ಸಿದ್ದರಾಮಯ್ಯಗೆ ಲಗಾಮು ಹಾಕಿ: ಕಾಂಗ್ರೆಸ್ ಹೈಕಮಾಂಡ್’ಗೆ ದೊಡ್ಡಗೌಡರ ಎಚ್ಚರಿಕೆ

ಸಿದ್ದರಾಮಯ್ಯಗೆ ಲಗಾಮು ಹಾಕಿ: ಕಾಂಗ್ರೆಸ್ ಹೈಕಮಾಂಡ್’ಗೆ ದೊಡ್ಡಗೌಡರ ಎಚ್ಚರಿಕೆ

30
0
SHARE

ಬೆಂಗಳೂರು, ಸೆಪ್ಟೆಂಬರ್ 14, 2018 

ಕಾಂಗ್ರೆಸ್ ಹೈಕಮಾಂಡ್ ಗೆ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಖಡಕ್ ವಾರ್ನಿಂಗ್ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಎಐಸಿಸಿ ನಾಯಕ ಗುಲಾಂ ನಭೀ ಅಜಾದ್ ಜೊತೆ ದೇವೇಗೌಡರು ಮಾತುಕತೆ ನಡೆಸಿದ್ದು, ಸಮ್ಮಿಶ್ರ ಸರ್ಕಾರದಲ್ಲಿ ಹೊಸ ಬಿರುಗಾಳಿಯೊಂದು ಎದ್ದಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಈಗಾಗಲೇ ಗುಲಾಂ ನಭೀ ಆಜಾದ್ ಮೂಲಕ ದೇವೇಗೌಡರು ಹೈಕಮಾಂಡ್ ಗೆ ಸಂದೇಶ ರವಾನಿಸಿದ್ದಾರೆ. ಸಮ್ಮಿಶ್ರ ಸರ್ಕಾರದಲ್ಲಿ ನಡೆಯುತ್ತಿರುವ ರಾಜಕೀಯ ಬೆಳವಣಿಗೆಗೆ ಮಾಜಿ ಸಿಎಂ ಸಿದ್ದರಾಮಯ್ಯ ಅವರೇ ಕಾರಣವಾಗಿದ್ದಾರೆ.

ಅವರಿಗೆ ಕಡಿವಾಣ ಹಾಕಬೇಕು. ಸಿದ್ದರಾಮಯ್ಯ ಅವರನ್ನು ಸರಿಪಡಿಸಿ, ಸಿದ್ದರಾಮಯ್ಯ ಸರಿ ಇಲ್ಲದಿದ್ದರೆ ಸಮ್ಮಿಶ್ರ ಸರ್ಕಾರಕ್ಕೆ ಉಳಿಗಾಲವಿಲ್ಲ ಎಂದು ಕೈ ಹೈಕಾಂಡ್ ಗೆ ದೇವೇಗೌಡರು ಸಂದೇಶ ರವಾನಿಸಿದ್ದಾರೆ ಎನ್ನಲಾಗಿದೆ.

NO COMMENTS

LEAVE A REPLY