಸಂಸ್ಥಾನದಲ್ಲಿ 4 ಸಾವಿರ ಸೈನಿಕರಿದ್ದರು. ಅವರಲ್ಲಿ 2.5 ಸಾವಿರದಿಂದ 3 ಸಾವಿರ ಸೈನಿಕರು ಹೈಫಾ ಯುದ್ಧದಲ್ಲಿ ಭಾಗವಹಿಸಿರಬಹುದು. ಇವರಲ್ಲಿ ಅರಸು ಸಮುದಾಯದವರು ಭಾಗಿಯಾಗಿದ್ದರು. ಅವರಲ್ಲಿ ಐದು ಕುಟುಂಬದವರನ್ನು ಗುರುತಿಸಿ ಸನ್ಮಾನಿಸುತ್ತಿದ್ದೇವೆ ಎಂದು ಯದುವೀರ್ ಹೇಳಿದರು.

NO COMMENTS

LEAVE A REPLY