ರಾಜ್ಯದಲ್ಲಿಯೇ ಮೊದಲ ಬಾರಿಗೆ ಅರಮನೆನಗರಿಯಲ್ಲಿ ಸ್ಮಾರ್ಟ್ ವಿಎಂಎಸ್ ಸೌಲಭ್ಯ…

ರಾಜ್ಯದಲ್ಲಿಯೇ ಮೊದಲ ಬಾರಿಗೆ ಅರಮನೆನಗರಿಯಲ್ಲಿ ಸ್ಮಾರ್ಟ್ ವಿಎಂಎಸ್ ಸೌಲಭ್ಯ…

89
0
SHARE

By Sandeep Shanivarasanthe

ಮೈಸೂರು, ಸೆಪ್ಟೆಂಬರ್ 19 : ನಗರದ ಸಂಚಾರ ನಿಯಂತ್ರಣ ವ್ಯವಸ್ಥೆ ಅತ್ಯಾಧುನಿಕಗೊಳ್ಳುತ್ತಿದೆ! ವಾಹನಗಳ ಸುಗಮ ಸಂಚಾರಕ್ಕಾಗಿ ಸಾರ್ವಜನಿಕರಿಗೆ ಸಂಚಾರ ಮಾರ್ಗಗಳ ಬಗ್ಗೆ ಸಂದರ್ಭಕ್ಕೆ ಅನುಗುಣವಾಗಿ ಮಾಹಿತಿ ನೀಡುವ ಸಂಬಂಧ ಸ್ಮಾರ್ಟ್ ವೇರಿಯಬಲ್ ಮೆಸೇಜಿಂಗ್ ಸೈನ್ಸ್ (ಸ್ಮಾರ್ಟ್ ವಿಎಂಎಸ್) ಅಳವಡಿಸಲಾಗಿದೆ
ರಾಜ್ಯದಲ್ಲಿ ಪ್ರಥಮ ಬಾರಿಗೆ ಮೈಸೂರು ನಗರದಲ್ಲಿಯೇ ಇಂಥ ಅತ್ಯಾಧುನಿಕವಾದ ಸ್ಮಾರ್ಟ್ ವಿಎಂಎಸ್’ಗಳನ್ನು ಅಳವಡಿಸಲಾಗಿದೆ. ಇದು ಪೂರ್ಣ ಸ್ವಯಂಚಾಲಿತವಾಗಿದ್ದು, ಸಂಚಾರಕ್ಕೆ ಸಂಬಂಧಪಟ್ಟ ಮಾಹಿತಿಗಳನ್ನು ಸ್ಥಳ ಆಧಾರಿತವಾಗಿ ವಾಹನ ಚಾಲಕರಿಗೆ, ಸಾರ್ವಜನಿಕರಿಗೆ ನೀಡಲಿದೆ.

ಇದು ಯಾವುದೇ ಕಂಟೋಲ್ ರೂಂ ಮ್ಯಾನುಯಲ್ ನಿಯಂತ್ರಣಕ್ಕೆ ಒಳಪಟ್ಟಿಲ್ಲ ಎಂಬುದು ಗಮನಾರ್ಹ. ಸ್ವಯಂಚಾಲಿತವಾಗಿ ಸಂಚಾರ ಪ್ರಗತಿಗಳು, ಸಮಯ, ಪ್ರಮುಖ ಜಂಕ್ಷನ್ ಗಳಲ್ಲಿ ವಾಹನಗಳ ದಟ್ಟಣೆ, ಶೀಘ್ರವಾಗಿ, ಸುರಕ್ಷಿತವಾಗಿ ತಮ್ಮ ಸ್ಥಳವನ್ನು ತಲುಪುವ ಸಂಬಂಧ ಅನುಸರಿಸಬೇಕಾದ ಬದಲಿ ಮಾರ್ಗಗಳ ಬಗ್ಗೆ ಹಾಗೂ ನಗರದ ಆಯಾ ಕ್ಷಣದ ತಾಪಮಾನದ ವರದಿಯ ಮಾಹಿತಿ ನೀಡುತ್ತದೆ.

ತುರ್ತು ಪರಿಸ್ಥಿತಿಗಳ ಬಗ್ಗೆ ಪೊಲೀಸ್, ಅಗ್ನಿಶಾಮಕ ಪಡೆ, ಆಂಬುಲೆನ್ಸ್, ಹೈವೇ ಪೆಟ್ರೋಲ್ ನವರು ನೀಡುವ ಮಾಹಿತಿಗಳನ್ನು ಡಿಜಿಟಲ್ ಫಲಕದಲ್ಲಿ ಪ್ರದರ್ಶಿಸುವ ಮೂಲಕ ಸಾರ್ವಜನಿಕರನ್ನು ಜಾಗೃತಿಗೊಳಿಸುವ ಕಾರ್ಯವನ್ನೂ ಸಹ ಮಾಡುತ್ತದೆ.

ಈ ಅತ್ಯಾಧುನಿಕ ವ್ಯವಸ್ಥೆಗೆ ಸಂಬಂಧಿಸಿದಂತೆ ಅಧಿಕೃತ ವ್ಯಕ್ತಿಗಳಿಗೆ ಆಂಡ್ರಾಯ್ಡ್ ಅಪ್ಲಿಕೇಷನ್ ನೀಡಲಾಗಿದೆ. ಈ ಅಪ್ಲಿಕೇಷನ್ ಮೂಲಕ ನಗರದಲ್ಲಿ ನಡೆಯುವ ಪಮುಖ ಘಟನೆಗಳು ಮತ್ತು ಅಗತ್ಯ ಮಾಹಿತಿಗಳನ್ನು ಸ್ಥಳ ಆಧಾರಿತವಾಗಿ ಎಲ್‍ಇಡಿ ಪರದೆಯ ಮೇಲೆ ಪ್ರದರ್ಶಿಸುತ್ತದೆ.

ಇದರಿಂದ ಸಂಚಾರ ನಿಯಮ ಉಲ್ಲಂಘನೆಗಳನ್ನು ಕಡಿಮೆ ಮಾಡಿ ರಸ್ತೆ ಅಪಘಾತಗಳನ್ನು ತಗ್ಗಿಸಲು ನೆರವಾಗುತ್ತದೆ. ಸುರಕ್ಷತೆಯ ಬಗ್ಗೆಯೂ ಸಹ ಸಂದೇಶಗಳನ್ನು ಡಿಜಿಟಲ್ ಫಲಕದಲ್ಲಿ ಪ್ರಕಟಿಸಬಹುದಾಗಿದೆ.

ಈ ಸಾಧನವು ಉತ್ತಮ ಗುಣಮಟ್ಟದ ಹೆಚ್ಚು ಬಾಳಿಕೆ ಬರುವ 4.8 ಮೀ. + 1.92 ಮೀ. ವರ್ಣಮಯ ಪ್ರದರ್ಶಕವನ್ನು ಹೊಂದಿದೆ. 10 ರಿಂದ 100 ಮೀಟರ್ ದೂರದಿಂದಲೇ ವೀಕ್ಷಣೆ ಮಾಡಬಹು ದಾಗಿದೆ. ಉತ್ತಮ ವೀಕ್ಷಣೆಗಾಗಿ ಪದರ್ಶಕದ (ಫಲಕ) ಹೊಳಪು ವಾತಾವರಣದ ಬೆಳಕಿಗೆ ತಕ್ಕಂತೆ ಸ್ವಯಂಚಾಲಿತವಾಗಿ ಬದಲಾವಣೆಯಾಗುತ್ತದೆ.

NO COMMENTS

LEAVE A REPLY