ಮೈಸೂರು ದಸರಾ ವಿಶೇಷ ರೋಡಿಗಿಳಿಯಲಿದೆ 12 HOHO ಬಸ್ ಗಳು

ಮೈಸೂರು ದಸರಾ ವಿಶೇಷ ರೋಡಿಗಿಳಿಯಲಿದೆ 12 HOHO ಬಸ್ ಗಳು

233
0
SHARE

By Sandeep Shanivarasanthe
ಮೈಸೂರು, ಸೆಪ್ಟೆಂಬರ್.19 : ದಸರಾ ಮಹೋತ್ಸವಕ್ಕೆ ವಿದೇಶಗಳಿಂದ ಆಗಮಿಸುವ ಪ್ರವಾಸಿಗರು ಹಾಗೂ ಸ್ಥಳೀಯರಿಗೆ ನಗರದ ವ್ಯಾಪ್ತಿಯಲ್ಲಿರುವ ಪ್ರಮುಖ ಪ್ರೇಕ್ಷಣೀಯ ಸ್ಥಳಗಳ ದರ್ಶನ ಮಾಡಿಸುವ ಹಾಪ್-ಆನ್ ಹಾಗೂ ಹಾಪ್-ಆಫ್ (ಎಚ್‍ಒಎಚ್ಒ) ಬಸ್ ಇದೇ ಮೊದಲ ಬಾರಿಗೆ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ ಹಾಗೂ ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆ ಸಹಯೋಗದಲ್ಲಿ ನಡೆಯಲಿದೆ.
ಈವರೆಗೆ ದಸರಾ ಸಂದರ್ಭದಲ್ಲಿ ಕೆಎಸ್ ಆರ್‍ಟಿಸಿಯ ಮೈಸೂರು ನಗರ ಸಾರಿಗೆ ವಿಭಾಗವೇ ಇದನ್ನು ನಿರ್ವಹಿಸುತ್ತಿತ್ತು. ಇದಕ್ಕೆ ಉತ್ತಮ ಪತಿಕ್ರಿಯೆಯೂ ಇತ್ತು. ಆದರೆ ಇದನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಹಾಗೂ ವ್ಯವಸ್ಥಿತವಾಗಿ ಮಾಡುವ ಉದ್ದೇಶದಿಂದ ಸಾರಿಗೆ ಇಲಾಖೆ ಹಾಗೂ ಪವಾಸೋದ್ಯಮ ಇಲಾಖೆ ಜಂಟಿಯಾಗಿ ನಿರ್ವಹಣೆ ಮಾಡಲಿವೆ.

ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿರುವಂತೆ 2013ರಲ್ಲಿ ಮೊದಲ ಬಾರಿಗೆ ದಸರಾ ಸಂದರ್ಭದಲ್ಲಿ ಮೈಸೂರು ನಗರದಲ್ಲಿ ಹಾಪ್ ಆನ್-ಹಾಪ್ ಆಫ್’ ವ್ಯವಸ್ಥೆ ಜಾರಿಗೊಳಿಸಿದ್ದು, ಅದು ಯಶಸ್ವಿಯೂ ಆಗಿತ್ತು. ಅಂದಿನಿಂದ ನಿರಂತರವಾಗಿ ದಸರಾ ಸಂದರ್ಭದಲ್ಲಿ ಇದನ್ನು ನಡೆಸಿಕೊಂಡು ಬರಲಾಗುತ್ತಿದೆ.
ಪ್ರವಾಸೋದ್ಯಮ ಕೇಂದ್ರೀಕರಿಸಿ ಆಯೋಜಿಸುವ ಈ ನಗರ ದರ್ಶನದ ಸಂಚಾರ ಪ್ರವಾಸಿಗರಿಗೆ ಹೆಚ್ಚಿನ ಸಮಯಾವಕಾಶ ನೀಡಲಿದೆ. 1 ದಿನ ಇದನ್ನು ಬಳಸಿಕೊಳ್ಳಬಹುದಾಗಿದೆ. ನಗರ ಸಾರಿಗೆ ನಿಲ್ದಾಣದಿಂದ ಹೊರಡುವ ಈ ಬಸ್ ಗೆ ಪ್ರವಾಸಿಗರು ನಿಗದಿತ ಹಣ ನೀಡಿ ಪಾಸ್ ಖರೀದಿಸಿದರೆ ಎಲ್ಲಿ ಬೇಕಾದರೂ ಇಳಿದು ಎಲ್ಲಿ ಬೇಕಾದರೂ ನಿರ್ಧಿಷ್ಟ ಬಸ್ ಗೆ ಹತ್ತುವ ವ್ಯವಸ್ಥೆ ಇದೆ.
12 ಬಸ್ ಗಳು ಸೇವೆಗೆ ಮೀಸಲಿದ್ದು, ಪ್ರತಿ 15 ನಿಮಿಷಕ್ಕೊಮ್ಮೆ ಬಸ್ ಸೌಲಭ್ಯ ದೊರೆಯಲಿದೆ. ಪ್ರವಾಸೋದ್ಯಮ ಅಭಿವೃದ್ಧಿ ನಿಗಮ ಇದನ್ನು ನಿರ್ವಹಿಸಿದರೂ ಇದಕ್ಕೆ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಬಸ್ ಹಾಗೂ ಸಿಬ್ಬಂದಿಯನ್ನು ಬಳಸಿಕೊಳ್ಳಲಾಗುವುದು

NO COMMENTS

LEAVE A REPLY