ಸೆ.21ಕ್ಕೆ ಭಾರತದಲ್ಲಿ ರಿಲೀಸ್ ಆಗಲಿದೆ ‘ದಿ ಈಕ್ವಲೈಜರ್ 2’

ಸೆ.21ಕ್ಕೆ ಭಾರತದಲ್ಲಿ ರಿಲೀಸ್ ಆಗಲಿದೆ ‘ದಿ ಈಕ್ವಲೈಜರ್ 2’

48
0
SHARE

 

ಬೆಂಗಳೂರು,ಸೆ,14,2018:  ಎರಡು ಬಾರಿ ಆಸ್ಕರ್ ಪ್ರಶಸ್ತಿ ಪಡೆದ ಡೆನ್ಝೆಲ್ ವಾಷಿಂಗ್ಟನ್ ನಟಿಸಿರುವ ಹಾಲಿವುಡ್ ನ ಥ್ರಿಲ್ಲರ್ ಚಿತ್ರ ‘ದಿ ಈಕ್ವಲೈಜರ್ 2’  ಇದೇ ಸೆಪ್ಟೆಂಬರ್ 21ರಂದು ಭಾರತೀಯ ಚಿತ್ರಮಂದಿರಗಳಲ್ಲಿ ರಿಲೀಸ್ ಆಗಲಿದೆ.
ಆಂಟೊಯಿನ್ ಫುಕ್ವಾ ನಿರ್ದೇಶಿಸಿದ ‘ಈಕ್ವಲೈಜರ್ 2’ 2014ರಲ್ಲಿ ನಿರ್ಮಾಣವಾದ ‘ದಿ ಇಕ್ವಲೈಜರ್’ ಚಿತ್ರದ ಉತ್ತರಭಾಗವಾಗಿದೆ. ಅಮೆರಿಕಾದ ನಿವೃತ್ತ ನೌಕಾ ಅಧಿಕಾರಿ ಮತ್ತು ಮಾಜಿ-ಡಿಐಎ ಏಜೆಂಟ್ ರಾಬರ್ಟ್ ಮ್ಯಾಕ್ ಕಾಲ್ ಅವರು ತಮ್ಮ ಸ್ನೇಹಿತನನ್ನು ಕೊಲೆ ಮಾಡಿದವನ ವಿರುದ್ಧ ಸೇಡು ತೀರಿಸಿಕೊಳ್ಳಲು ಮುಂದಾಗುತ್ತಾರೆ. ಜುಲೈ 17ರಂದು ಅಮೆರಿಕಾ ಸಂಯುಕ್ತ ಸಂಸ್ಥಾನದಲ್ಲಿ ಬಿಡುಗಡೆಯಾದ ಈ ಚಿತ್ರ ವಿಶ್ವದಾದ್ಯಂತ 173 ದಶಲಕ್ಷ ಡಾಲರ್ ನಷ್ಟು ಆದಾಯ ಗಳಿಸಿದೆ.

ಈ ಚಿತ್ರ ಭಾರತದಲ್ಲಿ ಸೆ.21 ರಂದು ಬಿಡುಗಡೆಯಾಗುವ ಬಗ್ಗೆ ಚಲನಚಿತ್ರ ವಿಮರ್ಶಕ ಮತ್ತು ವ್ಯಾಪಾರ ವಿಶ್ಲೇಷಕ ತರಣ್ ಆದರ್ಶ್ ಅವರು ಈ ವಿಚಾರವನ್ನ ಟ್ವೀಟರ್ ನಲ್ಲಿ ತಿಳಿಸಿದ್ದಾರೆ. ‘ಡೆನ್ಝೆಲ್ ವಾಷಿಂಗ್ಟನ್… # ದಿ ಎಕ್ವಲೈಜರ್ 2, 21 ಸೆಪ್ಟೆಂಬರ್ 2018ರಂದು ಭಾರತಕ್ಕೆ ಆಗಮಿಸುತ್ತಿದೆ… ಸೋನಿ ಪಿಕ್ಚರ್ಸ್ ಇಂಡಿಯಾ ಈ ಚಿತ್ರವನ್ನು ಬಿಡುಗಡೆ ಮಾಡುತ್ತಿದೆ’ ಎಂದು ಟ್ವೀಟ್ ಮಾಡಿದ್ದಾರೆ.

NO COMMENTS

LEAVE A REPLY