ಪೌರಕಾರ್ಮಿಕರ ಬೆಂಬಲಕ್ಕೆ ನಿಂತ ಪ್ರೊ. ಮಹೇಶ್ ಚಂದ್ರ ಗುರು ಮತ್ತು ವಿದ್ಯಾರ್ಥಿಗಳು

ಪೌರಕಾರ್ಮಿಕರ ಬೆಂಬಲಕ್ಕೆ ನಿಂತ ಪ್ರೊ. ಮಹೇಶ್ ಚಂದ್ರ ಗುರು ಮತ್ತು ವಿದ್ಯಾರ್ಥಿಗಳು

228
0
SHARE

ಮೈಸೂರು(ಸೆ.06.2018): ಧಿಕ್ಕಾರ ಕೂಗಬೇಕಾಗಿರುವುದು ಸರ್ಕಾರದ ವಿರುದ್ಧವಲ್ಲ, ಮೈಸೂರು ವಿವಿ ಆಡಳಿತ ವರ್ಗದ  ವಿರುದ್ಧ ಎಂದು ಹೇಳುತ್ತಾ ಕುಲಪತಿಗಳು ಹಾಗೂ ಕುಲಸಚಿವರ ವಿರುದ್ಧ ಧಿಕ್ಕಾರ ಘೋಷಣೆಯನ್ನು ಕೂಗುವುದರ ಮೂಲಕ ಪೌರಕಾರ್ಮಿಕರಿಗೆ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥರಾದ  ಪ್ರೊ. ಬಿ.ಪಿ ಮಹೇಶ್ ಚಂದ್ರ ಗುರು ಅವರು ಸಂಪೂರ್ಣ ಬೆಂಬಲ ಸೂಚಿಸಿದರು.

ಮೈಸೂರು ವಿಶ್ವವಿದ್ಯಾನಿಲಯದ ವಿವಿಧ ಕಛೇರಿ, ಕಾಲೇಜು ಸ್ನಾತಕೋತ್ತರ ಕೇಂದ್ರಗಳು ಮತ್ತು ವಿದ್ಯಾರ್ಥಿನಿಯಗಳಲ್ಲಿ 215 ಕ್ಕೂ ಹೆಚ್ಚು ಪೌರಕಾರ್ಮಿಕರು ವಿವಿಧ ಬೇಡಿಕೆಯನ್ನು ಆಗ್ರಹಿಸಿ ಸತತವಾಗಿ ಮೂರು ದಿನಗಳಿಂದ ಮಾನಸಗಂಗೋತ್ರಿಯ ಕುವೆಂಪು ಪುತ್ಥಳಿಯ ಬಳಿ ಪ್ರತಿಭಟನೆ ಕೈಗೊಂಡಿರುವ ಪೌರಕಾರ್ಮಿಕರ ಪರವಾಗಿ ಪ್ರೊ. ಮಹೇಶ್ ಚಂದ್ರ ಗುರು ಅವರ ನೇತೃತ್ವದಲ್ಲಿ ವಿದ್ಯಾರ್ಥಿಗಳು ಹೋರಾಟ ನಡೆಸಿದರು.

ಈ ಕುರಿತು ಸುಮಾರು 14 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ. ಇಂದು ಮೈಸೂರು ವಿವಿಯ ಪರಿಸರವನ್ನು ಶುಚಿಯಾಗಿಡುವಲ್ಲಿ ಪೌರಕಾರ್ಮಿಕರ ಪಾತ್ರ ಮಹತ್ವವಾದದ್ದು. ಇವರಿಗೆ ಅಗತ್ಯ ಸೌಲಭ್ಯ ಒದಗಿಸುವುದು ವಿವಿ ಕರ್ತವ್ಯ. ಆದರೆ ದಶಕಗಳಿಂದಲೂ ಸಾಮಾಜಿಕವಾಗಿ ತುಳಿತಕ್ಕೊಳಗಾಗಿರುವ ತಳಸಮುದಾಯ ಹಾಗೂ ದುಡಿಯುವ ವರ್ಗದ ವಿರುದ್ಧವಾದ ಧೋರಣೆ ಹೊಂದಿರುವುದು ದುರದೃಷ್ಟರ ಸಂಗತಿ ಎಂದು ವಿಷಾದ ವ್ಯಕ್ತಪಡಿಸಿದರು.

ಮೂಲಸೌಕರ್ಯವನ್ನು ಕೇಳುವುದು ಭಾರತೀಯ ಪ್ರತಿಯೊಬ್ಬ ಪ್ರಜೆಯ ಹಕ್ಕು, ಯಾರಿಗೂ ಎದೆಗುಂದದೆ ನಿಮ್ಮ ಹಕ್ಕನ್ನು ಚಲಾಯಿಸಿ. ನಿಮ್ಮ ಹೋರಾಟವನ್ನು ಮೊಟಕುಗೊಳಿಸಲು ಯತ್ನಿಸಿದವರಿಗೆ ಪೊರಕೆಯಿಂದ ಹೊಡೆದು ಪಾಠ ಹೇಳಿ ಎಂದು ನುಡಿದರು.

ಈ ಸಂದರ್ಭದಲ್ಲಿ ಮಾನಸ ಗಂಗೋತ್ರಿಯ ವಿವಿಧ ವಿಭಾಗದ ವಿದ್ಯಾರ್ಥಿಗಳು ಹಾಗೂ ಸಂಶೋಧನಾರ್ಥಿಗಳು ಸಾಂಕೇತಿಕವಾಗಿ ಪಾಲ್ಗೊಂಡಿದ್ದರು.

ವರದಿ – ಚಂದ್ರಶೇಖರ್ ಬಿ.ಎನ್

NO COMMENTS

LEAVE A REPLY