ಕೆಜಿಎಫ್ ಬಿಡುಗಡೆ ದಿನಾಂಕಕ್ಕೆ ಮುಹೂರ್ತ ಫಿಕ್ಸ್….

ಕೆಜಿಎಫ್ ಬಿಡುಗಡೆ ದಿನಾಂಕಕ್ಕೆ ಮುಹೂರ್ತ ಫಿಕ್ಸ್….

39
0
SHARE

ಬೆಂಗಳೂರು,ಸೆ.11,2018: ಸ್ಯಾಂಡಲ್ ವುಡ್ ನಲ್ಲಿ ಬಹಳ ಸದ್ದು ಮಾಡುತ್ತಿರುವ ಬಹುನಿರೀಕ್ಷಿತ ಸಿನಿಮಾ ‘ಕೆಜಿಎಫ್‌’ ವನ್ನು ತೆರೆ ಮೇಲೆ ನೋಡಿ ಕಣ್ತುಂಬಿಕೊಳ್ಳಲು ಕಾತುರದಿಂದ ಕಾಯುತ್ತಿರುವ ನಟ ರಾಕಿಂಗ್ ಸ್ಟಾರ್ ಯಶ್  ಅಭಿಮಾನಿಗಳಿಗೆ ಇದೀಗ ಮತ್ತೊಂದು ಹೊಸ ಸುದ್ದಿ ಚಿತ್ರತಂಡದಿಂದ ಸಿಕ್ಕಿದೆ. ರಾಕಿಂಗ್ ಸ್ಟಾರ್ ಯಶ್​ ಅಭಿನಯದ ಕೆಜಿಎಫ್ ಚಿತ್ರ ಬಿಡುಗಡೆ ದಿನಾಂಕಕ್ಕೆ ಮುಹೂರ್ತ ಫಿಕ್ಸ್ ಆಗಿದೆ.

 ಇದೇ ತಿಂಗಳು 19ರ ಸಂಜೆ 6 ಗಂಟೆಗೆ ‘ಕೆಜಿಎಫ್’ ಬಿಡುಗಡೆ ಆಗಲಿರುವ ದಿನಾಂಕ​ ಪ್ರಕಟವಾಗಲಿದೆ. ಅಂದೇ ಈ ಚಿತ್ರದ ಟ್ರೈಲರ್ ಯಾವಾಗ ಶೀರ್ಷಿಕೆ ಆಗಲಿದೆ ಎಂಬುದು ರಿವೀಲ್ ಆಗಲಿದೆ.

ಇನ್ನು ‘ಕೆಜಿಎಫ್’ ಚಿತ್ರದಲ್ಲಿ ಯಶ್ ವಿಭಿನ್ನ ಗೆಟಪ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಯಶ್ ಜೊತೆಗೆ ಶ್ರೀನಿಧಿ ಶೆಟ್ಟಿ ನಾಯಕಿಯಾಗಿ ನಟಿಸಿದ್ದಾರೆ. ಟಾಲಿವುಡ್ ನಟಿ ತಮನ್ನಾ ಭಾಟಿಯಾ ಐಟಂ ಸಾಂಗ್​ನಲ್ಲಿ ಕಾಣಿಸಿಕೊಂಡಿದ್ದಾರೆ. ‘ಕೆಜಿಎಫ್’ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆಯುವುದರ ಜೊತೆಗೆ ನಿರ್ದೇಶನ ಮಾಡಿದ್ದಾರೆ ಪ್ರಶಾಂತ್ ನೀಲ್. ಮಿಕ್ಕಂತೆ ಅಚ್ಯುತ್ ಕುಮಾರ್, ವಸಿಷ್ಠ ಸಿಂಹ ಮುಂತಾದವರು ತಾರಾಗಣದಲ್ಲಿದ್ದಾರೆ.

NO COMMENTS

LEAVE A REPLY